ಮೋದಿ ಸಮಾವೇಶದಲ್ಲಿ ಅನಂತ್ ಕುಮಾರ್ ಹೆಗಡೆ ಪೋಟೋಗೆ ಕೋಕ್: ಕಾಗೇರಿಗೆ ಬಿಜೆಪಿಗರಿಂದಲೇ ಒಳಪೆಟ್ಟು

ಲೋಕಸಭಾ ಚುನಾವಣಾ ಪ್ರಚಾರ ಅಂಗವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಆಗಮಿಸುತ್ತಿದ್ದು, ಆದರೆ ಈ ಸಮಾವೇಶದಲ್ಲಿ ಹಾಲಿ ಸಂಸದರಾದ ಅನಂತಕುಮಾರ ಹೆಗಡೆ ಅವರ ಪೋಟೋಗೆ ಕೋಕ್ ನೀಡಲಾಗಿದ್ದು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ.

ಉತ್ತರ ಕನ್ನಡ ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಲಿ ಸಂಸದ ಅನಂತ್ ಕುಮಾರ್ ಹೆಗಡೆ ಅವರಿಗೆ ಈ ಬಾರಿ ಟಿಕೆಟ್ ನೀಡಲು ಬಿಜೆಪಿ ನಿರಾಕರಿಸಿತ್ತು.‌ ಬಿಜೆಪಿ ನಡೆಯನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು ಸಹ ಬಿಜೆಪಿ ಪಕ್ಷ ಮಾಜಿ ಸ್ಪೀಕರ್ ಕಾಗೇರಿ ಅವರಿಗೆ ಮಣೆ ಹಾಕಿದೆ. ಈಗ ಮೋದಿ ಸಮಾವೇಶದಲ್ಲೂ ಹೆಗಡೆ ಅವರ ಪೋಟೋ ಇಲ್ಲದಿರುವುದು ಅಭಿಮಾನಿಗಳಿಗೆ ಹಾಗೂ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಅನಂತ್ ಕುಮಾರ್ ಹೆಗಡೆ ಅವರ ಸ್ವಕ್ಷೇತ್ರದಲ್ಲಿ ನಡೆಯುತ್ತಿರುವ ಮೋದಿ ಸಮಾವೇಶದಲ್ಲಿ ಹೆಗಡೆ ಪೋಟೋವನ್ನೇ ಕಡೆಗಣಿಸಿರುವುದು ಈಗ ಬಿಜೆಪಿ ಕಾರ್ಯಕರ್ತರಲ್ಲಿ ಬೇಸರ ಉಂಟುಮಾಡಿದೆ. ಬಿಜೆಪಿಯ ಈ ನಡೆಯಿಂದಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಗೇರಿಗೆ ಹಿನ್ನಡೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಅನಂತ್ ಕುಮಾರ್ ಹೆಗಡೆ ಅವರು ಏಳು ಬಾರಿ ಉತ್ತರ ಕನ್ನಡದಿಂದ ಸ್ಪರ್ಧಿಸಿ ಆರು ಬಾರಿ ಸಂಸದರಾಗಿದ್ದಾರೆ. ಒಂದು ಬಾರಿ ಕೇಂದ್ರ ಮಂತ್ರಿ ಕೂಡ ಆಗಿದ್ದಾರೆ. ಅಂತವರನ್ನು ಉತ್ತರ ಕನ್ನಡದಲ್ಲಿ ಕಡೆಗಣಿಸಿದರೆ ಈ ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿ ಪೆಟ್ಟು ತಿನ್ನಲಿದೆ. ಇದು ಕಾಂಗ್ರೆಸ್ ಗೆಲುವಿಗೆ ಮತ್ತೊಂದು ಮೆಟ್ಟಿಲಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

More articles

Latest article

Most read