“ದೇಶದ ರೈತರು ಸಹಾಯಕ್ಕಾಗಿ ಮೊರೆ ಇಡುತ್ತಿದ್ದಾರೆ. ಆದರೆ ಮೋದಿ ಸರಕಾರದಲ್ಲಿ ನ್ಯಾಯ ಸಿಗುವುದು ಅದಾನಿಗೆ ಮಾತ್ರ. ಜನರ ಹಣವನ್ನು ಅದಾನಿಗಾಗಿ ಸರಕಾರ ಲೂಟಿ ಮಾಡುತ್ತಿದೆ. ಈ ಅನ್ಯಾಯದ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ನ್ಯಾಯದ ಹಕ್ಕು ಸಿಗುವವರೆಗೂ ನಾವು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ” – ರಾಹುಲ್ ಗಾಂಧಿ
ಇಂದು (03.02.2014) ಭಾರತ ಜೋಡೋ ನ್ಯಾಯ ಯಾತ್ರೆ ಜಾರ್ಖಂಡ್ ರಾಜ್ಯದಲ್ಲಿ ಮುಂದುವರಿದಿದೆ. ಇಂದಿನ ಕಾರ್ಯಕ್ರಮಗಳು ಹೀಗಿದ್ದವು-
ಬೆಳಗ್ಗೆ 8.00 ಕ್ಕೆ ಯಾತ್ರೆಯು ಗೊಡ್ಡಾದ ಸರಕಂಡಾ ಚೌಕದಿಂದ ಆರಂಭವಾಯಿತು. ಆನಂತರ ಸಾರ್ವಜನಿಕ ಭಾಷಣ ಕಾರ್ಯಕ್ರಮ ನಡೆಯಿತು. 12.00 ಕ್ಕೆ ಮಧ‍್ಯಾಹ್ನದ ವಿರಾಮ ಖಿರ್ದಾನಾದ ಸರೈಯಾಹಾರ್ ನಲ್ಲಿ. 2.30 ಕ್ಕೆ ದೇವಘಡದ ಬಾಬಾ ಬೈದ್ಯನಾಥ ಧಾಮ ದರ್ಶನ. 3.15 ಕ್ಕೆ ದೇವಘಡ ಟವರ್ ಚೌಕದಿಂದ ಕುನ್ವರ್ ಸಿಂಗ್ ಚೌಕದವರೆಗೆ ಪಾದಯಾತ್ರೆ. ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ. ರಾತ್ರಿ ಧನಬಾದ್ ನ ಹಲಕಟ್ಟಾದಲ್ಲಿ ವಾಸ್ತವ್ಯ.
ಇಂದಿನ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ದೇವಧರದ ಪವಿತ್ರ ಕ್ಷೇತ್ರವಾದ ಬಾಬಾ ಬೈದ್ಯನಾಥ ಧಾಮಾ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ರುದ್ರಾಭಿಷೇಕದಲ್ಲಿ ಪಾಲ್ಗೊಂಡರು.
ಗೊಡ್ಡಾದ ಸರಕಂಡಾ ಚೌಕದಲ್ಲಿ ಮಾಡಿದ ಸಾರ್ವಜನಿಕ ಭಾಷಣದಲ್ಲಿ ರಾಹುಲ್ ಗಾಂಧಿಯವರು “ಬಿಜೆಪಿಯು ದೇಶದಲ್ಲಿ ದ್ವೇಷವನ್ನು ಹರಡುತ್ತಿದೆ. ನಮ್ಮ ಮೈತ್ರಿಪಕ್ಷಗಳೊಂದಿಗೆ ಸೇರಿಕೊಂಡು ದೇಶದ ಉದ್ದಕ್ಕೂ ಪ್ರೀತಿಯ ಅಂಗಡಿ ತೆರೆಯುವುದು ನಮ್ಮ ಗುರಿ. ಬಿಜೆಪಿಯು ಎಷ್ಟೇ ದ್ವೇಷವನ್ನು ಹರಡಲೀ, ಎಷ್ಟೇ ಹಿಂಸೆಯನ್ನು ಹರಡಲೀ, ಕಾಂಗ್ರೆಸ್ ಮತ್ತು ಅದರ ಮೈತ್ರಿಪಕ್ಷಗಳು ಪ್ರೀತಿಯ ಅಂಗಡಿಯನ್ನು ತೆರೆಯುತ್ತಾ ಹೋಗುತ್ತವೆ. ಯಾಕೆಂದರೆ ನಿಮಗೆ ಗೊತ್ತಿರಬಹುದು ನಮ್ಮ ಹೋರಾಟವು ಬಿಜೆಪಿಯ ಜನರಲ್ಲಿ ಇರುವ ದ್ವೇಷ ಮತ್ತು ಭಯದ ವಿರುದ್ಧ” ಎಂದರು.
“ದೇಶದ ರೈತರು ಸಹಾಯಕ್ಕಾಗಿ ಮೊರೆ ಇಡುತ್ತಿದ್ದಾರೆ. ಆದರೆ ಮೋದಿ ಸರಕಾರದಲ್ಲಿ ನ್ಯಾಯ ಸಿಗುವುದು ಅದಾನಿಗೆ ಮಾತ್ರ. ಜನರ ಹಣವನ್ನು ಅದಾನಿಗಾಗಿ ಸರಕಾರ ಲೂಟಿ ಮಾಡುತ್ತಿದೆ. ಈ ಅನ್ಯಾಯದ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ನ್ಯಾಯದ ಹಕ್ಕು ಸಿಗುವವರೆಗೂ ನಾವು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ” ಎಂದೂ ಅವರು ಹೇಳಿದರು.
ಪಕೂರ್ ನಲ್ಲಿ ಮಾಡಿದ ಭಾಷಣದಲ್ಲಿ ಅವರು “ಜನರಿಂದ ಚುನಾಯಿತವಾದ ಜಾರ್ಖಂಡ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನಿಸಿತು. ಆದರೆ ಈ ಷಡ್ಯಂತ್ರದ ವಿರುದ್ಧ ಇಂಡಿಯಾ ಕೂಟವು ಗಟ್ಟಿಯಾಗಿ ನಿಂತಿತು. ಬಹುಮತವನ್ನು ಕದಿಯಲು ಬಿಡಲಿಲ್ಲ. ಬಿಜೆಪಿಯ ಬಳಿಯಲ್ಲಿ ಹಣ ಇದೆ, ತನಿಖಾ ಏಜನ್ಸಿಗಳಿವೆ. ಆದರೆ ನಮಗೆ ಯಾವ ಭಯವೂ ಇಲ್ಲ. ನಾವು ಆಳುವ ಪಕ್ಷದ ವಿಭಜನಕಾರಿ ಸಿದ್ಧಾಂತದ ವಿರುದ್ಧ ಹೋರಾಡುತ್ತಲೇ ಇರುತ್ತೇವೆ” ಎಂದರು.
ಶ್ರೀನಿವಾಸ ಕಾರ್ಕಳ, ಮಂಗಳೂರು