ಬೆಂಗಳೂರಿನಲ್ಲಿ ತೀವ್ರಗೊಂಡ “ಬೇಡ ಬ್ರೋ”, “ರೈಸ್” ಕಾರ್ಯಾಚರಣೆ

ಬೆಂಗಳೂರು: ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಯನ್ನು ತಡೆಗಟ್ಟುವ ಉದ್ದೇಶದಿಂದ, ‘ಬೇಡಾ ಬ್ರೋ’ (BEDA BRO) ಮತ್ತು ‘ರೈಸ್’ (RISE) ಅಭಿಯಾನಗಳ ಅಡಿಯಲ್ಲಿ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ, ವೈದ್ಯಕೀಯ ಮಳಿಗೆಗಳು, ಹೋಟೆಲ್‌ಗಳು, ದಿನಸಿ ಮತ್ತು ಸ್ಟೇಷನರಿ ಅಂಗಡಿಗಳು, ಮೊಬೈಲ್ ಅಂಗಡಿಗಳು ಹಾಗೂ ಐಸ್‌ಕ್ರೀಮ್ ಪಾರ್ಲರ್‌ಗಳು ಸೇರಿದಂತೆ ಒಟ್ಟು 575 ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳನ್ನು ಪೋಲೀಸರು ಪರಿಶೀಲಿಸಿದ್ದಾರೆ.

ಈ ಕಾರ್ಯಾಚರಣೆ ವೇಳೆ ಪೊಲೀಸರು 232 ಸಾಮಾನ್ಯ ಪ್ರಕರಣಗಳು, ಹಾಗೂ ‘ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ’ಯ (COTPA) ಅಡಿಯಲ್ಲಿ 282 ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಲ್ಲದೆ, ಮಾದಕ ದ್ರವ್ಯಕ್ಕೆ ಸಂಬಂಧಿಸಿದ ನಾಲ್ಕು ಪ್ರಕರಣಗಳನ್ನು ದಾಖಲಿಸಿ, 305 ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದಾರೆ, ಮತ್ತು 27 ಅನುಮಾನಾಸ್ಪದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಏನಿದು”ಬೇಡ ಬ್ರೋ* ಮತ್ತು”ರೈಸ್” :

“ಬೇಡ ಬ್ರೋ” (Beda Bro) ಮತ್ತು “ರೈಸ್” (RISE : Refuse, Inform, Support, and Empower.) ಎಂಬುದು ಯುವಜನರಲ್ಲಿನ ಮಾದಕವಸ್ತುಗಳ ದುರುಪಯೋಗವನ್ನು ತಡೆಗಟ್ಟುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮತ್ತು ಸ್ಥಳೀಯ ಪೊಲೀಸ್ ಪಡೆಗಳು ಆರಂಭಿಸಿರುವ ಮಾದಕವಸ್ತು ವಿರೋಧಿ ಜಾಗೃತಿ ಅಭಿಯಾನವಾಗಿದೆ.

More articles

Latest article

Most read