Saturday, July 27, 2024

ಸಂಸದ ಅನಂತ್​ ಕುಮಾರ್ ಹೆಗಡೆ ವಿರುದ್ಧ ಸುಮೊಟೊ ಕೇಸ್ ದಾಖಲು

Most read

ಪ್ರಚೋದನಕಾರಿ ಹೇಳಿಕೆ ಹಾಗೂ ದ್ವೇಷ ಭಾಷಣ ಆರೋಪಗಳಡಿ ಬಿಜೆಪಿ ಸಂಸದ ಅನಂತ್​ ಕುಮಾರ್ ಹೆಗಡೆ ( Ananth Kumar Hegde) ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 505 ಹಾಗೂ 153ಎ ಅಡಿಯಲ್ಲಿ FIR ದಾಖಲಿಸಲಾಗಿದೆ.

ಕುಮುಟಾದಲ್ಲಿ ಶನಿವಾರ ನಡೆದಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಹೆಗಡೆ, ಬಾಬ್ರಿ ಮಸೀದಿ ನಿರ್ನಾಮವಾದಂತೆ ಭಟ್ಕಳದ ಚಿನ್ನದ ಪಳ್ಳಿಯೂ ಆಗಲಿದೆ. ಇದನ್ನು ಬೇಕಾದರೆ ಬೆದರಿಕೆ ಅಂತ ಬೇಕಾದರೂ ತಿಳಿಯಿರಿ. ಇದು ಹಿಂದೂ ಸಮಾಜದ ತೀರ್ಮಾನವೇ ವಿನಃ ಅನಂತಕುಮಾರ್ ಹೆಗಡೆ ತೀರ್ಮಾನ ಅಲ್ಲ. ಸಿರಸಿಯ ಸಿಪಿ ಬಜಾರ್​​ನಲ್ಲಿಯೂ ಮಸೀದಿ ಇದೆ. ಅದು ಈ ಹಿಂದೆ ವಿಜಯ ವಿಠ್ಠಲ ದೇವಸ್ಥಾನ ಆಗಿತ್ತು. ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿ ಮಾರುತಿ ದೇವಸ್ಥಾನವಾಗಿತ್ತು. ಇವತ್ತೂ ಅಲ್ಲಿಗೆ ಹೋದರೆ ಮಾರುತಿ ದೇವಸ್ತಾನ ಕಾಣುತ್ತದೆ ಎಂದು ಅನಂತಕುಮಾರ್ ಹೇಳಿದರು.

ಮುಂದುವರಿದು, “ಅಂದು ಇಂದಿರಾ ಗಾಂಧಿ ( Indira Gandhi) ಪ್ರಧಾನಿಯಾಗಿದ್ದಾಗ ಗೋ ಹತ್ಯೆ ನಿಷೇಧದ ಬಗ್ಗೆ ದೊಡ್ಡ ಆಂದೋಲನ ನಡೆದಿತ್ತು. ಈ ಆಂದೋಲನದಲ್ಲಿ ಗೋಲಿಬಾರ್ ನಡೆದು ಹತ್ತಾರು ಸಂತರು ಸತ್ತರು. ಇಂದಿರಾ ಗಾಂಧಿ ಸಮ್ಮುಖದಲ್ಲಿ ಈ ಹತ್ಯೆ ನಡೆಯಿತು” ಎಂದು ಆರೋಪಿಸಿದ್ದರು.

“ಕೆಲವರು ಜಾತಿ, ಭಾಷೆ, ಪ್ರಾದೇಶಿಕತೆ ( Cast, Language, Local Religious) ಹಾಗು ಇತರ ಹೆಸರಿನಲ್ಲಿ ಸಮಾಜ ಒಡೆಯುತ್ತಿದ್ದಾರೆ. ಈಗಲೂ ಅದೇ ಕೆಲಸ ನಡೆಯುತ್ತಿದೆ. ಆದರೂ ಕೂಡ ಸಮಾಜ ಒಟ್ಟಿಗೆ ನಿಂತಿದೆ. ಹೀಗಾಗಿ ಈಗಿನ ಗೆಲುವನ್ನು ಮುಂದಿನ ಶತಮಾನದಲ್ಲೂ ನೆನೆಯುವಂತಿರಬೇಕು. ಕೇಂದ್ರ ಗೃಹ ಸಚಿವ ಅಮಿತ್​ ಶಾ ಹೇಳಿರುವಂತೆ ಈ ಬಾರಿಯ ಗೆಲುವು ಮುಂದಿನ ದಿನಗಳಲ್ಲಿ ಅಳಿಸಲು ನಮ್ಮಿಂದಲೂ ಆಗಬಾರದು. ಗೆಲುವಿನ ಹೊಡೆತ ನಮ್ಮ ವಿರೋಧಿಗಳಿಗೆ ಆಗಬೇಕು. ನಮ್ಮ ವಿರೋಧ ಕಾಂಗ್ರೆಸ್​ ಅಲ್ಲ. ಆದರೆ, ನಮ್ಮ ವಿರೋಧಿ ಸಿದ್ದರಾಮಯ್ಯ” ಎಂದು ವಾಗ್ದಾಳಿ ನಡೆಸಿದ್ದರು.

ಸಂಸದ ಅನಂಕ್ ಕುಮಾರ್ ಹೆಗಡೆ ಹೇಳಿಕೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿತ್ತು‌. ಈಗ ವಿಷಯದ ಗಂಭೀರತೆ ಅರಿತ ಪೊಲೀಸರು ಸ್ವಯಂ ಪ್ರೇರಿತ ಫ್ರಕರಣ ದಾಖಲಿಸಿಕೊಂಡಿದೆ.

More articles

Latest article