Wednesday, May 22, 2024

ಬಿಗ್ ಬಾಸ್ ಮನೆಯಿಂದ ವಿನಯ್ ಗೌಡ ಎಲಿಮಿನೇಟ್: ಟಾಪ್ 3ನಲ್ಲಿ ಸಂಗೀತಾ, ಕಾರ್ತಿಕ್​, ಡ್ರೋನ್

Most read

ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಕಡೇ ಅಂತ ತಲುಪಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಈ ಶೋಗೆ ಅಪಾರ ಜನಮನ್ನಣೆ ದೊರಕಿದೆ. ಇಂದು ಫೈನಲ್ ಶೋ ಇದ್ದು ಬಿಗ್ ಬಾಸ್ ಆನೆ ಎಂದೇ ಖ್ಯಾತರಾಗಿದ್ದ ವಿನಯ್ ಗೌಡ ಮನೆಯಿಂದ ಹೊರಬಂದಿದ್ದಾರೆ.

ಹೌದು, ಬಿಗ್ ಬಾಸ್​ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದ್ದು, 5 ಮಂದಿಯಲ್ಲಿ ಒಬ್ಬೊಬ್ಬರೆ ಹೊರಗೆ ಹೋಗ್ತಿದ್ದಾರೆ. ಇಂದು ಮೊದಲು ವರ್ತೂರ್ ಸಂತೋಷ್ ಹೊರಗಡೆ ನಡೆದರೆ. ಅವರಿಂದೆ ವಿಜನ್ ಗೌಡ ಕೂಡ ದೊಡ್ಡ ಮನೆಯಿಂದ ಹೊರಗಡೆ ನಡೆದಿದ್ದಾರೆ.

ಸಂಗೀತಾ, ವಿನಯ್, ಕಾರ್ತಿಕ್​ ಮಹೇಶ್​, ಡ್ರೋನ್ ಪ್ರತಾಪ್​ ಹಾಗೂ ತುಕಾಲಿ ಸಂತೋಷ್, ವರ್ತೂರು ಸಂತೋಷ್ ಬಿಗ್ ಫಿನಾಲೆಗೆ ಬಂದಿದ್ದಾರೆ. ಈ ಬಾರಿ 6 ಮಂದಿ ಫೈನಲಿಸ್ಟ್​ ಆಗಿದ್ದರು.

6 ಫೈನಲಿಸ್ಟ್​ಗಳಲ್ಲಿ ಶನಿವಾರ ಕಾಮಿಡಿ ನಟ ತುಕಾಲಿ ಸಂತೋಷ್ ಮೊದಲು ಎಲಿಮಿನೇಟ್ ಆದರೆ. ಇಂದು ಭಾನುವಾರ ವರ್ತೂರ್ ಸಂತೋಷ್ ಹಾಗೂ ವಿನಯ್ ಗೌಡ ಎಲಿಮಿನೇಟ್ ಆಗಿದ್ದಾರೆ.

ಈಗ ಟಾಪ್ 3 ನಲ್ಲಿ ಸಂಗೀತಾ, ಕಾರ್ತಿಕ್​ ಮಹೇಶ್​ ಮತ್ತು ಡ್ರೋನ್ ಪ್ರಥಾಪ್ ಇದ್ದು, ಸ್ನೇಹಿತರ ನಡುವೆಯೇ ಈಗ ಗೆಲುವಿಗಾಗಿ ಗುದ್ದಾಟ ನಡೆಸುತ್ತಿದ್ದಾರೆ.

More articles

Latest article