Tuesday, December 10, 2024

ನ. 30 ರಿಂದ ಡಿ. 15ರ ವರೆಗೆ “ಬೆಂಗಳೂರು ಹಬ್ಬ” ಆಚರಣೆ: 500 ಕಾರ್ಯಕ್ರಮಗಳ ಆಯೋಜನೆ

Most read

ಬೆಂಗಳೂರು: ಇದೇ ನವೆಂಬರ್ 30 ರಿಂದ ಡಿಸೆಂಬರ್ 15ರ ವರೆಗೆ “ಬೆಂಗಳೂರು ಹಬ್ಬ”ವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆ ನಡೆಯುತ್ತಿದೆ. ಬೆಂಗಳೂರಿನ ಶ್ರೀಮಂತ ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸಲು ಅನ್‌ಬಾಕ್ಸಿಂಗ್ ಬೆಂಗಳೂರು ಫೌಂಡೇಷನ್, ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ “ಬೆಂಗಳೂರು ಹಬ್ಬ” ಎರಡನೇ ಆವೃತ್ತಿಯನ್ನು ಅದ್ಧೂರಿಯಿಂದ ಆಚರಿಸಲು ಸಜ್ಜಾಗಿದೆ.
ನವೆಂಬರ್ 30ರಂದು ಅದ್ಧೂರಿಯಾಗಿ ಚಾಲನೆ ಪಡೆಯಲಿರುವ ಬೆಂಗಳೂರು ಹಬ್ಬ 16 ದಿನಗಳ ಕಾಲ ನಡೆಯಲಿದ್ದು, ನಮ್ಮ ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ, ನಾಟಕ, ಸಂಗೀತ, ನೃತ್ಯ, ಚಿತ್ರಕಲೆ, ವಿವಿಧ ರೀತಿಯ ಮಳಿಗೆಗಳ ಆಯೋಜನೆ ಸೇರಿದಂತೆ ಸಾರ್ವಜನಿಕರನ್ನು ಮನಸೂರೆಗೊಳಿಸುವ 500ಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಗರದ 40ಕ್ಕೂ ಹೆಚ್ಚು ಸ್ಥಳದಲ್ಲಿ ಆಯೋಜಿಸಲಾಗಿದೆ. ಪ್ರಮುಖವಾಗಿ ನಗರದ ಫ್ರೀಡಂ ಪಾರ್ಕ್, ಬೆಂಗಳೂರು ಇಂಟರ್‌ ನ್ಯಾಷನಲ್ ಸೆಂಟರ್ (BIC), ಮಲ್ಲೇಶ್ವರದ ಪಂಚವಟಿ, ಕಾಮರಾಜ್ ರಸ್ತೆಯ ಸಭಾ ಮತ್ತು NGMA ನಂತಹ ಜನಪ್ರಿಯ ಸ್ಥಳಗಳಲ್ಲಿ ಕಾರ್ಯಕ್ರಮಗಳು ಜರುಗಲಿವೆ.
ಕಾರ್ಯಕ್ರಮಗಳ ವಿವರ:
ನವೆಂಬರ್ 30 ರಿಂದ ಪ್ರತಿದಿನ 10ಕ್ಕೂ ಅಧಿಕ ಕಾರ್ಯಕ್ರಮಗಳು ವಿವಿಧ ಸ್ಥಳಗಳಲ್ಲಿ ನಡೆಯಲಿದೆ. ಗೋಡೆ ಚಿತ್ರ, ಕಲಾ ಪ್ರದರ್ಶನ, ಬೆಂಗಳೂರು ಸಮಸ್ಯೆ ಬಗೆಹರಿಸುವ “ಬೆಂಗಳೂರು ಚಾಲೆಂಜ್”, 38 ಪ್ರತಿಭಾವಂತ ಕಲಾವಿದರನ್ನು ಒಳಗೊಂಡ ಬೃಹತ್ ಜಾನಪದ ಸಂಗೀತ ಕಾರ್ಯಕ್ರಮ, ಬೊಂಬೆಯಾಟ, ನಾಟಕ ಪ್ರದರ್ಶನ ಹೀಗೆ ಅನೇಕ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನದ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು https://blrhubba.in ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದ್ದು, ಈ ವೆಬ್‌ಸೈಟ್ ಮೂಲಕವೇ ನಿಮ್ಮ ಹಾಜರಾತಿಯನ್ನು ಸಹ ಕಾಯ್ದಿರಿಸಬಹುದು, ನೇರವಾಗಿಯೂ ಸಹ ಕಾರ್ಯಕ್ರಮಕ್ಕೆ ತೆರಳಬಹುದು. ಬಹುತೇಕ ಕಾರ್ಯಕ್ರಮಗಳಿಗೆ ಮುಕ್ತ ಅವಕಾಶವಿರಲಿದ್ದು, ನಿಮ್ಮ ನೆಚ್ಚಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ನೀವೂ ಸಹ ಬೆಂಗಳೂರು ಹಬ್ಬದ ಅನುಭವ ಪಡೆಯಬಹುದು.

ಕುವೆಂಪು ಅವರ 120 ನೇ ಜನ್ಮದಿನೋತ್ಸವ ಆಚರಣೆ:
ಬೆಂಗಳೂರು ಹಬ್ಬದ ಮತ್ತೊಂದು ವಿಶೇಷವೆಂದರೆ, ಸಾಹಿತ್ಯ ಲೋಕದ ದಿಗ್ಗಜರಾದ ಕವಿ ಕುವೆಂಪು ಅವರ 120 ನೇ ಜನ್ಮ ವಾರ್ಷಿಕೋತ್ಸವದ ಭಾಗವಾಗಿ “ಗಲಗಲ ಗದ್ದಲ” ಕಾರ್ಯಕ್ರಮವನ್ನು ಅಯೋಜಿಸಲಾಗಿದ್ದು, ಈ ವೇಳೆ ಪ್ರಸಿದ್ಧ ಸಾಹಿತಿಗಳು ಭಾಗವಹಿಸಲಿದ್ದಾರೆ. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮಾತನಾಡಿ, “ಬಿಎಲ್‌ಆರ್ ಹಬ್ಬವು ನಮ್ಮ ರಾಜ್ಯದ ಶ್ರೀಮಂತ ಸಂಸ್ಕೃತಿ ಮತ್ತು ಸೃಜನಶೀಲತೆಯ ಸಾರವನ್ನು ಒಟ್ಟುಗೂಡಿಸಲು ನಡೆಸುತ್ತಿರುವ ಪ್ರಮುಖ ಆಚರಣೆಯಾಗಿದೆ. ಈ ಕಾರ್ಯಕ್ರಮವು ಕರ್ನಾಟಕಕ್ಕೆ ತನ್ನ ಪರಂಪರೆ, ಕಲೆ ಮತ್ತು ನಾವೀನ್ಯತೆಯನ್ನು ಜಗತ್ತಿಗೆ ಪ್ರದರ್ಶಿಸಲು ಒಂದು ಅನನ್ಯ ವೇದಿಕೆಯಾಗಿ ಕಾರ್ಯನಿರ್ವಹಿಸಲಿದ್ದು, ಹೊಸದನ್ನು ಅಳವಡಿಸಿಕೊಳ್ಳುವಾಗ ನಮ್ಮ ಶ್ರೀಮಂತ ಸಂಪ್ರದಾಯಗಳಲ್ಲಿ ಹೆಮ್ಮೆಯನ್ನು ಬೆಳೆಸುತ್ತದೆ. BLR ಹಬ್ಬಾ ನಮ್ಮ ಸಮುದಾಯದೊಳಗೆ ಆಳವಾದ ಸಂಪರ್ಕಗಳನ್ನು ಪ್ರೇರೇಪಿಸುತ್ತದೆ ಮತ್ತು ಭಾಗವಹಿಸುವ ಎಲ್ಲರ ಕಲ್ಪನೆಯನ್ನು ಪ್ರಚೋದಿಸಲಿದೆ ಎಂದರು.

More articles

Latest article