Saturday, July 27, 2024

ಭಾರತ್ ಜೋಡೋ ನ್ಯಾಯ ಯಾತ್ರೆ | 17 ನೆಯ ದಿನ

Most read

“ಬಿಜೆಪಿ ಆರ್ ಎಸ್ ಎಸ್ ಹರಡಿದ ದ್ವೇಷದ ಪರಿಣಾಮವೇ ದಲಿತರ ಮೇಲೆ ದೌರ್ಜನ್ಯ ಹಠಾತ್ ಏರಲು ಕಾರಣ. ದಲಿತರಿಗೆ ಸಮಾನ ಭಾಗೀದಾರಿಕೆ ಕೊಡುವುದು ಅವರಿಗೆ ಇಷ್ಟವಿಲ್ಲ. ಈ ಅನ್ಯಾಯಕ್ಕೆ ಉತ್ತರವೇ ಸಾಮಾಜಿಕ ನ್ಯಾಯ. ಭಾಗೀದಾರಿಕೆಯ ನ್ಯಾಯ. ನಾವು ದೇಶದ ಪ್ರತಿಯೊಬ್ಬ ದಲಿತ ಸಹೋದರಿ ಸಹೋದರನಿಗೆ ನ್ಯಾಯ ಕೊಡಿಸಿಯೇ ಕೊಡುತ್ತೇವೆ” – ರಾಹುಲ್‌ ಗಾಂಧಿ


30.01.2024 -ಮಹಾತ್ಮಾ ಗಾಂಧಿಯವರು ಹುತಾತ್ಮರಾದ ದಿನವಾದ ಇಂದು ನ್ಯಾಯ ಯಾತ್ರೆಯು ಧ್ವಜಾರೋಹಣ ಮತ್ತು ಗಾಂಧೀಜಿಯವರ ಭಾವ ಚಿತ್ರಕ್ಕೆ ಪುಷ್ಪ ನಮನ ನಡೆಸುವುದರೊಂದಿಗೆ ಆರಂಭವಾಯಿತು.

8.30 ಕ್ಕೆ ಬಿಹಾರ ಅರಾರಿಯಾದ ಅಂಬೇಡ್ಕರ್ ಚೌಕದಿಂದ ಯಾತ್ರೆ ಆರಂಭವಾಯಿತು. ಮಧ‍್ಯಾಹ್ನ 11.00 ಕ್ಕೆ ರೈತರೊಂದಿಗೆ ಸಂವಾದ ನಡೆಯಿತು. ರೈತರು ತಮ್ಮ ಅಳಲನ್ನು ರಾಹುಲ್ ಗಾಂಧಿ ಮತ್ತು ಕನ್ಹಯ್ಯ ಕುಮಾರ್ ಅವರೊಂದಿಗೆ ಹೇಳಿಕೊಂಡರು. 2.00 ಗಂಟೆಗೆ ಪೂರ್ನಿಯಾ, ರಂಗಭೂಮಿ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಿತು.


ಪೂರ್ನಿಯಾದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ “ಜಾತಿ ಜನಗಣತಿಯ ಹೆಸರು ಕೇಳುತ್ತಿದ್ದಂತೆ ನಿತೀಶ್ ಕುಮಾರ್ ಓಡಿಹೋದರು. ಒತ್ತಡಕ್ಕೆ ಮಣಿದು ಜಾತಿ ಭೇದಭಾವ ಮಾಡುವ ಬಿಜೆಪಿ ಜತೆ ಕೈಜೋಡಿಸಿದರು. ಜಾತಿ ಜನಗಣತಿ ಸಾಮಾಜಿಕ ನ್ಯಾಯದ ಮೊದಲ ಹೆಜ್ಜೆ. ನಾವು ಈ ಹೆಜ್ಜೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಲೇ ಇರುತ್ತೇವೆ; ಎಲ್ಲಿಯ ವರೆಗೆ ಅಂದರೆ ನ್ಯಾಯದ ಹಕ್ಕು ಸಿಗುವವರೆಗೂ. ಬಿಜೆಪಿ ಆರ್ ಎಸ್ ಎಸ್ ಹರಡಿದ ದ್ವೇಷದ ಪರಿಣಾಮವೇ ದಲಿತರ ಮೇಲೆ ದೌರ್ಜನ್ಯ ಹಠಾತ್ ಏರಲು ಕಾರಣ. ದಲಿತರಿಗೆ ಸಮಾನ ಭಾಗೀದಾರಿಕೆ ಕೊಡುವುದು ಅವರಿಗೆ ಇಷ್ಟವಿಲ್ಲ. ಈ ಅನ್ಯಾಯಕ್ಕೆ ಉತ್ತರವೇ ಸಾಮಾಜಿಕ ನ್ಯಾಯ. ಭಾಗೀದಾರಿಕೆಯ ನ್ಯಾಯ. ನಾವು ದೇಶದ ಪ್ರತಿಯೊಬ್ಬ ದಲಿತ ಸಹೋದರಿ ಸಹೋದರನಿಗೆ ನ್ಯಾಯ ಕೊಡಿಸಿಯೇ ಕೊಡುತ್ತೇವೆ. ಭಾರತ ಜೋಡೋ ಯಾತ್ರೆಯು ಇಂದು ಬಾಪೂ ತೋರಿದ ಹೆಜ್ಜೆಗಳಲ್ಲಿ ನಡೆಯುತ್ತಿದೆ. ನ್ಯಾಯ ಯಾತ್ರೆಯು ಪ್ರತಿಯೊಬ್ಬರ ಮನಸಿನಲ್ಲಿ ಸಹೋದರ ಭಾವ ಜಾಗೃತಗೊಳಿಸಿದೆ. ಪ್ರತಿಯೊಬ್ಬ ಭಾರತೀಯನ ನ್ಯಾಯದ ಹಕ್ಕಿಗಾಗಿ ಹೋರಾಡುತ್ತಿದೆ” ಎಂದರು.


ಹವಾಮಾನ ವೈಪರೀತ್ಯದ ಕಾರಣ ಮಲ್ಲಿಕಾರ್ಜುನ ಖರ್ಗೆಯವರ ವಿಮಾನ ಇಳಿಯಲು ಸಾಧ್ಯವಾಗಲಿಲ್ಲ. ಆ ಕಾರಣ ಅವರು ತಮ್ಮ ವೀಡಿಯೋ ಸಂದೇಶ ಕಳಿಸಿದ್ದರು. ಅದರಲ್ಲಿ ಅವರು “ಪೂರ್ನಿಯಾ ಕಾರ್ಯಕ್ರಮಕ್ಕೆ ಬರುವ ಆಸೆ ಇತ್ತು. ಆದರೆ ಹವಾಮಾನ ವೈಪರೀತ್ಯದ ಕಾರಣ ಬರಲಾಗಲಿಲ್ಲ. ನಾವು ಇಂದು ಎಂತಹ ರಾಜಕೀಯ ಕಾಲಘಟ್ಟದಲ್ಲಿ ಸಾಗುತ್ತಿದ್ದೇವೆ ಎಂದರೆ ದೊಡ್ಡ ದೊಡ್ಡ ನಾಯಕರು ಸಣ್ಣ ಸಣ್ಣ ಲಾಭಕ್ಕಾಗಿ ತಮ್ಮನ್ನು ತಾವು ಮಾರಿಕೊಳ್ಳುತ್ತಿದ್ದಾರೆ. ಈ ನಡುವೆ ನಮ್ಮ ಮಧ್ಯೆ ಒಬ್ಬ ನಾಯಕನಿದ್ದಾನೆ. ಆತ ಕೇವಲ ಸಿದ್ದಾಂತಕ್ಕಾಗಿ ರಾಜಕೀಯ ಮಾಡುತ್ತಿದ್ದಾರೆ. ಅವರು ಜನರಿಗೆ ಏನನ್ನಾದರೂ ಕೊಡಲು ಯೋಚಿಸುತ್ತಿದ್ದಾರೆಯೇ ಹೊರತು ತನಗಾಗಿ ಪಡೆಯಲು ಅಲ್ಲ. ಅವರು ಜನರಿಗಾಗಿ ತ್ಯಾಗ, ತಪಸ್ಯಾ ಮತ್ತು ಬಲಿದಾನದ ದಾರಿ ಹಿಡಿದಿದ್ದಾರೆ” ಎಂದು ರಾಹುಲ್ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದರು.

ರಾತ್ರಿ ಕಟಿಹಾರ್ ಖೇರಿಯಾದಲ್ಲಿ ಯಾತ್ರಿಗಳು ತಂಗಲಿದ್ದಾರೆ.

ಶ್ರೀನಿವಾಸ ಕಾರ್ಕಳ, ಮಂಗಳೂರು

More articles

Latest article