ಬೆಂಗಳೂರು: ಯಾವುದೇ APL, BPL ಕಾರ್ಡ್ ರದ್ದು ಮಾಡಲಿಲ್ಲ, ಮಾಡುವುದೂ ಇಲ್ಲ. ಈ ವಿಷಯದಲ್ಲಿ ಬಿಜೆಪಿಯವರು ರಾಜಕೀಯ ಮಾಡಲು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.
ದೇವನಹಳ್ಳಿಯಲ್ಲಿ ಮಾತನಾಡಿದ ಅವರು, BPL ಕಾರ್ಡ್‌ಗೆ ಅರ್ಹರಲ್ಲದವರನ್ನು APL ಕಾರ್ಡ್ ಗೆ ವರ್ಗಾಯಿಸುತ್ತಿದ್ದೇವೆ. ತೆರಿಗೆ ಪಾವತಿಸುವವರ ಕಾರ್ಡ್ APLಗೆ ಬದಲಿಸುತ್ತೇವೆ. ಆದರೆ APL ಕಾರ್ಡ್ ರದ್ದು ಮಾಡುವುದಿಲ್ಲ ಎಂದು ಹೇಳಿದರು. ತೆಲಂಗಾಣ, ಆಂಧ್ರ, ತಮಿಳುನಾಡಿನಲ್ಲಿ ಶೇ.50ರಷ್ಟು BPL ಕಾರ್ಡ್ ಗಳಿವೆ. ಕರ್ನಾಟಕದಲ್ಲಿ ಶೇ.80ರಷ್ಟು BPL ಕಾರ್ಡ್‌ಗಳಿವೆ. ಅರ್ಹರಿಗೆ ಯೋಜನೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಬಿಪಿಎಲ್ ಕಾರ್ಡ್ ಪರಿಷ್ಕರಣೆ ಆರಂಭವಾಗಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಆದಾಯ ತೆರಿಗೆ ಪಾವತಿಸುವವರ ಬಿಪಿಎಲ್ ಕಾರ್ಡ್ ರದ್ದು ಮಾಡುವ ರಕ್ರಿಯೆ ಆರಂಭವಾಗಿದೆ. IT, GST ಕಟ್ಟುವವರ 10 ಸಾವಿರ ಕಾರ್ಡ್ ಗಳು ರದ್ದಾಗಿವೆ. ಈ ರೀತಿಯ ಕಾರ್ಡ್ ಗಳನ್ನು BPL ನಿಂದ APL ಗೆ ವರ್ಗಾವಣೆ ಮಾಡಲಾಗುತ್ತಿದೆ. ಈ ಮಧ್ಯೆ ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅರ್ಹರ BPL ಕಾರ್ಡ್ ಗಳನ್ನು ರದ್ದು ಮಾಡುವುದಿಲ್ಲ. ಬಡವರಿಗೆ ಕೊಡಬೇಕು, ಕೊಡ್ತಿದ್ದೀವಿ, ಕೊಡುತ್ತೇವೆ ಎಂದು ಹೇಳಿದ್ದಾರೆ. BJPಯವರು ಯಾವಾತ್ತಾದ್ರೂ ಅನ್ನಭಾಗ್ಯ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದ ಅವರು ಅನರ್ಹರ ಕಾರ್ಡ್ ಮಾತ್ರ ರದ್ದು ಮಾಡಲಾಗುತ್ತಿದೆ ಎಂದು ಹೇಳೀದ್ದರು.