ದೇಶದಲ್ಲಿ ಬಿಜೆಪಿಗೆ 400 ಸೀಟು ಬಂದರೆ ಕೇಂದ್ರದಲ್ಲಿ ನಮ್ಮ ಸರ್ಕಾರ ಬರುತ್ತೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ರಾಜ್ಯದಲ್ಲೂ ನಮ್ಮ ಸರ್ಕಾರವೇ ಇರುತ್ತೆ. ಆಗ ನೋಡಿ ಮಾರಿ ಹಬ್ಬ ಆರಂಭ ಆಗುತ್ತದೆ. ಅವಾಗ ನಮ್ಮ ತಲ್ವಾರದ ತುದಿ ಹೇಗೆ ಜಳಪಿಸುತ್ತೆ ನೋಡಿ ಎಂದು ಸಂಸದ ಅನಂತಕುಮಾರ್ ಹೆಗಡೆ ಮತ್ತೆ ಪ್ರಚೋದಾತ್ಮಕ ಹೇಳಿಕೆ ನೀಡಿದ್ದಾರೆ.
ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದ ಪ್ರಧಾನಿ ಮೋದಿ ಗ್ಯಾರಂಟಿ ಜಾರಿಯಲ್ಲಿದೆ. ದಿನದಿಂದ ದಿನಕ್ಕೆ ಭಾರತ ದೇಶ ಗಟ್ಟಿಯಾಗುತ್ತಿದೆ, ದೇಶ ಸಾಧನೆಯ ಕಡೆ ಹೊರಟಿದೆ. ನಾವೇನೂ ಹೇಳಿದ್ದೇವೆ ಅದನ್ನ ಮಾಡಿ ತೋರಿಸಿದ್ದೇವೆ. ಕಾಶ್ಮೀರ, ರಾಮಮಂದಿರ, ಮುಂದಿನ ದಿನಗಳಲ್ಲಿ ಮಥುರಾ ಕಾಶಿ ವಿಶ್ವನಾಥ ಇರಬಹುದು. ಇನ್ನು ಕೆಲವು ದೇವಾಲಗಳು ಇವತ್ತಲ್ಲ ನಾಳೆ ಹಿಂದುಗಳ ಸುಪರ್ದಿಗೆ ಬರುತ್ತವೆ. ಎಲ್ಲವೂ ಯಾವಾಗ ಸಾಧ್ಯ ಅಂದರೆ ಕೇಂದ್ರದಲ್ಲಿ ಮೋದಿ ಸರ್ಕಾರದ ಬಂದಾಗ. ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಸರ್ಕಾರ ಪತನ ಆಗುತ್ತದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಲ್ಲಿ ಉತ್ತರ ಕನ್ನಡ ಕ್ಷೇತ್ರದಿಂದ ಇದುವರೆಗೆ ಯಾರು ನಿಲುತ್ತಾರೆ ಗೊತ್ತಿಲ್ಲ, ಆದರೆ ಖಾನಾಪುರ ಮತಕ್ಷೇತ್ರದಲ್ಲಿ ರಿಜೆಕ್ಟ್ ಮೆಟೀರಿಯಲ್ ಲೋಕಸಭಾ ಕ್ಯಾಂಡಿಡೆಟ್ ಆಗಲಿದ್ದಾರಂತೆ ಎಂಬ ವದಂತಿ ಇದೆ. ಎಂದು ಪರೋಕ್ಷವಾಗಿ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳಕರ್ ವಿರುದ್ಧ ಟೀಕಿಸಿದ್ದಾರೆ.