Friday, December 6, 2024

ಸ್ಪ್ಯಾನಿಷ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ : ಫೆ.7 ಒಳಗೆ ಸಮಗ್ರ ಸ್ಥಿತಿ ವರದಿ ಕೇಳಿದ ಜಾರ್ಖಂಡ್ ಹೈಕೋರ್ಟ್

Most read

ಶುಕ್ರವಾರ ತಡರಾತ್ರಿ ಜಾರ್ಖಂಡ್ ನ ದುಮ್ಕಾ ಜಿಲ್ಲೆಯಲ್ಲಿ 35 ವರ್ಷದ ಸ್ಪ್ಯಾನಿಷ್ ಪ್ರವಾಸಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು , ಆಕೆಯ ಪತಿಯನ್ನು ಏಳು ಅತ್ಯಾಚಾರಿಗಳೂ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಾರ್ಖಂಡ್ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದೆ.

ಈ ಘಟನೆಯು ಹನ್ಸ್ದಿಹಾ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಮಹತ್ ಪ್ರದೇಶದಲ್ಲಿ ಸಂಭವಿಸಿದ್ದು, ಅತ್ಯಾಚಾರಕ್ಕೆ ಒಳಗಾದ ವಿದೇಶ ಮಹಿಳೆ ಹಾಗೂ ಹಲ್ಲೆಗೊಳಗಾದ ಪತಿ ಇಬ್ಬರೂ Instagram ಮೂಲಕ ತಮಗಾದ ಅನ್ಯಾಯವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿದೆ.

ವಿಡಿಯೋದಲ್ಲಿ, ನಾವು ಯಾರಿಂದಲೂ ಏನನ್ನು ಬಯಸುವುದಿಲ್ಲ ಆದರೆ ಈತರದ ಕೃತ್ಯ ಸಂಭವಿಸಿದೆ. ಏಳು ಪುರುಷರು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ನಮ್ಮ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ದರೋಡೆ ಮಾಡಿದ್ದಾರೆ. ನಾವು ಪೊಲೀಸರೊಂದಿಗೆ ಆಸ್ಪತ್ರೆಯಲ್ಲಿದ್ದೇವೆ. ಇದೆಲ್ಲವೂ ಭಾರತದಲ್ಲಿ ನಡೆದಿದೆ ಎಂದು ಹೇಳುತ್ತ ಬೇಸರ ವ್ಯಕ್ತಪಡಿಸಿದ್ದಾರೆ.

ರಾತ್ರಿ 11 ಗಂಟೆ ಸುಮಾರಿಗೆ ಪೊಲೀಸ್ ಗಸ್ತು ವಾಹನವನ್ನು ನಿಲ್ಲಿಸಿ ಮಹಿಳೆ ಸಹಾಯಕ್ಕಾಗಿ ಮನವಿ ಮಾಡಿದ್ದಾಳೆ. ಆಕೆಯ ಗಾಯಗಳು ಮತ್ತು ಆಕೆಯ ಗಂಡನ ಸ್ಥಿತಿಯನ್ನು ನೋಡಿದ ಪೊಲೀಸರು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹತ್ತಿರದ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದುಬಂದಿದೆ.

ಪೊಲೀಸ್ ವರದಿಯ ಪ್ರಕಾರ, ಹೆದ್ದಾರಿಯಿಂದ ಎರಡು ಕಿಲೋಮೀಟರ್ ದೂರದ ಅರೆಕಾಡಿನಲ್ಲಿ ದಂಪತಿ ಬೈಕರ್‌ಗಳಿಬ್ಬರು ವಿಶ್ರಾಂತಿ ಪಡೆಯಲು ಟೆಂಟ್ ಹಾಕಿಕೊಂಡಿದ್ದರು‌. ಕುರ್ಮಹತ್ ಗ್ರಾಮ ನಿರ್ಜನ ಪ್ರದೇಶವಾಗಿದ್ದು, ಟೆಂಟ್‌‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಪ್ರಕರಣದಲ್ಲಿ ಏಳು ಮಂದಿ ಭಾಗಿಯಾಗಿದ್ದು, ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರನ್ನು ಭಾನುವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸ್ಪ್ಯಾನಿಷ್ ದಂಪತಿ ಮೇಲೂ ಹಲ್ಲೆ ನಡೆಸಿ, ಆರೋಪಿಗಳು ₹10 ಸಾವಿರ ದೋಚಿದ್ದಾರೆ ಎನ್ನಲಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಶೋಧ ನಡೆಯುತ್ತಿದೆ ಎಂದು ದುಮ್ಕಾ ಪೊಲೀಸ್ ವರಿಷ್ಠಾಧಿಕಾರಿ ಖೇರ್ವಾರ್ ಸೋಮವಾರ ಹೇಳಿದರು.

ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡ ಕೋರ್ಟ್

ದುಮ್ಕಾದಲ್ಲಿ ಸ್ಪ್ಯಾನಿಷ್ ಮಹಿಳೆಯ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಜಾರ್ಖಂಡ್ ಹೈಕೋರ್ಟ್ ಸೋಮವಾರ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದೆ. ಘಟನೆಯ ಬಗ್ಗೆ ಗುರುವಾರದೊಳಗೆ ಫೆ.7ರ ಒಳಗೆ ಸಮಗ್ರ ಸ್ಥಿತಿ ವರದಿಯನ್ನು ಸಲ್ಲಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದೆ.

ಮಾಧ್ಯಮ ವರದಿಗಳನ್ನು ಪರಿಗಣಿಸಿ, ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ನವನೀತ್ ಕುಮಾರ್ ಅವರು, ಡುಮ್ಕಾ ಎಸ್ಪಿ ಜೊತೆಗೆ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು ಮತ್ತು ಗೃಹ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಿದೆ.

ಇದೇ ವೇಳೆ ಸಂತ್ರಸ್ತರಿಗೆ ₹ 10 ಲಕ್ಷ ಪರಿಹಾರ ನೀಡಲು ಜಿಲ್ಲಾ ನ್ಯಾಯಾಧೀಶರ ಅಧ್ಯಕ್ಷತೆಯ ಸಂತ್ರಸ್ತ ಪರಿಹಾರ ಸಮಿತಿ ಅನುಮೋದನೆ ನೀಡಿದೆ . ಈ ಮೊತ್ತವನ್ನು ಯುರೋಗಳಾಗಿ ಪರಿವರ್ತಿಸಿ ಆಕೆಯ ಪತಿಯ ಖಾತೆಗೆ ವರ್ಗಾಯಿಸಲಾಗುವುದು ಎಂದು ದುಮ್ಕಾ ಜಿಲ್ಲಾಧಿಕಾರಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಬ್ರೆಜಿಲ್ ಪೌರತ್ವವನ್ನು ಹೊಂದಿರುವ ಸ್ಪ್ಯಾನಿಷ್ ಮಹಿಳೆ, ಪಶ್ಚಿಮ ಬಂಗಾಳದಿಂದ ನೇಪಾಳಕ್ಕೆ ತೆರಳುತ್ತಿದ್ದಾಗ ಹನ್ಸ್‌ದಿಹಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಾಳೆ. ಮಹಿಳೆ ತನ್ನ ಪತಿಯೊಂದಿಗೆ ಭಾರತದಾದ್ಯಂತ ಬೈಕ್ ಪ್ರವಾಸದಲ್ಲಿದ್ದರು

More articles

Latest article