ಹಸುಗಳ ರಕ್ಷಣೆಗಾಗಿ ಪ್ರಾಣತೆತ್ತವನ ಶೌರ್ಯಗಾಥೆ: ಹೊಯ್ಸಳಕಟ್ಟೆಯಲ್ಲಿ ಪತ್ತೆಯಾದ ಅಪರೂಪದ ವೀರಗಲ್ಲು ಶಾಸನ

ತುಮಕೂರು: ಇಂದಿನ ಕಾಲದಲ್ಲಿ ಆಸ್ತಿ-ಪಾಸ್ತಿಗಾಗಿ ಹೋರಾಟ ನಡೆಯುವುದು ಸಾಮಾನ್ಯ. ಆದರೆ ಶತಮಾನಗಳ ಹಿಂದೆ ತನ್ನ ಗ್ರಾಮದ ಗೋಸಂಪತ್ತನ್ನು ರಕ್ಷಿಸಲು ಹೋರಾಡಿ ವೀರಮರಣವನ್ನಪ್ಪಿದ ವೀರನೊಬ್ಬನ ಅಪರೂಪದ  ಶಾಸನ ಈಗ ತುಮಕೂರು ಜಿಲ್ಲೆಯಲ್ಲಿ ಪತ್ತೆಯಾಗಿದೆ. ಇಲ್ಲಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆ ಗ್ರಾಮದ ಖಾಸಗಿ ಜಮೀನೊಂದರಲ್ಲಿ ‘ತುರುಗೋಳ್ ವೀರಗಲ್ಲು’ ಎಂಬ ಐತಿಹಾಸಿಕ ಶಾಸನವು ಇತಿಹಾಸ ಸಂಶೋಧಕರ ಗಮನ ಸೆಳೆದಿದೆ.

ಪ್ರಾಚೀನ ಕಾಲದಲ್ಲಿ ಹಸುಗಳನ್ನು ಮಹತ್ತರ ಸಂಪತ್ತು ಎಂದು ಪರಿಗಣಿಸಲಾಗುತ್ತಿತ್ತು. ಶತ್ರು ಪಾಳಯದವರು ಗ್ರಾಮದ ಹಸುಗಳನ್ನು ಅಪಹರಿಸಲು ಬಂದಾಗ, ಅದನ್ನು ತಡೆದು ನಿಂತ ‘ಒಡ್ಡಹಳ್ಳಿ’ ಮೂಲದ ವೀರನೊಬ್ಬನ ಹೋರಾಟದ ಚಿತ್ರಣ ಈ ಕಲ್ಲಿನಲ್ಲಿದೆ. ಈ ವೀರಗಲ್ಲಿನಲ್ಲಿ ವೀರನು ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಕೊಡಲಿಯನ್ನು ಹಿಡಿದು ನಿಂತಿದ್ದಾನೆ. ಅವನ ಪಕ್ಕದಲ್ಲಿ ಹಸುಗಳ ಚಿತ್ರವಿದ್ದು, ಮೇಲ್ಭಾಗದಲ್ಲಿ ಸೂರ್ಯ ಮತ್ತು ಚಂದ್ರರ ಕೆತ್ತನೆಯಿದೆ. ಇದು ಆ ವೀರನ ಸಾಹಸವು ಕಾಲಕಾಲಕ್ಕೂ ಅಜರಾಮರ ಎಂಬುದನ್ನು ಸಾಂಕೇತಿಕವಾಗಿ ಸಾರುತ್ತಿದೆ.

ವೀರಗಲ್ಲಿನ ಬುಡದಲ್ಲಿ ಹಳೆಯ ಕನ್ನಡ ಲಿಪಿಯ ಎರಡು ಸಾಲುಗಳಿವೆ. ಗ್ರಾಮದ ಹಸುಗಳಿಗಾಗಿ ಪ್ರಾಣತ್ಯಾಗ ಮಾಡಿದ ಈ ವೀರನ ಕುಟುಂಬಕ್ಕೆ ಅಂದಿನ ಕಾಲದಲ್ಲಿ ‘ಒಂದು ಸಲಗೆ’ಯಷ್ಟು ಕೃಷಿ ಭೂಮಿಯನ್ನು ದಾನವಾಗಿ ನೀಡಿದ್ದ ಬಗ್ಗೆ ಇಲ್ಲಿ ಉಲ್ಲೇಖಿಸಲಾಗಿದೆ.

ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಈ ಶಾಸನದ ಮಹತ್ವವನ್ನು ಸಾರಲು ಬುಕ್ಕಾಪಟ್ಟಣದ ಸರ್ಕಾರಿ ಕಾಲೇಜಿನ ಇತಿಹಾಸ ವಿಭಾಗ ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ ಜಂಟಿಯಾಗಿ ಸ್ಥಳದಲ್ಲೇ ವಿಶೇಷ ಅಧ್ಯಯನ ಶಿಬಿರವನ್ನು ಹಮ್ಮಿಕೊಂಡಿದ್ದವು. ಪ್ರಾಂಶುಪಾಲೆ ಧರಣೇಂದ್ರ ಕುಮಾರಿ ಹಾಗೂ ಇತಿಹಾಸ ಸಂಶೋಧಕ ಸತೀಶ್ ಕುಮಾರ್ ನಾಯಕ್ ಅವರು ವಿದ್ಯಾರ್ಥಿಗಳಿಗೆ ಈ ವೀರಗಲ್ಲಿನ ಐತಿಹಾಸಿಕ ಹಿನ್ನಲೆಯನ್ನು ವಿವರಿಸಿದರು.

More articles

Latest article

Most read