ದೇಶೀ ಬೆಳೆಗಾರರ ರಕ್ಷಣೆ; ಸೇಬು ಆಮದು ಮೇಲೆ ಹೆಚ್ಚಿನ ತೆರಿಗೆ ವಿಧಿಸಲು ಮನವಿ

Most read

ನವದೆಹಲಿ: ಹಿಮಾಚಲ ಪ್ರದೇಶ ಸೇರಿದಂತೆ ದೇಶದ ಸೇಬು ಬೆಳೆಗಾರರ ಹಿತಾಸಕ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸೇಬುಗಳ ಮೇಲಿನ ಅಮದು ಸುಂಕದಲ್ಲಿ ಸಾರ್ವತ್ರಿಕ ಹೆಚ್ಚಳವನ್ನು ಜಾರಿಗೆ ತರುವಂತೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖಂದ‌ರ್ ಸಿಂಗ್ ಸುಖು, ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದ್ದಾರೆ.

ದೆಹಲಿಯಲ್ಲಿ ಸಚಿವರನ್ನು ಬೇಟಿ ಮಾಡಿದ ಸುಖು ಅವರು ಟರ್ಕಿಯಿಂದ ಸೇಬು ಅಮದು ಮಾಡಿಕೊಳ್ಳುತ್ತಿರುವ ವಿಷಯಕ್ಕೆ ಸಂಬಂಧಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ರಾಜ್ಯದ ಸೇಬು ಬೆಳೆಗಾರರ ಹಿತಾಸಕ್ತಿಗಳಿಗೆ ಹಾನಿ ಮಾಡುತ್ತಿದೆ ಎಂದು ದೂರಿದ್ದಾರೆ.

ಇದೇ ಸಂದರ್ಭದಲ್ಲಿ ಹಿಮಾಚಲ ಮತ್ತು ಇತರ ವಿಶೇಷ ವರ್ಗದ ರಾಜ್ಯಗಳ ಸಾಲ ಮಿತಿಯನ್ನು ಕನಿಷ್ಠ ಎರಡು ಪ್ರತಿಶತದಷ್ಟು ಹೆಚ್ಚಿಸುವಂತೆ ಅವರು ಹಣಕಾಸು ಸಚಿವರಿಗೆ ಮನವಿ ಮಾಡಿಕೊಂಡರು. ಹಣಕಾಸು ನಿರ್ವಹಣೆಯನ್ನು ಸುಧಾರಿಸಲು ರಾಜ್ಯ ಸರ್ಕಾರ ತೆಗೆದುಕೊಂಡ ವಿವಿಧ ಉಪಕ್ರಮಗಳು ಮತ್ತು ಹಲವು ಆರ್ಥಿಕ ನಿರ್ಬಂಧಗಳ ಹೊರತಾಗಿಯೂ ಹಣಕಾಸು ಸಂಪನ್ಮೂಲಗಳನ್ನು ಹೆಚ್ಚಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಅವರು ಹಣಕಾಸು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

More articles

Latest article