ಸುದೀಪ್ ಕಡೆಯಿಂದ ಮ್ಯಾಕ್ಸ್ ಬಗ್ಗೆ ಸಿಕ್ತು ಬಿಗ್ ಅಪ್ಡೇಟ್

Most read

ಕಿಚ್ಚ ಸುದೀಪ್ ಅಭಿಮಾನಿಗಳು ಅವರ ಸಿನಿಮಾಕ್ಕಾಗಿ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಯಾಕಂದ್ರೆ ಸುದೀಪ್ ಅವರ ವಿಕ್ರಾಂತ್ ರೋಣ ರಿಲೀಸ್ ಆಗಿ ಎರಡು ವರ್ಷವಾಗಿದೆ. ಅದಾದ ಮೇಲೆ ಸುದೀಪ್ ಕ್ರಿಕೆಟ್, ಬಿಗ್ ಬಾಸ್ ಅಂತ ಬ್ಯುಸಿಯಾಗೋದ್ರು. ಅಭಿಮಾನಿಗಳಂತು ಕುಂತ್ರೆ ನಿಂತ್ರೆ ಸಿನಿಮಾ ಬಗ್ಗೆ ಕೇಳ್ತಾ ಇದ್ರು. ಕಳೆದ ವರ್ಷ ಮ್ಯಾಕ್ಸ್ ಸಿನಿಮಾ ಘೋಷಣೆ ಮಾಡಿದರು. ಅದರ ಜೊತೆಗೆ ಮೂರು ಸಿನಿಮಾಗಳ ಕಥೆ ಕೇಳಿದ್ದೀನಿ ಅಂತ ಕೂಡ ಹೇಳಿದ್ರು. ಇದೀಗ ಸುದೀಪ್ ಮ್ಯಾಕ್ಸ್ ಸಿನಿಮಾದ ಬಿಗ್ ಅಪ್ಡೇಟ್ ನೀಡಿದ್ದಾರೆ.

ಮ್ಯಾಕ್ಸ್ ಸಿನಿಮಾ ಬಗ್ಗೆ ಸಿನಿಮಾದ ನಿರ್ದೇಶಕರಿಂದಾಗಲೀ, ನಿರ್ಮಾಪಕರಿಂದಾಗಲಿ ಅಪ್ಡೇಟ್ ಸಿಕ್ಕಿರಲಿಲ್ಲ. ಆದರೆ ಈಗ ಕಿಚ್ಚ ಸುದೀಪದ ವಿಡಿಯೋ ಒಂದನ್ನು ರಿಲೀಸ್ ಮಾಡುವ ಮೂಲಕ ಬಿಗ್ ಅಪ್ಡೇಟ್ ನೀಡಿದ್ದಾರೆ. ಈ ವಿಡಿಯೋ ನೋಡಿದಾಗಲೇ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಮ್ಯಾಕ್ಸ್ ಸಿನಿಮಾದ ಚಿತ್ರೀಕರಣ ಮುಗಿದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಟ್ವಿಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಕಿಚ್ಚ ಸುದೀಪ್, ತಾವೂ ತಂಗಿದ್ದ ಹೊಟೇಲ್ ನ ಪರಿಸರ, ಆ ನಂತರ ತಾವೂ ಪ್ರತಿದಿನ ಓಡಾಡುವ ದಾರಿಯ ವಿಡಿಯೋ, ಸಿನಿಮಾ ಶೂಟಿಂಗ್ ಸೆಟ್, ಸೆಟ್ ಒಳಗೆ ತಮ್ಮ ಮೇಕಪ್ ರೂಂ ಸೇರಿದಂತೆ ಮ್ಯಾಕ್ಸ್ ಸೆಟ್ ನಲ್ಲಿ ಏನೆಲ್ಲಾ ವಿಶೇಷತೆಗಳನ್ನು ತೋರಿಸಬಹುದೋ ಅದೆಲ್ಲವನ್ನು ತೋರಿಸಿದ್ದಾರೆ. ಈ ವಿಡಿಯೋ ಜೊತೆಗೆ ಚಿತ್ರೀಕರಣದ ಅನುಭವವನ್ನು ಬರೆದಿದ್ದಾರೆ. ‘ಮಹಾಬಲಿಪುರಂನಲ್ಲಿ ಮ್ಯಾಕ್ಸ್ ಚಿತ್ರದ ಚಿತ್ರೀಕರಣವನ್ನು ಮುಗಿಸಿದೆವು. ಹತ್ತು ತಿಂಗಳ ಸುದೀರ್ಘ ಪಯಣ ಇದಾಗಿತ್ತು. ಈ ಹತ್ತು ತಿಂಗಳ ಪಯಣದ ಪ್ರತಿ ನಿಮಿಷವನ್ನು ನಾನು ಎಂಜಾಯ್ ಮಾಡಿದ್ದೇನೆ. ಅದ್ಭುತವಾದ ತಂಡ ಹಾಗೂ ಕಲಾವಿದರೊಟ್ಟಿಗೆ ಈ ಹತ್ತು ತಿಂಗಳು ಕೆಲಸ ಮಾಡಿದೆ. ಚಿತ್ರೀಕರಣ ಸುಗಮವಾಗಿ ಸಾಗಲು ನೆರವಾದ ಧನು ಅವರಿಗೆ ಧನ್ಯವಾದ ಎಂದಿದ್ದಾರೆ ಕಿಚ್ಚ ಸುದೀಪ್.

More articles

Latest article