ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ಮಹಾನಗರದ ಮೂರು ಕ್ಷೇತ್ರಗಳು ಪ್ರಮುಖ ಹಾಗೂ ಮಹತ್ವದ್ದಾಗಿವೆ.ಅದರಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಕೂಡ ಒಂದು.ಅತಿ ಹೆಚ್ಚು ಮತದಾರರನ್ನ ಹೊಂದಿರುವ ಕ್ಷೇತ್ರವೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.ಈ ಕ್ಷೇತ್ರದಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿದ್ದು,ಮಾಜಿ ಸಿಎಂ ಹಾಗೂ ಮಾಜಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡರು ಕಳೆದ ಎರಡು ಭಾರಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಬಿಜೆಪಿಯ ಭದ್ರ ಕೋಟೆಯಾಗಿರುವ ಬೆಂ.ಉತ್ತರ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಬಿಜೆಪಿ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.
ಎರಡು ಭಾರಿ ಸಂಸದರಾಗಿ ಆಯ್ಕೆಯಾಗಿ ಕೇಂದ್ರ ಸಚಿವರಾಗಿ ಕೆಲಸ ನಿರ್ವಹಿಸಿರುವ ಗೌಡರಿಗೆ ಕ್ಷೇತ್ರದಲ್ಲಿ ಪ್ರಭಾವವಿದ್ದರೂ ಅವರ ಮೇಲೆ ಬಂದ ಕೆಲವು ಆರೋಪಗಳು, ಅಪವಾದಗಳು ರಾಜಕೀಯ ಭವಿಷ್ಯದ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಈ ಬಾರಿ ಬಿಜೆಪಿ ಸದಾನಂದಗೌಡರಿಗೆ ಟಿಕೆಟ್ ನಿರಾಕರಿಸಿ ಶೋಭಾ ಕರಂದ್ಲಾಜೆಗೆ ಮಣೆಯಾಕಿದೆ.
ಬೆಂ.ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಹೋಲಿಸಿದರೆ ಅಭಿವೃದ್ದಿಯಲ್ಲಿ ತೀವ್ರ ಹಿಂದೆಬಿದ್ದಿದೆ. ಗಾರ್ಮೇಟ್,ಗುಡಿ ಕೈಗಾರಿಕೆ,ಅರೆ ಕೈಗಾರಿಕೆ ಪ್ರದೇಶವಾಗಿದ್ದು ಹೆಚ್ಚಿನ ಸಂಖ್ಯೆಯ ಮತದಾರರು ಕಾರ್ಮಿಕರೇ ಆಗಿದ್ದಾರೆ.ಈ ಪ್ರದೇಶದಲ್ಲಿ ನಗರೀಕರಣ ಪ್ರಭಾವ ಆರಂಭದಿಂದಾಗಿ ಅಲ್ಲಿಲ್ಲಿ ಅಭಿವೃದ್ಧಿ ಚಟುವಟಿಕೆ ಕಂಡುಬರುತ್ತಿದೆ.
ಶೋಭಾ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದವರಾಗಿದ್ದರೂ ಬೆಂಗಳೂರು ಉತ್ತರಕ್ಕೆ ಅವರ ಪರಿಚಯ ಕಡಿಮೆ. ಈ ಭಾರಿ ಬಿಜೆಪಿಗೆ ಈ ಕ್ಷೇತ್ರವು ಕಬ್ಬಿಣದ ಕಡಲೆಯಾಗುವುದಂತು ಸತ್ಯ. ಎಷ್ಟರಮಟ್ಟಕ್ಕೆ ಇರುವ ಬೆರೆಳೆಣಿಕೆಯ ದಿನಗಳಲ್ಲಿ ಜನರ ಬಳಿ ತಲುಪಿ ಮತದಾರರ ಮನವೋಲೈಕೆ ಮಾಡಬೇಕಿದೆ.
ಸದ್ಯ ಬೆಂಗಳೂರು ಉತ್ತರದಿಂದ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಆದರೆ ಕಾಂಗ್ರೆಸ್ ಯಾರನ್ನು ಕಣಕ್ಕಿಳಿಸುವುದು ಎಂಬುದರ ಬಗ್ಗೆ ಚರ್ಚೆಯಾಗಿದ್ದು, ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಯ ಪಟ್ಟಿ ಬಿಡುಗಡೆಯಾಗಲಿದೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು.ಕೆ.ಆರ್ ಪುರಂ,ಬ್ಯಾಟರಾಯನಪುರ,ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್,ಮಲ್ಲೇಶ್ವರಂ,ಹೆಬ್ಬಾಳ,ಪುಲಕೇಶಿನಗರ ಕ್ಷೇತ್ರವನ್ನು ಒಳಗೊಂಡಿದೆ.8 ವಿಧಾನ ಸಭಾ ಕ್ಷೇತ್ರಗಳಲ್ಲಿ 5ರಲ್ಲಿ ಬಿಜೆಪಿಯ ಶಾಸಕರಿದ್ರೆ,3ರಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ.ಕಳೆದೆರಡು ಎರಡು ದಶಕಗಳಿಂದ ಕ್ಷೇತ್ರದ ಮೇಲೆ ಬಿಜೆಪಿ ಹಿಡಿತ ಸಾಧಿಸಿದೆ.ವಿಚಿತ್ರ ಮತ್ತು ವಿಶೇಷವೆಂದರೆ ಕ್ಷೇತ್ರದಲ್ಲಿ ಸ್ಥಳೀಯರಲ್ಲದ ಹೊರಗಿನ ಅಭ್ಯರ್ಥಿಗಳೇ ಗೆಲುವು ಸಾಧಿಸಿರುವುದೇ ವಿಶೇಷ…!