ಏರ್ ಇಂಡಿಯಾ ವಿಮಾನ ಹಾರಾಟದಲ್ಲಿ ವ್ಯತ್ಯಯ; 8 ವಿಮಾನಗಳ ಹಾರಾಟ ರದ್ದು

ನವದೆಹಲಿ: ಗುಜರಾತ್‌ ನ ಅಹಮದಾಬಾದ್‌ ನಲ್ಲಿ ಇತ್ತೀಚೆಗೆ ಸಂಭವಿಸಿದ ವಿಮಾನ ಅಪಘಾತದ ನಂತರ ಏಋ ಇಂಡಿಯಾ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಇಂದು ಮತ್ತೆ ನಿರ್ವಹಣೆ ಮತ್ತು ಕಾರ್ಯಾಚರಣೆ ಸಂಬಂಧಿತ ಕಾರಣಗಳಿಂದಾಗಿ 4 ದೇಶೀಯ ಮತ್ತು 4 ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

ಅಂತರರಾಷ್ಟ್ರೀಯ ವಿಮಾನಗಳಾದ ದುಬೈ-ಚೆನ್ನೈ AI906, ದೆಹಲಿ- ಮೆಲ್ಲೋರ್ನ್ AI308, ಮೆಲ್ಲೋರ್ನ್-ದೆಹಲಿ AI309, ದುಬೈ-ಹೈದರಾಬಾದ್ AI2204; ದೇಶೀಯ ವಿಮಾನಗಳಾದ ಪುಣೆ- ದೆಹಲಿ AI874, ಅಹಮದಾಬಾದ್- ದೆಹಲಿ AI456, ಹೈದರಾಬಾದ್-ಮುಂಬೈ AI-2872, ಚೆನ್ನೈ-ಮುಂಬೈ AI571 ಹಾರಾಟ ರದ್ದುಗೊಂಡಿದೆ ಎಂದು ಏರ್‌ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ಟಿಕೆಟ್‌ ಬುಕ್‌ ಮಾಡಿದ್ದ ಪ್ರಯಾಣಿಕರಿಗೆ ಟಿಕೆಟ್ ರದ್ದು ಮಾಡಿದ ಹಣವನ್ನು ಮರಳಿಸಲಾಗುತ್ತದೆ. ಇಲ್ಲವೇ ಪ್ರಯಾಣದ ಟಿಕೆಟ್‌ ಅನ್ನು ಉಚಿತವಾಗಿ ಮರುನಿಗದಿ ಮಾಡಿಕೊಡಲಾಗುವುದು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಚೆನ್ನೈನಿಂದ ಮದುರೈಗೆ ಹೊರಟಿದ್ದ ಇಂಡಿಗೊ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ವಿಮಾನ ಚೆನ್ನೈಗೆ ಮರಳಿದೆ. ವಿಮಾನದಲ್ಲಿ 68 ಜನ ಪ್ರಯಾಣಿಕರಿದ್ದರು. ಚೆನ್ನೈನಲ್ಲಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ಇಂಡಿಗೊ ಅಧಿಕಾರಿಗಳು ತಿಳಿಸಿದ್ದಾರೆ.

More articles

Latest article

Most read