ಬಿಹಾರ ಚುನಾವಣಾ ಅಕ್ರಮ: ಕಾಂಗ್ರೆಸ್ ಸಲ್ಲಿಸಿದ 89 ಲಕ್ಷ ದೂರುಗಳನ್ನು ತಿರಸ್ಕರಿಸಿದ್ದು ಏಕೆ? ಪವನ್‌ ಖೇರಾ ಪ್ರಶ್ನೆ

ಪಟನಾ: ನವಂಬರ್‌ ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಮತದರಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ ಐ ಆರ್‌) ನಡೆಯುತ್ತಿರುವಾಗಲೇ ಕಾಂಗ್ರೆಸ್‌ ಪಕ್ಷದ ಬೂತ್‌ ಮಟ್ಟದ ಏಜೆಂಟರು (ಬಿ ಎಲ್‌ ಎ) ಮತದಾರರ ಪಟ್ಟಿ ಸಿದ್ಧಪಡಿಸುವಾಗ ಸಂಭವಿಸಿರುವ ದೋಷಗಳನ್ನು ಕುರಿತು 89 ಲಕ್ಷ ದೂರುಗಳನ್ನು ಸಲ್ಲಿಸಿದ್ದಾರೆ. ಆದರೆ, ಕೇಂದ್ರ ಚುನಾವಣಾ ಆಯೋಗವು ಆ ದೂರುಗಳೆಲ್ಲವನ್ನೂ ತಿರಸ್ಕರಿಸಿದೆ ಎಂದು ಕಾಂಗ್ರೆಸ್‌ ಗಂಭೀರ ಆಪಾದನೆ ಮಾಡಿದೆ.

ಪಕ್ಷದ ಮುಖಂಡ ಪವನ್‌ ಖೇರಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಚುನಾವಣಾ ಆಯೋಗ ಹೇಗೆ ಪಕ್ಷಪಾತಿಯಾಗಿ ನಡೆದುಕೊಳ್ಳುತ್ತಿರುವುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿದೆ ಎಂದರು.

ಚುನಾವಣಾ ಅಕ್ರಮಗಳು ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಶಂಕೆ ಮೂಡಿಸುತ್ತಿವೆ. ಆದ್ದರಿಂದ ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಮತ್ತೊಮ್ಮೆ ಹೊಸದಾಗಿ ನಡೆಸಬೇಕು. ಚುನಾವಣಾ ಆಯೋಗ ಯಾವುದೇ ರಾಜಕೀಯ ಪಕ್ಷದಿಂದ ದೂರು ಬಂದಿಲ್ಲ ಸುಳ್ಳು ಹೇಳುತ್ತಿದೆ. ಆದರೆ, ನಮ್ಮ ಕಾರ್ಯಕರ್ತರು ಕೊಟ್ಟ ಎಲ್ಲ ದೂರುಗಳನ್ನು ಸಾರಾಸಗಟಾಗಿ ತಿರಸ್ಕರಿಸಲಾಗಿದೆ ಎಂದು ಖೇರಾ ಆಪಾದಿಸಿದರು.

More articles

Latest article

Most read