15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸ ಇಂದಿಗೆ ಕೊನೆಗೊಂಡಿದ್ದು, ಪ್ರಶಸ್ತಿ ಪ್ರಕಟಗೊಂಡಿದೆ. ಕನ್ನಡದ ನಿರ್ವಾಣಕ್ಕೆ ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು ,15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2024ರಲ್ಲಿ ಜೀವನ ಸಾಧನೆಗೆ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಎಂ.ಎಸ್ ಸತ್ಯುಗೆ ನೀಡಲಾಗಿರೋದಾಗಿ ತಿಳಿಸಿದೆ.
ಪ್ರಶಸ್ತಿ ಪಡೆದ ಚಿತ್ರಗಳ ಪಟ್ಟಿ
- ಕನ್ನಡ ಚನಚಿತ್ರ ಸ್ಪರ್ಧೆಯಲ್ಲಿ ಮೊದಲ ಅತ್ಯುತ್ತಮ ಚಿತ್ರ – ನಿರ್ವಾಣ. ನಿರ್ದೇಶನ-ಅಮರ್.ಎಲ್, ನಿರ್ಮಾಣ-ಕೆ.ಮಂಜು ಅವಿನಾಶ್ ಶೆಟ್ಟಿ.
- ಎರಡನೇ ಅತ್ಯುತ್ತಮ ಚಿತ್ರ – ಕಂದೀಲು. ನಿರ್ದೇಶನ, ನಿರ್ಮಾಣ- ಕೆ ಯಶೋಧ ಪ್ರಕಾಶ್
- ಮೂರನೇ ಅತ್ಯುತ್ತಮ ಚಿತ್ರ – ಆಲಿಂಡಿಯಾ ರೇಡಿಯೋ. ನಿರ್ದೇಶನ -ರಾಮಸ್ವಾಮಿ, ನಿರ್ಮಾಣ- ದೇವಗಂಗಾ ಪ್ರೇಮ್ಸ್.
- ತೀರ್ಪುಗಾರರ ವಿಶೇಷ ಉಲ್ಲೇಖ – ಕ್ಷೇತ್ರಪತಿ. ನಿರ್ದೇಶನ-ಶ್ರೀಕಾಂತ ಕಟಗಿ, ನಿರ್ಮಾಣ-ಅಶ್ಗ ಕ್ರಿಯೇಶನ್ಸ್.
- ನೆಟ್ ಪ್ಯಾಕ್ ತೀರ್ಪುಗಾರರ ಪ್ರಶಸ್ತಿ – ಸ್ವಾತಿ ಮುತ್ತಿನ ಮಳೆಹನಿಯೇ. ನಿರ್ದೇಶನ -ರಾಜ್ ಬಿ ಶೆಟ್ಟಿ, ನಿರ್ಮಾಣ-ರಮ್ಯ( ಆಪಲ್ ಬಾಕ್ಸ್ ಸ್ಟುಡಿಯೋಸ್).
ಭಾರತೀಯ ಚಲನಚಿತ್ರ ಸ್ಪರ್ಧೆಯ ವಿಜೇತ ಚಿತ್ರಗಳ ಪಟ್ಟಿ
- ಮೊದಲ ಅತ್ಯುತ್ತಮ ಚಿತ್ರ- ಶ್ಯಾಮ್ಚಿ ಆಯಿ. ನಿರ್ದೇಶನ-ಸುಜಯ್ ದಹಕೆ, ನಿರ್ಮಾಣ – ಪುಣೆ ಫಿಲಂ ಕಂಪನಿ(ಪ್ರೈ) ಲಿ.
- ಎರಡನೇ ಅತ್ಯುತ್ತಮ ಚಿತ್ರ- ಅಯೋಥಿ. ನಿರ್ದೇಶನ-ಮಂಥಿರಾಮೂರ್ತಿ, ನಿರ್ಮಾಣ-ಆರ್ ರವೀಂದ್ರನ್.
- ಮೂರನೇ ಅತ್ಯುತ್ತಮ ಚಿತ್ರ- ಛಾವೆರ್. ನಿರ್ದೇಶನ- ತನು ಪಾಪಚ್ಚನ್, ನಿರ್ಮಾಣ – ಅರುಣ್ ನಾರಾಯಣ ಪ್ರೊಡಕ್ಷನ್ಸ್.
- ಫಿಪ್ರೆಸ್ಕಿ ಪ್ರಶಸ್ತಿ – ಶ್ಯಾಮ್ಚಿ ಆಯಿ.
ಏಷ್ಯನ್ ಚಲನಚಿತ್ರ ಸ್ಪರ್ಧೆ ಪ್ರಶಸ್ತಿ ವಿಚೇತ ಚಿತ್ರಗಳ ಪಟ್ಟಿ
- ಮೊದಲ ಅತ್ಯುತ್ತಮ ಚಿತ್ರ- ಇನ್ಯಲ್ಲಾಹ್ ಎ ಬಾಯ್. ಬೋರ್ಡನ್. ನಿರ್ದೇಶನ-ಅಮ್ಮದ್ ಅಲ್ ರಶೀದ್, ನಿರ್ಮಾಣ-ಇಮೇಜಿನೇರಿಯಂ ಫಿಲಂಸ್, ಜಾರ್ಜಸ್ ಫಿಲಂಸ್.
- ಎರಡನೇ ಅತ್ಯುತ್ತಮ ಚಿತ್ರ – ಸ್ಥಳ್. ಇಂಡಿಯನ್. ನಿರ್ದೇಶನ- ಜಯಂತ್ ದಿಗಂಬರ್ ಸೋಮಾಲ್ಕರ್, ನಿರ್ಮಾಣ-ಧುನ್.
- ಮೂರನೇ ಅತ್ಯುತ್ತಮ ಚಿತ್ರ- ಸಂಡೇ. ಉಜ್ಖೆಕಿಸ್ತಾ. ನಿರ್ದೇಶನ-ಶೋಕಿರ್ ಕೊಲಿಕೊವ್. ನಿರ್ಮಾಣ- ಫಿರ್ದಾಪಾಸ್ ಅಬ್ದುಕೊಲಿಕೊವ್.
- ತೀರ್ಪುಗಾರರ ವಿಶೇಷ ಉಲ್ಲೇಖ – ಮಿಥ್ಯ. ನಿರ್ದೇಶನ-ಸುಮಂತ್ ಭಟ್. ನಿರ್ಮಾಣ- ಪರಂವಃ ಫಿಕ್ಚರ್ಸ್.