Saturday, July 27, 2024

BBMP Budjet 2024: ಬರೋಬ್ಬರಿ 12,369 ಕೋಟಿ ಗಾತ್ರದ ಬಜೆಟ್ ಮಂಡಿಸಿದ ಬಿಬಿಎಂಪಿ, 16 ಸಾವಿರ ಪೌರ ಕಾರ್ಮಿಕರ ನೇರ ನೇಮಕಾತಿಗೆ ಸಿದ್ದ

Most read

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2024ರ ಮಹತ್ವದ ಬಜೆಟ್ ಇಂದು ಮಂಡನೆಯಾಗಲಿದೆ. 2024-25ನೇ ಸಾಲಿನ ಬಿಬಿಎಂಪಿ ಬಜೆಟ್ (BBMP Budget 2024) ಮಂಡನೆಯಾಗಿದ್ದು, ಬರೋಬ್ಬರಿ 12,369 ಕೋಟಿ ಗಾತ್ರದ ಬಜೆಟ್‌ನ್ನು ಬಿಬಿಎಂಪಿ ಹಣಕಾಸು ವಿಶೇಷ ಆಯುಕ್ತ ಶಿವಾನಂದ‌ ಕಲ್ಕೆರೆ ಮಂಡಿಸಿದ್ದಾರೆ.

ರಾಜ್ಯ ಸರ್ಕಾರದ ಬ್ರ್ಯಾಂಡ್‌ ಬೆಂಗಳೂರು ಪರಿಕಲ್ಪನರಯಡಿ ಬಿಬಿಎಂಪಿಯ 2024-25ನೇ ಆಯವ್ಯಯದಲ್ಲಿ ಒತ್ತು ನೀಡಲಾಗಿದ್ದು, ಬಜೆಟ್‌ನಲ್ಲಿ ಬ್ರ್ಯಾಂಡ್ ಬೆಂಗಳೂರಿಗೆ 1,580 ಕೋಟಿ ಅನುದಾನ ಮೀಸಲು ಇರಿಸಲಾಗಿದೆ. ಆಸ್ತಿ ತೆರಿಗೆ ಕಾಯ್ದೆ ತಿದ್ದುಪಡಿ ಹಿನ್ನೆಲೆ ಈ ಸಾಲಿನಲ್ಲಿ 15 ಲಕ್ಷ ಜನರಿಗೆ ಸುಮಾರು 2,500 ಕೋಟಿ ಮನ್ನಾ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಬಜೆಟ್‌ನಲ್ಲಿ ಜಾಹೀರಾತು ನಿಯಮ ಜಾರಿ ಘೋಷಿಸಲಾಗಿದ್ದು, 2024-25ನೇ ಸಾಲಿನಲ್ಲಿ ಜಾಹೀರಾತು ಪಾಲಿಸಿ ಜಾರಿ ಮಾಡಿ 500 ಕೋಟಿ ಆದಾಯ ನಿರೀಕ್ಷೆ ಹೊಂದಲಾಗಿದೆ.

ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಬ್ರ್ಯಾಂಡ್ ಬೆಂಗಳೂರು ಯೋಜನೆಯನ್ನು ಪರಿಚಯಿಸಿದೆ. ಸಂಚಾರಯುಕ್ತ ಬೆಂಗಳೂರು, ಹಸಿರು ಬೆಂಗಳೂರು, ಸ್ವಚ್ಚ ಬೆಂಗಳೂರು, ಟೆಕ್ ಬೆಂಗಳೂರು, ಶೈಕ್ಷಣಿಕ ಬೆಂಗಳೂರು ಹಾಗೂ ಜಲ ಸುರಕ್ಷಾ ಬೆಂಗಳೂರು ಎಂಬ ಎಂಟು ಅಂಶಗಳನ್ನು ಒಳಗೊಂಡಿದೆ. ಈ ಅಂಶಗಳ ಕುರಿತು ಈಗಾಗಲೇ ತಜ್ಞರು, ಉದ್ಯಮಿಗಳು, ಬೆಂಗಳೂರು ನಾಗರಿಕರೊಂದಿಗೆ ಚರ್ಚೆ ನಡೆಸಿ ಅಭಿಪ್ರಾಯ ಆಧಾರಿಸಿ ಕೆಲವು ಅಂಶಗಳನ್ನು ಬಿಬಿಎಂಪಿಯ ಬಜೆಟ್‌ನಲ್ಲಿ ಅಳವಡಿಕೊಳ್ಳಲಾಗಿದೆ.

ಬಿಬಿಎಂಪಿ ಬಜೆಟ್‌ನಲ್ಲಿ 16 ಸಾವಿರ ಪೌರ ಕಾರ್ಮಿಕರ ನೇರ ನೇಮಕಾತಿಗೆ ಅನುಮತಿ ನೀಡಲಾಗಿದೆ. ನೂತನ 50 ಇಂದಿರಾ ಕ್ಯಾಂಟಿನ್​ಗೆ ಒತ್ತು, ಸ್ಥಿರ ಕ್ಯಾಂಟಿನ್ ಅಥವಾ ಮೊಬೈಲ್ ಕ್ಯಾಂಟಿನ್ ಸ್ಥಾಪಿಸಲು 70 ಕೋಟಿ ಮೀಸಲಿರಿಸಲಾಗಿದೆ ಎಂದು ಘೋಷಿಸಿದರು.

ಪಾಲಿಕೆ ಸೇವಾ ವಿತರಣೆ ಉನ್ನತೀಕರಿಸಲು ಸಮಗ್ರ ಸದೃಢ ಆರೋಗ್ಯ ಹೆಸರಿನಡಿ 3 ವರ್ಷಗಳಲ್ಲಿ ಸಮಗ್ರ ಯೋಜನೆ, 40 ಹೊಸ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲು ಮತ್ತು 81 ಆರೋಗ್ಯ ಕೇಂದ್ರ ನವೀಕರಿಸಲು 64 ಕೋಟಿ, 24 ಹೆರಿಗೆ ಆಸ್ಪತ್ರೆ ಮತ್ತು ರೆಫೆರಲ್ ಘಟಕಗಳಲ್ಲಿ ಹೆಚ್ಚುವರಿ ಕೊಠಡಿ ನಿರ್ಮಿಸಲು 24 ಕೋಟಿ, 14 ಆತ್ಯಾಧುನಿಕ ಜೀವ ರಕ್ಷಕ ಆಂಬುಲೆನ್ಸ್ ಖರೀದಿಗೆ 25 ಕೋಟಿ ಮೀಸಲಿರಿಸಲಾಗಿದೆ.

ಕಾರ್ಯಾಚರಣೆ ಹಾಗೂ ನಿರ್ವಹಣೆ ವೆಚ್ಚ – 2271 ಕೋಟಿ, ಸಿಬ್ಬಂದಿ ವೆಚ್ಚ 1607 ಕೋಟಿ.. ಆಡಳಿತ ವೆಚ್ಚ – 389 ಕೋಟಿ, ಠೇವಣಿ ಮತ್ತು ಕರ ಮತು ಪಾವತಿ/ವೆಚ್ಚ- 527 ಕೋಟಿ, ಆಸ್ತಿ ತೆರಿಗೆಯಿಂದ 4470 ಕೋಟಿ ಆದಾಯ ನಿರೀಕ್ಷೆ, ತೆರಿಗೆಯೇತರ ಆದಾಯ 3097.91 ಕೋಟಿ ನಿರೀಕ್ಷೆ, ರಾಜ್ಯ ಸರ್ಕಾರದಿಂದ 3589.58 ಕೋಟಿ ರೂ ನಿರೀಕ್ಷೆ, ಕೇಂದ್ರ ಸರ್ಕಾರದಿಂದ 488 ಕೋಟಿ ರೂ‌ ನಿರೀಕ್ಷೆ, ಅಸಾಧಾರಣ ಆದಾಯದಿಂದ 724 ಕೋಟಿ ಆದಾಯ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.

ಕಳೆದ ಬಾರಿಗಿಂದ ಹೆಚ್ಚಿನ ಆಯವ್ಯಯ:

2023-24ನೇ ಸಾಲಿನಲ್ಲಿ 11,158 ಕೋಟಿ ಆದಾಯ ನಿರೀಕ್ಷೆ ಇಟ್ಟುಕೊಂಡು 11,157 ಕೋಟಿ ವೆಚ್ಚದ ಯೋಜನೆಗಳನ್ನು ಘೋಷಣೆ ಮಾಡಿತ್ತು. ರಾಜ್ಯ ಸರ್ಕಾರ ಇನ್ನಷ್ಟು ಅನುದಾನ ನೀಡುವುದಾಗಿ ತಿಳಿಸಿ ಪಾಲಿಕೆ ಬಜೆಟ್‌ ಗಾತ್ರವನ್ನು 11,885 ಕೋಟಿಗೆ ಹೆಚ್ಚಿಸಿತ್ತು.

More articles

Latest article