Sunday, September 8, 2024

ಭಾರತ್ ಜೋಡೋ ನ್ಯಾಯ ಯಾತ್ರೆ- 51ನೆಯ ದಿನ

Most read

ದೇಶದ ಜನರ ಕಿಸೆಗೆ ಹಣ ಬರಬೇಕು, ನಿಮಗೆ ಬ್ಯಾಂಕ್ ಬಾಗಿಲು ತೆರೆಯಬೇಕು, ನಿಮ್ಮ ಸಾಲ ಮನ್ನಾ ಆಗಬೇಕು, ನಿಮಗೆ ಉದ್ಯೊಗ ಸಿಗಬೇಕು, ದೇಶದಲ್ಲಿ ಬೆಲೆ ಏರಿಕೆ ತಗ್ಗಬೇಕು, ಇದೇ ಕಾರಣಕ್ಕೆ ನಾವು ಭಾರತ ಜೋಡೋ ನ್ಯಾಯ ಯಾತ್ರೆ ಶುರುಮಾಡಿದ್ದೇವೆ” -ರಾಹುಲ್ ಗಾಂಧಿ

ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆ ಮಧ‍್ಯಪ್ರದೇಶದಲ್ಲಿ ಮುಂದುವರಿದಿದೆ.

ಯಾತ್ರೆಯ ಇಂದಿನ (04.03.2024) ಕಾರ್ಯಕ್ರಮಗಳು ಹೀಗಿದ್ದವು.  ಬೆಳಿಗ್ಗೆ 9.15 ಕ್ಕೆ ಶಿವಪುರಿಯ ಬಾಬು ಕ್ವಾರ್ಟರ್ ರೋಡ್ ನಿಂದ ಯಾತ್ರೆ ಮತ್ತೆ ಶುರುವಾಗುತ್ತದೆ. 9.40 ಕ್ಕೆ ಝಾನ್ಸಿ ತಿರಾಹದಲ್ಲಿ ಸಾರ್ವಜನಿಕ ಭಾಷಣ. 11.00 ಕ್ಕೆ ಎಚ್ ಪಿ ಪೆಟ್ರೋಲ್ ಪಂಪ್, ಸೇತುವೆಯ ಮುಂಬಾಗ, ಸದಾ ಕಾಲನಿ ಚೌರಾಹ, ಅಂಡರ್ ಬ್ರಿಜ್ ನಿಂದ ರಾಘೋಘರ್ ತನಕ ಯಾತ್ರೆ ಸಾಗುತ್ತದೆ. 12.30 ಕ್ಕೆ ರಾಘೋಘರ್ ನ ಹೊಸ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಭಾಷಣ ಮತ್ತು ವಿರಾಮ. ಮಧ‍್ಯಾಹ್ನ 2.30 ಕ್ಕೆ ಬಿನಾಗಂಜ್ ನಿಂದ ನಿರ್ಗಮನ. 3.00 ಕ್ಕೆ ಬಿನಾಗಂಜ್ ನಿಂದ ವಯಾ ಬಯೋರಾ ಯಾತ್ರೆ ಮತ್ತೆ ಆರಂಭ. 4.15 ಪಿಪಲ್ ಚೌರಾಹ ಬಯೋರಾ ದಲ್ಲಿ ಸಾರ್ವಜನಿಕ ಭಾಷಣ. 5.15 ರಿಂದ 6.00 ರ ತನಕ ರೈತರೊಂದಿಗೆ ಸಂವಾದ. ರಾತ್ರಿ ವಿರಾಮ ಮಧ್ಯಪ್ರದೇಶ, ಭಟಕೋಡಿಯ ಪೆಟ್ರೋಲ್ ಪಂಪ್ ಬಳಿ.

ಜನರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ದೇಶದ ಅತಿದೊಡ್ಡ ವಿಷಯವೆಂದರೆ ನಿರುದ್ಯೋಗ, ಬೆಲೆ ಏರಿಕೆ, ಮತ್ತು ಭ್ರಷ್ಟಾಚಾರ. ಆದರೆ ಇವುಗಳ ಬಗ್ಗೆ ಟಿವಿಯಲ್ಲಿ ಎಂದೂ ತೋರಿಸುವುದಿಲ್ಲ. ಟಿವಿಯಲ್ಲಿ 24 ಗಂಟೆ ಅಂಬಾನಿ ಮದುವೆ, ಬಾಲಿವುಡ್ ಸ್ಟಾರ್ ಗಳನ್ನು ತೋರಿಸಲಾಗುತ್ತದೆ. ನಿಮ್ಮ ವಿಷಯ ಅಲ್ಲಿ ಯಾಕೆ ತೋರಿಸುವುದಿಲ್ಲ ಎಂದರೆ ಮೀಡಿಯಾದ ಮೇಲೆ ಜನಸಾಮಾನ್ಯರ ನಿಯಂತ್ರಣ ಇಲ್ಲ. ಅದು ಇರುವುದು ಬಿಲಿಯಾಧಿಪತಿಗಳ ನಿಯಂತ್ರಣದಲ್ಲಿ. ದೇಶದಲ್ಲಿ ಮೊದಲು ಯುವಜನರ ಬಳಿ ಪಬ್ಲಿಕ್ ಸೆಕ್ಟರ್, ಪೊಲೀಸ್, ಸೇನೆಗೆ ಹೋಗುವ ಅವಕಾಶ ಇತ್ತು. ಈಗ ಎಲ್ಲ ಮಾರ್ಗಗಳೂ ಬಂದ್ ಆಗಿವೆ. ಸೇನೆಯಲ್ಲಿ ಅಗ್ನಿವೀರ ಬಂದಿದೆ. ಪಬ್ಲಿಕ್ ಸೆಕ್ಟರ್ ಅನ್ನು ಖಾಸಗೀಕರಿಸಲಾಗಿದೆ. ದೇಶದ ದೊಡ್ಡ ದೊಡ್ಡ ಸಂಸ್ಥೆಗಳನ್ನು ಖಾಸಗಿಯವರ ಕೈಗೆ ಒಪ್ಪಿಸಲಾಗಿದೆ.

ಯುವಜನರು ಕಷ್ಟಪಟ್ಟು ಓದುತ್ತಾರೆ. ಆದರೆ ಪರೀಕ್ಷೆ ಬರೆಯಲು ಹೋಗುವಾಗ ಯಾರೋ ಶ್ರೀಮಂತ ವಿದ್ಯಾರ್ಥಿಯ ಬಳಿ ಲೀಕ್ ಆದ ಪ್ರಶ್ನೆ ಪತ್ರಿಕೆ ಇರುತ್ತದೆ. ಈ ಕಾರಣದಿಂದ ಬಡ ವಿದ್ಯಾರ್ಥಿಯ ಇಡೀ ವರ್ಷದ ಶ್ರಮ ಮತ್ತು ಸಮಯ ಹಾಳಾಗುತ್ತದೆ. ದೇಶದಲ್ಲಿ ನಿರುದ್ಯೋಗದ ಪರಿಸ್ಥಿತಿ ಇದು. ಜಾತಿಗಣತಿ ಸಾಮಾಜಿಕ ನ್ಯಾಯಕ್ಕೆ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ದೇಶದ ಜನರ ಕಿಸೆಗೆ ಹಣ ಬರಬೇಕು, ನಿಮಗೆ ಬ್ಯಾಂಕ್ ಬಾಗಿಲು ತೆರೆಯಬೇಕು, ನಿಮ್ಮ ಸಾಲ ಮನ್ನಾ ಆಗಬೇಕು, ನಿಮಗೆ ಉದ್ಯೊಗ ಸಿಗಬೇಕು, ದೇಶದಲ್ಲಿ ಬೆಲೆ ಏರಿಕೆ ತಗ್ಗಬೇಕು, ಇದೇ ಕಾರಣಕ್ಕೆ ನಾವು ಭಾರತ ಜೋಡೋ ನ್ಯಾಯ ಯಾತ್ರೆ ಶುರುಮಾಡಿದ್ದೇವೆ” ಎಂದು ರಾಹುಲ್ ಗಾಂಧಿ ಹೇಳಿದರು.

ಶ್ರೀನಿವಾಸ ಕಾರ್ಕಳ, ಮಂಗಳೂರು

ಯಾತ್ರೆ-50ಭಾರತ್ ಜೋಡೋ ನ್ಯಾಯ ಯಾತ್ರೆ‌ – 50ನೆಯ ದಿನ

More articles

Latest article