2023ರಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಅತೀ ಹೆಚ್ಚು ಸಾವನ್ನಪ್ಪಿದ್ದಾರೆ, 2023ರ 870 ಮಾರಣಾಂತಿಕ ಅಪಘಾತಗಳು (Accident) ಸಂಭವಿಸಿವೆ. ಇದು ಕಳೆದ 10 ವರ್ಷಗಳಲ್ಲೇ ಅತ್ಯಂತ ಹೆಚ್ಚು ಎಂದು ದಾಖಲೆಯಾಗಿದೆ ಎಂದು ಸಂಚಾರ ಪೊಲೀಸ್ ಇಲಾಖೆ ಮಂಗಳವಾರ ಹಂಚಿಕೊಂಡ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ. 2011ರ ಬಳಿಕ ಬೆಂಗಳೂರಿನಲ್ಲಿ ಅತಿ ಹೆಚ್ಚು ಅಪಘಾತ ಪ್ರಕರಣ ದಾಖಲಾಗಿವೆ. 2013 ರಲ್ಲಿ, ಈ ಸಂಖ್ಯೆ 733 ಆಗಿತ್ತು.
2023ರ ವರ್ಷದಲ್ಲಿ 4,959 ಅಪಘಾತಗಳು ಸಂಭವಿಸಿದ್ದು, 899 ಜನರು ಸಾವನ್ನಪ್ಪಿದ್ದಾರೆ. 4,959 ಅಪಘಾತಗಳಲ್ಲಿ, 4,089 ಮಾರಣಾಂತಿಕವಲ್ಲ ಅಪಘಾತವಾಗಿದ್ದು, ಇದರಲ್ಲಿ 4,176 ಜನರು ಗಾಯಗೊಂಡಿದ್ದಾರೆ. ಬೆಂಗಳೂರು ಟ್ರಾಫಿಕ್ ಪೊಲೀಸರ ಪ್ರಕಾರ, ಅಪಘಾತಕ್ಕೀಡಾದ ಶೇಕಡಾ 70 ರಷ್ಟು ವಾಹನಗಳು ದ್ವಿಚಕ್ರ ವಾಹನಗಳಾಗಿವೆ.
ಕಳೆದ 10 ವರ್ಷಗಳಲ್ಲಿ ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ 58% ಹೆಚ್ಚಾಗಿದೆ ಎಂದು ಅಂಕಿಅಂಶಗಳು ತಿಳಿಸಿದೆ. 2013ರಲ್ಲಿ 49 ಲಕ್ಷ ವಾಹನಗಳಿದ್ದರೆ, 2023ರಲ್ಲಿ 1.2 ಕೋಟಿ ವಾಹನಗಳು ದಾಖಲಾಗಿವೆ ಎಂದು ವರದಿಯಲ್ಲಿ ದಾಖಲಿಸಲಾಗಿದೆ.
ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಅಂಕಿಅಂಶಗಳು ಹೇಳುತ್ತದೆ. 2018 ರಲ್ಲಿ ಬೆಂಗಳೂರಿನಲ್ಲಿ 663 ರಸ್ತೆ ಸಾವುಗಳು ದಾಖಲಾಗಿದ್ದರೆ, 2019 ರಲ್ಲಿ 746, 2020 ರಲ್ಲಿ 621, 2021 ರಲ್ಲಿ 621, 2022 ರಲ್ಲಿ 752 ಮತ್ತು 2023 ರಲ್ಲಿ 870 ಸಾವುಗಳು ರಸ್ತೆ ಅಪಘಾತದಿಂದ ಆಗಿವೆ ಎಂದು ವರದಿ ತಿಳಿಸಿದೆ.
ಜಂಟಿ ಪೊಲೀಸ್ ಕಮಿಷನರ್ (ಸಂಚಾರ), ಎಂ.ಎನ್.ಅನುಚೇತ್ ಮಾತನಾಡಿ, ಕೋವಿಡ್ ಸಮಯ ಹೊರತುಪಡಿಸಿ. ಬೆಂಗಳೂರಿನಲ್ಲಿ ತಲಾ ವಾಹನದ ಜನಸಂಖ್ಯೆಯನ್ನು ಪರಿಗಣಿಸಿದಾಗ ರಸ್ತೆ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. 2024 ರಲ್ಲಿ ಬೆಂಗಳೂರಿನಲ್ಲಿ ಸಾವಿನ ಪ್ರಮಾಣವನ್ನು ಶೇಕಡಾ 25 ರಷ್ಟು ಕಡಿಮೆ ಮಾಡುವುದು ಇಲಾಖೆಯ ಗುರಿಯಾಗಿದೆ” ಎಂದು ಅವರು ಹೇಳಿದರು.