ಬನ್ಸು ಭಟ್ರು ಮತ್ತು ಸೌಜನ್ಯಾ…

ಇವರುಗಳು ತಮ್ಮ ಮೈ ಮೇಲಿನ ವೇಷ, ಬಣ್ಣವನ್ನುಕಳಚುವ ಮುನ್ನ ತಮ್ಮ ನಾಲಗೆಗೆ ಅಂಟಿದ ಬಣ್ಣವನ್ನು ಚೆನ್ನಾಗಿ ಸೋಪುಹಾಕಿ ತೊಳೆಯುವುದು ಉತ್ತಮ. ಭಾಷೆಯೂ ಶುದ್ಧವಾದೀತು. ಬನ್ಸೂಕೂಡ ರುಚಿ ಎನಿಸೀತು–ಶಂಕರ್‌ ಸೂರ್ನಳ್ಳಿ, ಲೇಖಕರು.

ಜಗತ್ತಿನ ಪ್ರತಿಯೊಂದು ಜೀವಿಗಳಿಗೂ ಅವುಗಳೊಳಗಿನ ಸಂವಹನಕ್ಕೆ ಅವುಗಳದ್ದೇ ರೀತಿಯ ಮಾತುಕತೆಯ ವ್ಯವಸ್ಥೆಯಿದೆ. ಮಾತು ಅಥವಾ ಭಾಷೆ ಎಂದಾಕ್ಷಣ ಅದು ಶಬ್ದ ಮೂಲದ್ದೇ ಆಗಿರಬೇಕೆಂದೇನು ಇಲ್ಲ. ಕೆಲ ಜೀವಿಗಳು ಸಂವಹನಕ್ಕಾಗಿ ಶಬ್ದವನ್ನು ಬಳಸಿದರೆ ಇರುವೆ, ಕೀಟ ಇನ್ನು ಕೆಲ ಜೀವಿಗಳು  ರಾಸಾಯನಿಕ ಅಥವಾ ಸಂಜ್ಞೆಗಳ ಮೂಲಕ ಮಾತನಾಡ ಬಲ್ಲವು. ನಾಯಿಗಳ ಬೌ.. ಬೌ..  ಕಾಗೆಗಳ ಕಾ..ಕಾ..  ನಮಗೆ ಸಾಮಾನ್ಯವೆನಿಸಿ ಕೇಳಿಸಿದರೂ (ಜಿರಾಫೆಗಳು ಶಬ್ದವನ್ನೇ ಹೊರಡಿಸಲಾರವಂತೆ. ಹಾಗಂತ ಅವುಗಳು ಮಾತಿನಿಂದ ಹೊರತಾಗಿಯೇನೂ ಇಲ್ಲ) ಅವು ಹೊರಡಿಸುವ ನಿಯಮಿತ ಶಬ್ದದ ಏರಿಳಿತದಲ್ಲೇ ಅವುಗಳ ಕರೆಯುವಿಕೆ, ಅಪಾಯಸೂಚನೆ,  ಆಹಾರ ಲಭ್ಯತೆ ಇವೆಲ್ಲವನ್ನೂ ತನ್ನವರಿಗೆ ಸ್ಪಷ್ಟವಾಗಿ ತಿಳಿಸುವಂತಹ ಸಾಮರ್ಥ್ಯವನ್ನು ಅವುಗಳು ಹೊಂದಿವೆ. ಆದರೆ ಮನುಷ್ಯನೆನ್ನುವವನು ಮಾತ್ರ ತಾನು ಎಲ್ಲದರಲ್ಲೂ ಇನ್ನಿತರ ಜೀವಿಗಳಿಗಿಂತ ಶ್ರೇಷ್ಠ ಮಟ್ಟದವನೆಂದು ಭ್ರಮೆಯನಿಟ್ಟುಕೊಂಡು  ಆಗಾಗ ಎಡವುತ್ತಿರುತ್ತಾನೆ ಇದಲ್ಲವೆ ಚೋದ್ಯ!

ಮಾತುಗಾರಿಕೆಯಲ್ಲಿ ತಾವು ಪ್ರೌಢಿಮೆಯುಳ್ಳವರು, ಭಾಷಾ ಪ್ರವೀಣರು ಸಂಸ್ಕೃತ, ಕನ್ನಡ, ಇಂಗ್ಲೀಷ್ ಡಿಕ್ಷನರಿಗಳ ಎಲ್ಲ ಪದಗಳನ್ನು ಅರೆದು ಕುಡಿದು ಸಾಂದರ್ಭಿಕವಾಗಿ ಯಾವುದನ್ನೂ ಎಲ್ಲೆಲ್ಲಿ ಬಳಸಬೇಕೆಂಬ ತಿಳುವಳಿಕೆಯುಳ್ಳವರು. ತಮ್ಮ ಮಾತುಗಾರಿಕೆಯ ಶೈಲಿಗಾಗಿಯೇ  ಹೆಸರಾದಂತವರು ಎಂಬಿತ್ಯಾದಿಯಾಗಿ ಕಿರೀಟ ತೊಟ್ಟ ಹಿರಿಯ ವ್ಯಕ್ತಿಯೊಬ್ಬರು ಅವಸರಕ್ಕೆ ಬಿದ್ದು ಉಗುರಲ್ಲಿ ಹೋಗುವಂತದ್ದಕ್ಕೆ ಕೊಡಲಿಯೆತ್ತಿದ ಪರಿಣಾಮಕ್ಕೆ ಮೊನ್ನೆ ಮೊನ್ನೆ ಸಾಕಷ್ಟು ಟೀಕೆಗೊಳಪಡುವಂತಾಯ್ತು.

ಕೆಲ ದಿನದ ಹಿಂದೆ ಕುಂದಾಪುರದ ಪರಿಸರದಲ್ಲಿ ಯಾರದೋ ಹರಕೆಯಾಟದ ಸಂದರ್ಭದಲ್ಲಿ ಅಲ್ಲಿದ್ದ ಮಕ್ಕಳ ಶಿಳ್ಳೆಗೆ ರೊಚ್ಚಿಗೆದ್ದ ವೇಷಧಾರಿಯೊಬ್ಬರು ಯಾರದು ಶಿಳ್ಳೆ ಹೊಡೆಯೋದು? ನಮಗೆ ಕಿರಿಕಿರಿಯಾಗ್ತದೆ. ನಿಮಗೆ ಇರಲು ಇಷ್ಟವಿಲ್ಲದಿದ್ದರೆ ಹೋಗಿ ಬನ್ಸ್ ತಿಂದು ಎಂದು ಗದರಿಸಿದ್ದರು. ಕರಾವಳಿಯಲ್ಲಿ ಹರಕೆಯಾಟವೆಂಬುದು ವ್ರತ, ಹೋಮ (ಗಣ ಹೋಮ, ಸತ್ಯನಾರಾಯಣ ವ್ರತಗಳ ತರಹ) ದಂತೆಯೇ  ಇದೂ ಒಂದು ಸಂಕಲ್ಪ ಪೂಜಾ ಪದ್ಧತಿಯಾಗಿ ಚಾಲ್ತಿಯಲ್ಲಿದೆ. ಮಂದರ್ತಿಯಂತಹ ಮೇಳಗಳಲ್ಲಿ ಹರಕೆಯಾಟಕ್ಕೆ ಅವಕಾಶ ಸಿಗುವುದೇ ದೊಡ್ಡ ಮಾತು ಅಷ್ಟೊಂದು ಡಿಮ್ಯಾಂಡ್ ಅದಕ್ಕೆ.

ಪೌರಾಣಿಕ ಪ್ರಸಂಗದ ಹೆಸರಲ್ಲಿ ಮನೆಯವರ ಭಕ್ತಿ ಪ್ರದರ್ಶನ  ಒಂದು ಕಡೆಯಾದರೆ, ದುಡ್ಡು ಕೊಟ್ಟು ಟೆಂಟ್ ಆಟಗಳಿಗೆ ಹೋಗಲಾಗದ ಸುತ್ತಲಿನವರಿಗೆ ಉಚಿತ ಆಟ ನೋಡುವ ಅವಕಾಶದ ಒದಗಣೆ ಮತ್ತೊಂದೆಡೆ. ಸಾಮಾನ್ಯವಾಗಿ ಮುಕ್ತ ಅವಕಾಶ ಇರುವ ಕಾರಣ  ಹಿರಿಯರು ಹೆಂಗಸರು ಮಕ್ಕಳೆನ್ನದೆ ಎಲ್ಲರು ಇಲ್ಲಿ ಸೇರುತ್ತಾರೆ. ಅಂತಹ ಸಂದರ್ಭಗಳಲ್ಲಿ  ತೀರಾ ಅತಿರೇಕದ ನಿಬಂಧನೆಗಳನ್ನು ಹೇರಲಾಗುವುದಿಲ್ಲ.

ಯಕ್ಷಗಾನದ ಭಾಗವತಿಕೆ, ಕುಣಿತ, ವೇಷ, ಮಾತುಗಾರಿಕೆ ಇವೆಲ್ಲವುಗಳಲ್ಲೂ ಅದರದ್ದೇ ಆದಂತಹ ಅಭಿಮಾನಿ ವರ್ಗವಿದೆ. ಎಲ್ಲವನ್ನು ಮೆಚ್ಚುವವರೂ ಇದ್ದಾರೆ. ಇಂತಹ ಒಂದು ಪರಿಷ್ಕೃತ ಕಲಾ ಪ್ರಕಾರಕ್ಕೆ ಮಾತುಗಾರಿಕೆ, ಕುಣಿತ, ಹಾಸ್ಯ ಭಾಗವತಿಕೆಗೆ ಸಂಬಂಧಪಟ್ಟಂತೆ ಶಿಳ್ಳೆ ಕೇಕೆಗಳೆಲ್ಲವೂ ತೀರಾ ಸಾಮಾನ್ಯ. ಮೊಣಕಾಲಿನಲ್ಲಿ ಅಥವಾ ನೇರವಾಗಿ ನಿಂತು ವೇಷಧಾರಿಗಳು ಹಾಕುವ ಗಿರಕಿ ಕುಣಿತಕ್ಕೆ ಪ್ರೇಕ್ಷಕರಿಂದ ಬೀಳುವ  ಶಿಳ್ಳೆ ಗೆ ತಕ್ಕಂತೆ ಅದರ ವೇಗ ಮತ್ತು  ಆವರ್ತನವೂ ಬದಲಾಗುತ್ತದೆ. ಇದೊಂದು ಉದಾಹರಣೆಯಷ್ಟೆ

ಒಂದು ಭಕ್ತಿ ಪ್ರಧಾನವಾದ ಹರಕೆಯಾಟದಲ್ಲಿ ಸ್ವಯಂ ಶ್ರೀಕೃಷ್ಣ ವೇಷಧಾರಿಯೊಬ್ಬರು ತಮ್ಮ ಮಾತು, ಕುಣಿತ, ಭಾಗವತರ ಭಾಗವತಿಕೆಯಾದಿಯಾಗಿ ಒಟ್ಟಾರೆ ಹರಕೆಯ ಕಾರಣ ಪೂಜಾ ವಿಧಿವಿಧಾನಗಳಿಂದ  ಆರಂಭಗೊಂಡ ಇಡೀ ಪ್ರಸಂಗಕ್ಕೆ ಏಕಾಏಕಿ ಬ್ರೇಕ್ ಹಾಕಿ ರಸಭಂಗದ ಜೊತೆಗೆ ವ್ರತಭಂಗಕ್ಕೂ ಕಾರಣರಾಗುವುದೆಂದರೆ…

ಹೌದು, ಮೊದಲೇ ಹುಡುಗು ಬುದ್ಧಿಯ ಮಕ್ಕಳು, ಶಿಳ್ಳೆ ಊದಿ ಕಿರಿಕಿರಿಯನ್ನುಂಟು ಮಾಡಿದ್ದು ಹೌದು. ಭಟ್ಟರೇ ಹೇಳುವಂತೆ ಮೊದಲಿಂದಲೂ ಅವರ ಹುಚ್ಚಾಟ ಮುಂದುವರೆದಿದ್ದರೆ ಅವರೇ ನೇರವಾಗಿ ಇಲ್ಲ ಇನ್ಯಾರನ್ನೋ ಕಳುಹಿಸಿ ಅವರಿಗೆ ಮೊದಲೇ ಎಚ್ಚರಿಸಬಹುದಿತ್ತು  ಬದಲು ಈ ರೀತಿ ಆಟದ ನಡುವೆ ಸ್ವಯಂ ಶ್ರೀ ಕೃಷ್ಣನ ಪರಕಾಯ ಪ್ರವೇಶದಿಂದ ಹೊರ ಬಂದು ಬನ್ಸ್ ತಿನ್ನಿ ಎನ್ನೋ ಸಂದರ್ಭವೇ ಬರುತ್ತಿರಲಿಲ್ಲ ಅಲ್ಲವೇ?.

ಭಗವಾನ್ ಕೃಷ್ಣನಿಲ್ಲದಿರುತ್ತಿದ್ದರೆ ಮಹಾಭಾರತದಲ್ಲಿ ಅರ್ಜುನಾದಿಯಾಗಿ ಪಾಂಡವರು ಎಂದೋ ಸತ್ತಿರುತ್ತಿದ್ದರು. ಒಂದು ನೂರಿನ್ನೂರು ಕಡೆ ಪಾಂಡವರನ್ನಾಗಲಿ ಸಖ ಅರ್ಜುನನ್ನಾಗಲಿ ಜಾಣ್ಮೆಯಿಂದ ಉಳಿಸಿದ್ದು ಶ್ರೀಕೃಷ್ಣ ತನ್ನನ್ನು ಹೀನಾಯವಾಗಿ ಸೋಲಿಸಿ ಕೊಲ್ಲದೆ ಜೀವಧಾನ ಮಾಡಿ ಅವಮಾನಿಸಿದ ಕರ್ಣನನ್ನು ಕೊಲ್ಲದೇ ಬಂದ ಅರ್ಜುನನ ಗಾಂಢೀವಕ್ಕೆ ಬೈದ ಅಣ್ಣ ಧರ್ಮರಾಯನನ್ನು ಅರ್ಜುನ ಅಲ್ಲೇ ಕೊಲ್ಲಹೋಗುತ್ತಾನೆ. ಒಂದು ವೇಳೆ ಅಣ್ಣನನ್ನು ಆತ ಅವತ್ತು  ಕೊಂದಿದ್ದರೆ ಭ್ರಾರ್ತೃ ಹತ್ಯಾ ಕೃತ್ಯಕ್ಕಾಗಿ ಅರ್ಜುನನು ಬೆಂಕಿಗೆ ಧುಮುಕುತ್ತಿದ್ದ.  ನಂತರ ಉಳಿದ ಪಾಂಡವರ ಸರದಿ. ಒಟ್ಟಾರೆ, ಯಾವ ಶಸ್ತ್ರಾಸ್ತ್ರ ಪ್ರಯೋಗವಿಲ್ಲದೆ ಕೌರವರು ಸುಲಭದಲ್ಲಿ ಗೆಲ್ಲುತ್ತಿದ್ದರು. ಆದರೆ ಈ ಅವಘಡವನ್ನು  ಜಾಣ್ಮೆಯಿಂದ ತಪ್ಪಿಸಿದ್ದು ಶ್ರೀಕೃಷ್ಣ.  ಇಂತಹ ಶ್ರೀ ಕೃಷ್ಣನ ಪಾತ್ರಧಾರಿಗೆ ಇಲ್ಲಿ  ಎಳೆ ಮಕ್ಕಳ ಶಿಳ್ಳೆಯನ್ನು ಸುಧಾರಿಸಲಾಗದ್ದು ಸ್ವಯಂ ಶ್ರೀಕೃಷ್ಣನಿಗೆ ಮಾಡಿದಂತ ಅವಮಾನ.

ಭಾಷಾ ಪ್ರೌಢಿಮೆಗೂ ಬಾಯಿ ಚಪಲಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಇದೇ ಮಹಾನುಭಾವರು ಹಿಂದೊಮ್ಮೆ ಮಹಿಳೆಯೊಬ್ಬರ ( ಸೌಜನ್ಯಾ ತಾಯಿ) ಸೆರಗಿನ ಬಗ್ಗೆ ತುಂಬಿದ ಸಭೆಯಲ್ಲಿ ತೀರಾ ಅಶ್ಲೀಲವಾಗಿ ಮಾತನ್ನಾಡಿದ್ದರು. ಯಾವುದೋ ಮಾತಿನ ಭರದಲ್ಲಿ ಬಂದಂತಹ ಮಾತೆಂದು ಅದನ್ನು ನಿರ್ಲಕ್ಷ್ಯ ಮಾಡೋಣವೆಂದರೆ ಅದು ಹಾಗಿಲ್ಲ. ಶಾಲೆಗೆ ಹೋಗಿ  ಮನೆಗೆ ಬರುವ ವೇಳೆಯಲ್ಲಿ ದುರುಳರಿಂದ ಅತ್ಯಾಚಾರಕ್ಕೊಳಗಾಗಿ  ಬರ್ಭರವಾಗಿ   ಹತ್ಯೆಗೊಳಗಾದ  ಎಳೆ ಪ್ರಾಯದ ವಿದ್ಯಾರ್ಥಿನಿಯೊಬ್ಬಳ  ತಾಯಿ ನಮಗೆ ನ್ಯಾಯ ಕೊಡಿ ಎಂದು ಸೆರಗೊಡ್ಡಿ ಬೇಡಿದ್ದ ಸಂಗತಿಯೇ  ಇವರಿಗೆ ಕೀಳು ದರ್ಜೆಯ ಹಾಸ್ಯದ ವಸ್ತು. ಎಂತಾ ದರಿದ್ರ ಸ್ಥಿತಿ.. 

ಇವರುಗಳು ತಮ್ಮ ಮೈಮೇಲಿನ ವೇಷ, ಬಣ್ಣವನ್ನು ಕಳಚುವ ಮುನ್ನ ತಮ್ಮ ನಾಲಗೆಗೆ ಅಂಟಿದ ಬಣ್ಣವನ್ನು ಚೆನ್ನಾಗಿ ಸೋಪು ಹಾಕಿ ತೊಳೆಯುವುದು ಉತ್ತಮ ಭಾಷೆಯೂ ಶುದ್ಧವಾದೀತು ಬನ್ಸೂ ಕೂಡ ರುಚಿ ಎನಿಸೀತು.

ಶಂಕರ್ ಸೂರ್ನಳ್ಳಿ

ಲೇಖಕರು.

More articles

Latest article

Most read