ಸಮತೋಲಿತ ಐತಿಹಾಸಿಕ ಬಜೆಟ್; ಚಲುವರಾಯಸ್ವಾಮಿ ಬಣ್ಣನೆ

Most read

ಬೆಂಗಳೂರು: ಮುಖ್ಯಮಂತ್ರಿರವರು ಇಂದು ಅತ್ಯಂತ ಜನಪರ ಬಜೆಟ್-2025 ಮಂಡಿಸಿದ್ದಾರೆ . ಇದೊಂದು ಸಮತೋಲಿತ ಬಜೆಟ್ ಆಗಿದ್ದು, ಎಲ್ಲಾ ವರ್ಗದ ಜನರ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸರ್ವರನ್ನು ಒಳಗೊಂಡ ಚಾರಿತ್ರಿಕ 2025-26ನೇ ಸಾಲಿನ ಆಯವ್ಯಯ ರೂಪಿಸಲಾಗಿದೆ. ಬಜೆಟ್ ನಲ್ಲಿ ರಾಜ್ಯದ ರೈತ ಕಲ್ಯಾಣ ಉದ್ದೇಶಿತ ಯೋಜನೆಗಳಿಗೆ ವಿವಿಧ ಇಲಾಖೆಗಳ ಮೂಲಕ ರೂ.51339 ಕೋಟಿ ಮೀಸಲಿಡಲಾಗಿದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ದಾರೆ.

ಬಜೆಟ್ ನಲ್ಲಿ ಕೃಷಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದ್ದು, ರೈತರ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಕೃಷಿ ಮತ್ತು ತೋಟಗಾರಿಕೆಗೆ ರೂ.7145 ಕೋಟಿ ಮೀಸಲಿಡಲಾಗಿದೆ. ಬಡವರು ಜನಸಾಮಾನ್ಯರಿಗೆ ಇನ್ನಷ್ಟು ಶಕ್ತಿ ತುಂಬುವಂತಹ ಅತ್ಯಂತ ಕಡಿಮೆ ತೆರಿಗೆಯ ಬಜೆಟ್ ಇದಾಗಿದೆ. ಶಿಕ್ಷಣ, ಮಹಿಳಾ ಸಬಲೀಕರಣ, ಗ್ರಾಮೀಣಾಭಿವೃದ್ಧಿ, ನೀರಾವರಿ, ವಸತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕ್ಷೇತ್ರಗಳಿಗೆ ಹೆಚ್ಚಿನ ಆಧ್ಯತೆ ನೀಡಿ ಅನುದಾನ ಮೀಸಲಿರಿಸುವುದು ಸ್ವಾಗತಾರ್ಹ. ಕೃಷಿ, ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರಕ್ಕೆ ಶೇಕಡಾ 14 ರಷ್ಟು ಅನುದಾನ ಮೀಸಲಿರಿಸಿದೆ ಎಂದಿದ್ದಾರೆ.

ಎಲ್ಲಾ ಸಮಾಜಕ್ಕೂ ಬದುಕಿನ ಉನ್ನತೀಕರಣಕ್ಕೆ ಬೇಕಾಗುವಂತಹ ನೆರವು ಮತ್ತು ಪ್ರೋತ್ಸಾಹವನ್ನು ಗಮನದಲ್ಲಿಟ್ಟುಕೊಂಡು ಈ ಬಜೆಟ್ ಮಂಡಿಸಲಾಗಿದೆ. ಸನ್ಮಾನ್ಯ ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕೃಷಿ ಯಾಂತ್ರೀಕರಣ ಯೋಜನೆ 50 ಸಾವಿರ ರೈತರಿಗೆ ಸಹಾಯಧನ ಒದಿಗಸಲು ರೂ.478 ಕೋಟಿಗಳ ಅನುದಾನ ಮೀಸಲು; ಮಳೆಯಾಶ್ರಿತ ಪ್ರದೇಶಗಳಲ್ಲಿ ಕೃಷಿ ಉತ್ಪಾದನೆ ಹೆಚ್ಚಿಸಲು 1.81 ಲಕ್ಷ ರೈತರಿಗೆ ರೂ.440 ಕೋಟಿಗಳ ಸಹಾಯಧನದಲ್ಲಿ ಹನಿ ಮತ್ತು ತುಂತುರು ನೀರಾವರಿ ಘಟಕ ವಿತರಣೆ; ರಾಷ್ಟ್ರದಲ್ಲಿ ಕರ್ನಾಟಕವನ್ನು ತೊಗರಿಬೆಳೆಯಲ್ಲಿ ಮುಂಚೂಣಿ ರಾಜ್ಯವನ್ನಾಗಿಸಲು ರೂ.88 ಕೋಟಿಗಳು ಮೀಸಲು; ಪ್ರಸಕ್ತ ಸಾಲಿನಲ್ಲಿ 5000 ಕಿರು ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕ್ರಮ; ಹವಾಮಾನ ವಲಯಗಳನ್ನು ಮರು ವರ್ಗೀಕರಣ, ಮರು ವ್ಯಾಖ್ಯಾನಗೊಳಿಸಲು ತಜ್ಞರ ಸಮಿತಿ ರಚನೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರಿಗೆ ಕೃಷಿಯನ್ನು ಸುಸ್ಥಿರ ಮತ್ತು ಲಾಭದಾಯಕವಾಗಿಸಲು 10 ಹವಾಮಾನ ವಲಯಗಳಲ್ಲಿ ಸಮಗ್ರ ಕೃಷಿ ಪದ್ಧತಿ ಮಾದರಿ ಪ್ರಾತ್ಯಕ್ಷಿಕೆ ತಾಕು ಅಭಿವೃದ್ಧಿ; ಕೃಷಿ ಭಾಗ್ಯ ಯೋಜನೆಯಡಿ 12000 ಕೃಷಿ ಹೊಂಡಗಳ ನಿರ್ಮಾಣ; ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನ ಎ.ಐ ಮತ್ತು ಜಿಯೋ ಸ್ಪೇಷಿಯಲ್ ಕ್ಷೇತ್ರಗಳ ಆವಿಷ್ಕಾರ ಬಳಕೆ; ಡಿಜಿಟಲ್ ಕೃಷಿ ಸೇವೆ ಸ್ಥಾಪನೆ; ಸಮಗ್ರ ಮಳೆಯಾಶ್ರಿತ ಕೃಷಿ ನೀತಿ ಜಾರಿ ಮಣ್ಣು ಪರೀಕ್ಷೆ ಹಾಗೂ ರಸಗೊಬ್ಬರ, ಬಿತ್ತನೆಬೀಜ, ಔಷಧಿ, ಜೈವಿಕ ಗೊಬ್ಬರಗಳ ಪರೀಕ್ಷೆಗೆ ಹಾಲಿ ಇರುವ 58 ಪ್ರಯೋಗಾಲಯಗಳ ತಾಂತ್ರಿಕ ಬಲವರ್ಧನೆ; ಸುಸ್ಥಿರ ಸಾವಯವ ಕೃಷಿ ಉತ್ತೇಜನಕ್ಕೆ ಉತ್ತರ ಕರ್ನಾಟಕ ಜಿಲ್ಲೆಯ ಜೋಯ್ಡಿಡಾ ತಾಲ್ಲೂಕನ್ನು ರಾಜ್ಯದ ಪ್ರಥಮ ತಾಲ್ಲೂಕನ್ನಾಗಿ ಪರಿವರ್ತನೆ. ಸಾವಯವ ಉತ್ಪನ್ನ ಮಾರುಕಟ್ಟೆ ಹಾಗೂ ಪ್ರಮಾಣೀಕರಣ ವ್ಯವಸ್ಥೆ ಜಾರಿ ; ಬೆಳಗಾವಿ, ಬಾಗಲಕೋಟೆ, ಕಲ್ಬುರ್ಗಿ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಸಕ್ಕರೆ ಕಾರ್ಖಾನೆಗಳ ಸಹಯೋಗದೊಂದಿಗೆ 3000 ಹೆಕ್ಟೇರ್ ಪ್ರದೇಶದಲ್ಲಿ ಮಣ್ಣು ಮತ್ತು ನೀರಿನ ನಿರ್ವಹಣೆ, ತ್ಯಾಜ್ಯ ನಿರ್ವಹಣೆ ಮತ್ತು ಪೋಷಕಾಂಶ ನಿರ್ವಹಣೆ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಜೈವಿಕ ಕೃಷಿ ಪರಿಕರಗಳ ಸ್ಟಾರ್ಟ್ಅಪ್ಗಳ ಉತ್ಪನ್ನಗಳನ್ನು ರೈತರಿಗೆ ಸೂಕ್ತ ದರದಲ್ಲಿ ಮಾರಾಟ; ವಿಶ್ವಬ್ಯಾಂಕ್ ರಿವಾರ್ಡ್ ಯೋಜನೆಯಲ್ಲಿ 11 ಲಕ್ಷಗಳ ಹೆಕ್ಟೇರ್ ಪ್ರದೇಶದಲ್ಲಿ ಸಮೀಕ್ಷೆ ಪೂರ್ಣಗೊಳಿಸಿ ಬೆಳೆಗಳ ಉತ್ಪಾದನೆ ಹೆಚ್ಚಿಸಲು ಕ್ರಮ; ಮಂಡ್ಯ ಕೃಷಿ ವಿಶ್ವವಿದ್ಯಾಲಯ ಮೂಲಭೂತ ಸೌಕರ್ಯ ಕಲ್ಪಿಸಲು ರೂ.25 ಕೋಟಿ ಅನುದಾನ ಪ್ರಸಕ್ತ ಸಾಲಿನಲ್ಲೇ ತರಗತಿ ಪ್ರಾರಂಭ; ಬರ ಮತ್ತು ರೋಗ ನಿರೋಧಕ ಲಕ್ಷಣಗಳ ಸಂಶೋಧನೆ ಹಾಗೂ ಉತ್ತಮ ತಳಿ ಅಭಿವೃದ್ಧಿಗೆ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನಗಳ ಕೇಂದ್ರದಲ್ಲಿ ಸಸ್ಯ ಫೀನೋಟೈಪಿಂಗ್ ಸೌಲಭ್ಯ ; ರೂ.20 ಕೋಟಿಗಳ ಮತ್ತದಲ್ಲಿ ಸಾವಯವ ಮತ್ತು ಸಿರಿಧಾನ್ಯಗಳ ಹಬ್ ಸ್ಥಾಪನೆ – ರೈತರಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯ; ವಿಜಯಪುರದ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಕೃಷಿ ಸಂಶೋಧನೆ ಕೇಂದ್ರ ಸ್ಥಾಪನೆ; ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಕೃಷಿ ಕಾಲೇಜು ಸ್ಥಾಪಿಸಲು ಕಾರ್ಯಾಸಾಧನೆ ವರದಿ ಪಡೆಯಲು ತಜ್ಞರ ಸಮಿತಿ; ನಬಾರ್ಡ್ ರಿಯಾಯಿತಿ ಬಡ್ಡಿ ದರದಲ್ಲಿ ನೀಡುವ ಪುನರ್ ಧನದ ಮಿತಿಯನ್ನು ಶೇಕಡಾ 58 ರಷ್ಟು ಇಳಿಕೆ ಮಾಡಿದ್ದರೂ ಸಹ ರೈತರ ಹಿತದೃಷ್ಟಿಯಿಂದ 2025-26ನೇ ಸಾಲಿನಲ್ಲಿ 37 ಲಕ್ಷ ರೈತರಿಗೆ ರೂ.28000 ಕೋಟಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಸಚಿವ ಚಲುವರಾಯಸ್ವಾಮಿ ವಿವರಿಸಿದ್ದಾರೆ.

More articles

Latest article