ಬೆಂಗಳೂರಿನ ಪಾರಂಪರಿಕ ತಾಣವಾದ ಜಯನಗರದ ಅಶೋಕ ಪಿಲ್ಲರ್ ಬಳಿ ಅಕ್ರಮ ಕಟ್ಟಡ ತಲೆ ಎತ್ತುತ್ತಿದ್ದರು ಈ ಕುರಿತು ಬಿಬಿಎಂಪಿ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಅಶೋಕ ಪಿಲ್ಲರ್ ಬಳಿ ಅಕ್ರಮ ಕಟ್ಟಡ ನಿರ್ಮಾಣ ವಾಗುತ್ತಿರುವ ಕುರಿತು ಕ್ರಮಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ಬಿಬಿಎಂಪಿ ಮಾಹಿತಿ ಪ್ರಕಾರ, ಈ ಜಮೀನು ಕೆ ದುಷ್ಯಂತ್ ಕುಮಾರ್ ಅವರಿಗೆ ಸೇರಿದ್ದು, 691 ಚದರ ಮೀಟರ್ ಭೂಮಿಯಲ್ಲಿ ಕಮರ್ಷಿಯಲ್ ಕಟ್ಟಡ ನಿರ್ಮಿಸಲು ಬೇಸ್ ಮೆಂಟ್ ಸೇರಿ 3 ಅಂತಸ್ಥಿಗೆ ಅನುಮತಿ ಕೋರಿ ಬಿಬಿಎಂಪಿಯಿಂದ ಅನುಮತಿ ಪಡೆದಿದ್ದಾರೆ.
ಆದರೆ ಬಿಲ್ಡರ್ ಕಾನೂನು ಉಲ್ಲಂಘಿಸಿ ಮತ್ತೆ ಮೂರು ಅಂತಸ್ಥಿನ ಮಹಡಿ ನಿರ್ಮಿಸಿದ್ದಾರೆ ಎಂದು ಸ್ಥಳೀಯರು ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದಮೇಲೆ ಬಿಬಿಎಂಪಿ ವಿಚಾರಣೆ ನಡೆಸಿದ್ದು, ಈ ಕುರಿತು ಯಾವುದೇ ಕ್ರಮ ಕೈಕೊಳ್ಳದ ಕಾರಣ ಸ್ಥಳೀಯರು ಬಿಬಿಎಂಪಿ ವಿರುದ್ದ ಕಿಡಿಕಾರಿದ್ದಾರೆ.
ಸ್ಥಳೀಯರ ಪ್ರಕಾರ, ಬಿಬಿಎಂಪಿ ನಿಯಮ ಮತ್ತು ಬಯಲದ ಪ್ರಕಾರ ಪಾಪಂಪರಿಕ ತಾಣಗಳಲ್ಲಿ ಈತರಹದ ಕಟ್ಟಡ ನಿರ್ಮಿಸಲು ಅನುಮತಿ ಇಲ್ಲದಿದ್ದರೂ ಕಾನೂನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮಂಜೂರಾದ ಪ್ಲಾನ್ ಅನುಸರಿಸುವಂತೆ ಬಿಲ್ಡರ್ಗೆ ನೋಟಿಸ್ ನೀಡಿದ್ದೇವೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದರೂ ಕಾಮಗಾರಿ ಸ್ಥಗಿತಗೊಂಡಿಲ್ಲ ಎಂದು ಸ್ಥಳ ಪರಿಶೀಲನೆ ವೇಳೆ ತಿಳಿದುಬಂದಿದೆ.