ನಿದ್ದೆ ಮಾಡಲಾಗದ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಕನಕಲತಾ ನಿಧನ..!

ಕನಕಲತಾ ಮಲಯಾಳಂನ ಫೇಮಸ್ ನಟಿ. ಆದರೆ ಈಕೆಗೆ ನಿದ್ದೆ ಮಾಡಲಾಗದಂತ ಕಾಯಿಲೆ ಕಾಡುತ್ತಿತ್ತಂತೆ. ದಿರ್ಘಕಾಲದ ಈ ಅನಾರೋಗ್ಯದಿಂದ ತಮ್ಮ ನಿವಾಸದಲ್ಲಿಯೇ ನಿಧನರಾಗಿದ್ದಾರೆ. ಕನಕಲತಾ ಅವರಿಗೆ 64 ವರ್ಷ ವಯಸ್ಸಾಗಿತ್ತು.

ಕನಕಲತಾ ಅವರಿಗೆ ಇದ್ದ ಕಾಯಿಲೆಯಿಂದ ತನ್ನ ಹೆಸರನ್ನೇ ಮರೆತು ಹೋಗಿದ್ದರಂತೆ. ತುಂಬಾನೇ ಆರೋಗ್ಯ ಹದಗೆಟ್ಟಿತ್ತಂತೆ. ತನ್ನ ಕೊನೆಯ ಗಳಿಗೆಯಲ್ಲಿ ಸಹೋದರಿಯ ಜೊತೆಗೆ ವಾಸ ಮಾಡುತ್ತಿದ್ದರು. ಮೋಹನ್ ಲಾಲ್ ಜೊತೆಗೆ ತನ್ಮಾತ್ರ ಸಿನಿಮಾ ಮಾಡುವಾಗಲೇ ಮಾನಸಿಕ ಆರೋಗ್ಯ ಹದಗೆಟ್ಟಿತ್ತಂತೆ. 2021ರ ಲಾಕ್ಡೌನ್ ಸಮಯದಲ್ಲಿ ತುಂಬಾನೇ ಮೌನಕ್ಕೆ ಜಾರಿದ್ದರಂತೆ. ಆ ಬಳಿಕ ಬುದ್ದಿಮಾಂದ್ಯ ಲಕ್ಷಣಗಳು ಕಾಣಿಸಲು ಶುರುವಾಯಿತಂತೆ‌. ದಿನಕಳೆದಂತೆ ತಿನ್ನುವುದನ್ನೇ ಕಡಿಮೆ ಮಾಡಿದ್ದರಂತೆ. ಒಮ್ಮೊಮ್ಮೆ ತಿನ್ನದೆ ಉಳಿದು ಬಿಡುತ್ತಿದ್ದರಂತೆ. ತಾನೇ ಮಾಡಿದ ಸಿನಿಮಾಗಳನ್ನು ನೋಡಿದರು ಅವರಿಗೆ ಆ ಸಿನಿಮಾದಲ್ಲಿ ಅಭಿನಯಿಸಿದ್ದು ನಾನೇ ಎಂಬುದನ್ನು ಗುರುತಿಸಲು ಕಷ್ಟಸಾಧ್ಯವಾಗಿತ್ತಂತೆ.

ಕನಕಲತಾ ಅವರು ಕೇರಳದ ಕೊಲ್ಲಂನಲ್ಲಿ ಜನಿಸಿದ್ದರು‌. ಸಿನಿನಾ ರಂಗಕ್ಕೆ ಬರಬೇಕು ಎಂಬ ಆಸೆಯಿಂದ ರಂಗಭೂಮಿ ಕಡೆಗೆ ಮುಖ ಮಾಡಿದರು. ಸುಮಾರು 30 ವರ್ಷಗಳ ಕಾಲ ರಂಗಭೂಮಿ, ಸಿನಿಮಾ, ಸೀರಿಯಲ್ ನಲ್ಲಿ ತಮ್ಮ ಜೀವನ ಸವೆಸಿದ್ದಾರೆ. 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿಲ್, ಕರಿಲಕಾಟ್ ಲೈಕ್, ಜಾಗೃತ, ಕರಿಯಂ ವರ್ಣಕಿತ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ನಟಿಗೆ ಕಡೆ ಗಳಿಗೆಯಲ್ಲಿ ತಾನು ಯಾರು ಎಂಬುದು ನೆನಪಿಲ್ಲದೆ ನಿಧನರಾಗುವ ಪರಿಸ್ಥಿತಿ ಬಂದಿದ್ದಕ್ಕೆ ಅಭಿಮಾನಿಗಳು ನೋವು ಪಟ್ಟುಕೊಂಡಿದ್ದಾರೆ.

More articles

Latest article

Most read