ಉತ್ತರಪ್ರದೇಶದಲ್ಲಿ ಶಿಕ್ಷಕರ ಹುದ್ದೆಗಾಗಿ ಯುವಜನರು ಎರಡು ವರ್ಷಗಳಿಂದ ಅಲೆದಾಡುತ್ತಿದ್ದಾರೆ. ಪ್ರತಿದಿನ ಅವರ ಪ್ರತಿಭಟನಾ ಪ್ರದರ್ಶನದ ಫೋಟೋ ಬರುತ್ತದೆ. ಅವರಿಗೆ ಬಿಜೆಪಿ ಸರಕಾರ ಪೊಲೀಸರಿಂದ ಹೊಡೆಸುತ್ತದೆ. ಆಮೇಲೆ ವಾಹನದಲ್ಲಿ ಅವರನ್ನು ತುಂಬಿ ದೂರ ಎಸೆಯುತ್ತದೆ. ಈ ಅನ್ಯಾಯದ ಬಗ್ಗೆ ಮಾಧ‍್ಯಮ ಮಾತನಾಡುವುದಿಲ್ಲ. ಅಲ್ಲಿ ಚರ್ಚೆ ನಡೆಯುವುದಿಲ್ಲ – ರಾಹುಲ್ ಗಾಂಧಿ
ರಾಹುಲ್ ಗಾಂಧಿ ನೇತೃತ್ವದ ನ್ಯಾಯ ಯಾತ್ರೆಯು ಇಂದೂ ಉತ್ತರಪ್ರದೇಶದಲ್ಲಿ ಮುಂದುವರಿದಿದೆ. ಈ ಹಿಂದಿನ ಇಂದಿರಾಗಾಂಧಿಯವರ ಕ್ಷೇತ್ರವಾದ ರಾಯಬರೇಲಿ ಮೂಲಕ ಲಕ್ನೋ ತಲಪಿದೆ.
ಇಂದಿನ (20.02.2024) ಕಾರ್ಯಕ್ರಮ ವಿವರ ಹೀಗಿದೆ. ಮಧ್ಯಾಹ್ನ 2.00 ಗಂಟೆಗೆ ಯಾತ್ರೆ ಪುನರಾರಂಭ. ಉತ್ತರಪ್ರದೇಶದ ಅಮೇಠಿಯ ಫುರಸತ್ ಗಂಜ್ ನಿಂದ. ಡಿಗ್ರಿ ಕಾಲೇಜ್ ಚೌರಾಹ, ರಾಯಬರೇಲಿ ಅಂಬೇಡ್ಕರ್ ಚೌರಾಹ, ಸೂಪರ್ ಮಾರ್ಕೆಟ್ ಮಾರ್ಗವಾಗಿ. ಬಳಿಕ ಸಾರ್ವಜನಿಕ ಸಭೆ. ಸಂಜೆ 4.30 ಕ್ಕೆ ಸ್ವಾಗತ ಕಾರ್ಯಕ್ರಮ ಲಕ್ನೋದ ಕೆಕೆಸಿ ಡಿಗ್ರಿ ಕಾಲೇಜ್ ನಲ್ಲಿ. 6.00 ಕ್ಕೆ ಸಾರ್ವಜನಿಕ ಸಭೆ ಲಕ್ನೋ ಕ್ಲಾಕ್ ಟವರ್ ಬಳಿ. ಯಾತ್ರೆ ಪುನರಾರಂಭ. ಅವಧ ಆಸ್ಪತ್ರೆ ಚೌರಾಹ – ಆಲಂ ಭಾಗ್ – ಚಾರ್ ಭಾಗ್ – ನಾಕಾ ಚೌರಾಹ – ರಕಾಬಗಂಜ್ ಚೌರಾಹ – ರಾಜಾ ಬಾಜಾರ್ – ಮೆಡಿಕಲ್ ಕಾಲೇಜ್ ಚೌರಾಹ ಮಾರ್ಗವಾಗಿ. ರಾತ್ರಿ ವಿಶ್ರಾಂತಿ ಲಕ್ನೋ ಬಿಜನೋರ್ ರೋಡ್ ಮುಂದೆ ಭಂತ್ರಾ ಥಾನಾ.
ಯಾತ್ರೆಯ ಸಮಯದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಭಾರತದಲ್ಲಿ ನೀವು 200 ದೊಡ್ಡ ಕಂಪೆನಿಗಳನ್ನು ನೋಡಿದರೆ ಅಲ್ಲಿ ನಿಮಗೆ ಒಬಿಸಿ, ದಲಿತ, ಆದಿವಾಸಿ ಕಾಣಸಿಗಲಾರರು. ಅದೇ ನೀವು ಮನರೇಗಾ, ಗುತ್ತಿಗೆ ಕಾರ್ಮಿಕರ ಪಟ್ಟಿ ತೆಗೆದರೆ ಅಲ್ಲಿ ಕಾಣುವುದು ಒಬಿಸಿ, ದಲಿತ, ಆದಿವಾಸಿಗಳು ಮಾತ್ರ. ದೇಶದ ಮಕ್ಕಳಲ್ಲಿ ನೀವು ಚೆನ್ನಾಗಿ ಓದಿ, ಆಗ ನಿಮಗೆ ಉದ್ಯೋಗ ಸಿಗುತ್ತದೆ ಎಂದು ಹೇಳಲಾಗುತ್ತದೆ. ಓದಿಗಾಗಿ ಲಕ್ಷಾಂತರ ಖರ್ಚು ಮಾಡಿದ ನಂತರ ಪರೀಕ್ಷೆ ಬಂದಾಗ ಪೇಪರ್ ಲೀಕ್ ಆಗಿರುತ್ತದೆ. ನಿಮಗೆ ಉದ್ಯೋಗ ಸಿಗುವುದಿಲ್ಲ. ಆದರೆ ಕೆಲವರಿಗೆ ಶ್ರಮಿಸದೆಯೇ ಉದ್ಯೋಗ ಸಿಗುತ್ತದೆ. ಇದು ಯುವಜನತೆಯ ಭವಿಷ್ಯ!
ಜಾತಿ ಗಣತಿಯು ಭಾರತದ ಪಾಲಿಗೆ ಕ್ರಾಂತಿಕಾರಿ ಹೆಜ್ಜೆಯಾಗಲಿದೆ. ಉತ್ತರಪ್ರದೇಶದಲ್ಲಿ ಶಿಕ್ಷಕರ ಹುದ್ದೆಗಾಗಿ ಯುವಜನರು ಎರಡು ವರ್ಷಗಳಿಂದ ಅಲೆದಾಡುತ್ತಿದ್ದಾರೆ. ಪ್ರತಿದಿನ ಅವರ ಪ್ರತಿಭಟನಾ ಪ್ರದರ್ಶನದ ಫೋಟೋ ಬರುತ್ತದೆ. ಅವರಿಗೆ ಬಿಜೆಪಿ ಸರಕಾರ ಪೊಲೀಸರಿಂದ ಹೊಡೆಸುತ್ತದೆ. ಆಮೇಲೆ ವಾಹನದಲ್ಲಿ ಅವರನ್ನು ತುಂಬಿ ದೂರ ಎಸೆಯುತ್ತದೆ. ಈ ಅನ್ಯಾಯದ ಬಗ್ಗೆ ಮಾಧ‍್ಯಮ ಮಾತನಾಡುವುದಿಲ್ಲ. ಅಲ್ಲಿ ಚರ್ಚೆ ನಡೆಯುವುದಿಲ್ಲ. ಉತ್ತರಪ್ರದೇಶದ ಎಲ್ಲೇ ನೋಡಿ, ನಿರುದ್ಯೋಗ, ಬೆಲೆ ಏರಿಕೆ, ಪೇಪರ್ ಲೀಕ್ ಪೋಸ್ಟರ್ ಕಾಣಿಸುತ್ತದೆ. ನೀವು ನಿಮ್ಮ ಹಣ ಖರ್ಚು ಮಾಡಿ ಓದುತ್ತೀರಿ, ಆದರೆ ಪರೀಕ್ಷೆ ಬರುವಾಗ 1% ಜನರು ಪ್ರಶ್ನೆ ಪತ್ರಿಕೆ ಕದ್ದಿರುತ್ತಾರೆ.
ಸೇನೆಯ ಬಜೆಟ್ ನಿಂದ ಅಗ್ನಿವೀರರಿಗೆ ಹೋಗಬೇಕಾದ ಹಣ ಮೋದಿಯವರ ಮಿತ್ರರಿಗೆ ಹೋಗುತ್ತಿದೆ. ಇದೇ ಮಾತನ್ನು ನಾನು ಸಂಸತ್ತಿನಲ್ಲಿ ಹೇಳಿದ್ದೇ ತಡ ನನ್ನನ್ನು ಹೊರಹಾಕಿದರು. ನನ್ನ ಸಂಸತ್ ಸದಸ್ಯತ್ವ ರದ್ದು ಮಾಡಿದರು. ಈ ದೇಶ ರೈತರದ್ದು, ಕಾರ್ಮಿಕರದ್ದು, ಯುವಜನತೆಯದ್ದು. ಎಚ್ಚರಗೊಳ್ಳಿ, ನಿಮ್ಮ ಹಕ್ಕುಗಳಿಗಾಗಿ ಹೋರಾಡಿ. ನಾನು ಇಲ್ಲಿಗೆ ಬರುವ ಮುನ್ನವೇ ನೀವು ಸಾವಿರಾರು ಪ್ರೀತಿಯ ಅಂಗಡಿಗಳನ್ನು ತೆರೆದಿದ್ದೀರಿ. ಇದು ದ್ವೇಷದ್ದಲ್ಲ, ಪ್ರೀತಿ ಮತ್ತು ಸಹೋದರತ್ವದ ದೇಶ. ಹಿಂದಿನ ಬಾರಿ ನಾವು ಸಮುದ್ರದಿಂದ ಹಿಮಾಲಯ ತನಕ ಭಾರತ ಜೋಡೋದಲ್ಲಿ ನಡೆದಿದ್ದೆವು. ಈಗ ಯಾತ್ರೆಯು ಮಣಿಪುರದಿಂದ ಮುಂಬೈ ತನಕ ನಡೆಯುತ್ತಿದೆ. ನಾನು ಇಂದು ಲಕ್ನೋದಲ್ಲಿ ನಿಮ್ಮ ಮುಂದೆ ಹಾಜರಾಗಿದ್ದೇನೆ” ಎಂದರು.
ಶ್ರೀನಿವಾಸ ಕಾರ್ಕಳ, ಮಂಗಳೂರು
ಯಾತ್ರೆ-37 – ಭಾರತ್ ಜೋಡೋ ನ್ಯಾಯ ಯಾತ್ರೆ | 37ನೆಯ ದಿನ