ಬಿಹಾರ: ಮತಕಳ್ಳತನದ ಅನುಮಾನ ವ್ಯಕ್ತಪಡಿಸಿದ ಕಾಂಗ್ರೆಸ್‌

Most read

ನವದೆಹಲಿ: ಬಿಹಾರದಲ್ಲಿ ಎನ್‌ ಡಿಎ ಮೈತ್ರಿಕೂಟ ಬಹುಮತದತ್ತ ಸಾಗುತ್ತಿದ್ದು, ಮತ ಎಣಿಕೆ ಕುರಿತು ಕಾಂಗ್ರೆಸ್‌ ಅನುಮಾನ ವ್ಯಕ್ತಪಡಿಸಿದೆ.

ಬಿಹಾರ ಕಾಂಗ್ರೆಸ್‌ ಮುಖಂಡ ರಾಜೇಶ್‌ ರಾಮ್‌ ಪ್ರತಿಕ್ರಿಯೆ ನೀಡಿದ್ದು, ಆರಂಭಿಕ ಮತ ಎಣಿಕೆ ಮಂದಗತಿಯಲ್ಲಿ ಸಾಗುತ್ತಿದೆ. ಮತ ಎಣಿಕೆ ಪ್ರಕ್ರಿಯೆಯಲ್ಲಿ ಗಂಭೀರ ವ್ಯತ್ಯಾಸಗಳು ಕಂಡುಬರುತ್ತಿದ್ದು, ಮತಕಳ್ಳತನ ನಡೆಯುತ್ತಿರುವ ಶಂಕೆ ಇದೆ ಎಂದಿದ್ದಾರೆ.

ಬಿಹಾರ ಆಡಳಿತಾರೂಢ ಎನ್‌ ಡಿಎ ಸರ್ಕಾರ ಮತ ಕಳ್ಳತನ ಮಾಡಲು ಹವಣಿಸುತ್ತಿದೆ. ಮತ ಎಣಿಕೆ ಕೇಂದ್ರಗಳ ಸುತ್ತ ಸರ್ವರ್ ವ್ಯಾನ್ ಗಳು ಕಂಡು ಬಂದಿವೆ. ಇದು ಅನುಮಾನ ಮೂಡಿಸಿದೆ ಎಂದಿದ್ದಾರೆ.

ಮಹಾರಾಷ್ಟ್ರ ಹರಿಯಾಣ ಮೊದಲಾದ ರಾಜ್ಯಗಳಲ್ಲಿ ಮತ ಕಳ್ಳತನ ನಡೆದಿರುವುದು ಸಾಬೀತಾಗಿದೆ. ಬಿಹಾರದಲ್ಲೂ  ಪ್ರತಿಪಕ್ಷಗಳ ಮತ ಕಳ್ಳತನವಾಗಿರುವುದು ಸ್ಪಷಟವಾಗಿ ಗೋಚರಿಸುತ್ತಿದೆ ಎಂದು ಅವರು ಸಂದರ್ಶನವೊಂದರಲ್ಲಿ  ತಿಳಿಸಿದ್ದಾರೆ.

ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಅಢಳಿತಾರೂಢ ಎನ್‌ಡಿಎ ಮೈತ್ರಿಕೂಟ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡಿದೆ. ಎನ್‌ಡಿಎ ಒಕಕೂಟ 166 ಸ್ಥಾನಗಳಲ್ಲಿ ಮುನ್ನೆಡೆ ಸಾಧಿಸಿದ್ದರೆ  ಮಹಾಘಟಬಂಧನ 56 ಸ್ಥಾನಗಳಲ್ಲಿ ಮಾತ್ರ ಮುಂದಿದೆ.

More articles

Latest article