ಬೆಂಗಳೂರು ನಗರದ ಜಿಟಿ ಮಾಲ್ನಲ್ಲಿ ಪಂಚೆ ಧರಿಸಿದ ರೈತರನ್ನು ಮಾಲ್ನ ಒಳಗೆ ಬಿಟ್ಟಿರದ ಘಟನೆ ವರದಿಯಾಗುತ್ತಿದ್ದಂತೆ. ಈ ವಿಷಯವಾಗಿ ರಾಜ್ಯಾದ್ಯಂತ ಆಕ್ರೋಶಭುಗಿಲೆದ್ದಿತ್ತು. ಇದೀಗ ಜಿಟಿ ಮಾಲ್ ವಿಷಯನ ವಿಧಾನಸೌಧದವರೆಗೂ ಹೋಗಿದ್ದು, ಮಾಲ್ಗೂ ಬೀಗ ಹಾಕಿಸುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಬಿಬಿಎಂಪಿ ಈಗ ಈ ಕಾರ್ಯ ಮಾಡಿದ್ದು ಬಿಗಿಭದ್ರತೆ ಜೊತೆಗೆ ಮಾಲ್ಗೆ ಬೀಗ ಜಡಿದಿದ್ದಾರೆ.
ರೈತನಿಗೆ ಅಪಮಾನ ಮಾಡಿದ ಜಿ.ಟಿ. ಮಾಲ್ ವಿರುದ್ಧ ಬಿಬಿಎಂಪಿ ಕ್ರಮ ಕೈಗೊಂಡಿದೆ. ಸರ್ಕಾರ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ ಸೂಚನೆ ಮೇರೆಗೆ ಜಿ.ಟಿ.ಮಾಲ್ ಮೇಲೆ ಕ್ರಮ ಕೈಗೊಳ್ಳಲಿದ್ದಾರೆ. ಜಿ.ಟಿ ಮಾಲ್ ಅನ್ನು ಒಂದು ವಾರಗಳ ಕಾಲ ಬೀಗ ಹಾಕಲಾಗಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ ಸೂಚನೆ ಮೇರೆಗೆ ಮಾರ್ಷಲ್ ಗಳ ಜೊತೆ ಬಂದ ಪಾಲಿಕೆ ಅಧಿಕಾರಗಳ ಎಲ್ಲಾ ಗೇಟ್ ಬಂದ್ ಮಾಡಿಸಿದ್ದಾರೆ.
ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಸರ್ಕಾರದ ಪರವಾಗಿ ಉತ್ತರಿಸಿದ ಸಚಿವ ಬೈರತಿ ಸುರೇಶ್, ಈಗಾಗಲೇ ಬಿಬಿಎಂಪಿ ಆಯುಕ್ತರ ಹತ್ತಿರ ಮಾತನಾಡಿದ್ದೇವೆ. ಕಾನೂನಿನಲ್ಲಿ ಅವಕಾಶ ಇದೆ. ಸರ್ಕಾರದ ಕ್ರಮ ಕೈಗೊಳ್ಳಬಹುದು. ಹಾಗಾಗಿ 7 ದಿನ ಮಾಲ್ ಮುಚ್ಚಿಸುತ್ತೇವೆ, ಕ್ರಮ ಜರುಗಿಸುತ್ತೇವೆ ಎಂದು ಹೇಳಿದ್ದರು.
ಹಾವೇರಿ ಜಿಲ್ಲೆಯ ಅರೇಮಲ್ಲಾಪುರ ಗ್ರಾಮದ ನಾಗರಾಜ್ ತಮ್ಮ ತಂದೆ ತಾಯಿ ಜೊತೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರೋ ಜಿ.ಟಿ. ಮಾಲ್ಗೆ ಸಿನಿಮಾ ನೋಡೋಕೆ ಬಂದಿದ್ದಾರೆ. ನಾಗರಾಜ್ ತಂದೆ ಪಂಚೆ ದರಿಸಿದ ಕಾರಣ ಅವರನ್ನು ಒಳಗೆ ಬಿಡಲು ನಿರಾಕರಿಸಿದ್ದಾರೆ, ಸುಮಾರು ಅರ್ಧ ಗಂಟೆಗಳ ಕಾಲ ಸತಾಯಿಸಿದ್ದು ಅವರನ್ನು ಅವಮಾನ ಮಾಡಿದ್ದಾರೆ ಎಂದು ನಾಗರಾಜ್ ಆರೋಪ ಮಾಡಿದ ನಂತರ ಈ ಘಟನೆ ಎಲ್ಲೆಡೆ ವೈರಲ್ ಆಗಿತ್ತು.