ಗಂಡನ ತೊಡೆಯ ಮೇಲೆ ಹೆಂಡತಿ ಕುಳಿತರೆ ಅಶ್ಲೀಲವೇ?

ರಾಜಕೀಯ ಭಿನ್ನಾಭಿಪ್ರಾಯಗಳು ಸಹಜ. ಸೈದ್ಧಾಂತಿಕ ಸಂಘರ್ಷಗಳೂ ಪ್ರಜಾಪ್ರಭುತ್ವದ ಭಾಗವೇ. ಆದರೆ ರಾಜಕೀಯ ವಿರೋಧವನ್ನು ವೈಯಕ್ತಿಕ ಬದುಕಿನ ಮೇಲೆ ನಡೆಸುವ ದಾಳಿಯಾಗಿ ಪರಿವರ್ತಿಸುವುದು ಯಾವ ಸಂಸ್ಕೃತಿಯ ಲಕ್ಷಣ? ಅದರಲ್ಲೂ ಒಂದು ದಂಪತಿಯ ನಡುವಿನ ಪ್ರೀತಿ, ಆತ್ಮೀಯತೆ ಮತ್ತು ದಾಂಪತ್ಯದ ಸಹಜ ಅಭಿವ್ಯಕ್ತಿಯನ್ನೇ ಅಶ್ಲೀಲತೆಯಾಗಿ ಬಿಂಬಿಸುವ ಮನಸ್ಥಿತಿ ನಿಜಕ್ಕೂ ಆತಂಕಕಾರಿ.

ಸೋನಿಯಾ ಗಾಂಧಿಯವರ ಆತ್ಮಕಥನ Belonging: A Journey of Love ಬಿಡುಗಡೆ ಸಮಾರಂಭದಲ್ಲಿ ರಾಹುಲ್ ಗಾಂಧಿ ತಮ್ಮ ಬಾಲ್ಯದ ಒಂದು ಆತ್ಮೀಯ ನೆನಪನ್ನು ಹಂಚಿಕೊಂಡಿದ್ದರು. ಊಟದ ಸಮಯದಲ್ಲಿ ತಾಯಿ ಸೋನಿಯಾ ಗಾಂಧಿ ತಂದೆ ರಾಜೀವ್ ಗಾಂಧಿಯವರ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದರು. ಬಾಲ್ಯದಲ್ಲಿ ಅದನ್ನು ಸಹಜವೆಂದೇ ಭಾವಿಸಿದ್ದ ತಮಗೆ, ಸ್ನೇಹಿತರ ಮನೆಗೆ ಹೋದಾಗ ಅವರ ತಂದೆ-ತಾಯಿಯರು ಹಾಗೆ ಕುಳಿತಿರದಿರುವುದು ಆಶ್ಚರ್ಯ ತಂದಿತ್ತು ಎಂದು ಅವರು ನೆನಪಿಸಿಕೊಂಡಿದ್ದರು.

ಇದೊಂದು ಮಗ ತನ್ನ ತಂದೆ-ತಾಯಿಯ ನಡುವಿನ ಪ್ರೀತಿ ಮತ್ತು ಆತ್ಮೀಯತೆಯನ್ನು ನೆನಪಿಸಿಕೊಳ್ಳುವ ಸಹಜ ಪ್ರಸಂಗ. ಆದರೆ ಅದನ್ನೇ ರಾಜಕೀಯ ಅಪಹಾಸ್ಯದ ಸರಕನ್ನಾಗಿ ಮಾಡಲಾಯಿತು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ರಾಹುಲ್ ಗಾಂಧಿಯವರ ಮಾತನ್ನು ವ್ಯಂಗ್ಯವಾಡಿ, ಅವರ ತಾಯಿಗೆ ಮುಜುಗರ ಉಂಟುಮಾಡಿದ್ದಾರೆ ಎಂಬರ್ಥದಲ್ಲಿ ಟೀಕಿಸಿದರು. ಅಷ್ಟಕ್ಕೇ ನಿಲ್ಲದೆ ರಾಹುಲ್ ಅವರನ್ನು ‘this product is beyond launching and relaunching’ ಎಂದು ಹೀಯಾಳಿಸಿದರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಅನಿರ್ಬನ್ ಗಂಗೂಲಿ ಅವರು ಈ ಮಾತನ್ನು ‘shamelessness disguised as simplicity’ ಎಂದು ಕರೆದರು. ಇತರ ಬಿಜೆಪಿ ನಾಯಕರೂ ಇದೇ ಧಾಟಿಯಲ್ಲಿ ಅಪಹಾಸ್ಯ ಮಾಡಿದರು. ಒಬ್ಬ ಮಗ ತನ್ನ ತಂದೆ-ತಾಯಿಯ ಪ್ರೀತಿಯನ್ನು ನೆನಪಿಸಿಕೊಳ್ಳುವುದರಲ್ಲೂ ರಾಜಕೀಯ ದ್ವೇಷದ ವಸ್ತುವನ್ನು ಹುಡುಕುವ ಇವರ ಮನಸ್ಥಿತಿಗೆ ಮಾನವೀಯತೆಯ ಸ್ಪರ್ಶವಾದರೂ ಇದೆಯೇ?

ಇಲ್ಲಿ ಗಮನಿಸಬೇಕಾದದ್ದು ಮತ್ತೊಂದು ದ್ವಂದ್ವ. ಅಟಲ್ ಬಿಹಾರಿ ವಾಜಪೇಯಿ ಮತ್ತು ಅವರ ಗೆಳತಿ ರಾಜಕುಮಾರಿ ಕೌಲ್ ಅವರ ನಡುವಿನ ಆತ್ಮೀಯ ಸಂಬಂಧದ ಕುರಿತು ಸಾರ್ವಜನಿಕ ಚರ್ಚೆಗಳು ನಡೆದಾಗ ಕಾಂಗ್ರೆಸ್ ಎಂದೂ ಅದನ್ನು ಹೀನಾಯವಾಗಿ ಚಿತ್ರಿಸುವ ಪ್ರಯತ್ನ ಮಾಡಿರಲಿಲ್ಲ. ರಾಜಕೀಯವಾಗಿ ವಾಜಪೇಯಿ ಅವರನ್ನು ಪ್ರಬಲವಾಗಿ ವಿರೋಧಿಸಿದ್ದರೂ ಅವರ ವೈಯಕ್ತಿಕ ಬದುಕನ್ನು ಅವಹೇಳನದ ಅಸ್ತ್ರವನ್ನಾಗಿ ಬಳಸಿರಲಿಲ್ಲ. ಜವಾಹರಲಾಲ್ ನೆಹರೂ ಅವರ ವೈಯಕ್ತಿಕ ಬದುಕಿನ ವಿಚಾರದಲ್ಲಿಯೂ ಕಾಂಗ್ರೆಸ್ ಇದೇ ಗೌರವಯುತ ನಿಲುವನ್ನು ಹೊಂದಿತ್ತು. ರಾಜಕೀಯ ವಿರೋಧಕ್ಕೂ ವ್ಯಕ್ತಿಯ ಖಾಸಗಿತನಕ್ಕೂ ನಡುವಿನ ವ್ಯತ್ಯಾಸವನ್ನು ಗುರುತಿಸುವ ರಾಜಕೀಯ ಪ್ರಬುದ್ಧತೆ ಅದಾಗಿತ್ತು.

ಹಾಗಾದರೆ, ವಾಜಪೇಯಿ ಮತ್ತು ಅವರ ಗೆಳತಿ ರಾಜಕುಮಾರಿ ಕೌಲ್ ಅವರ ಆತ್ಮೀಯ ಸಂಬಂಧವನ್ನು ನೈತಿಕವಾಗಿ ಕಂಡವರಿಗೆ, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ದಾಂಪತ್ಯದ ಪ್ರೀತಿ ಏಕೆ ನೈತಿಕವಾಗಿ ಕಾಣಲಿಲ್ಲ? ಒಬ್ಬರ ವೈಯಕ್ತಿಕ ಬದುಕಿಗೆ ಗೌರವ, ಮತ್ತೊಬ್ಬರ ದಾಂಪತ್ಯದ ಆತ್ಮೀಯತೆಗೆ ಅಪಹಾಸ್ಯ! ಈ ದ್ವಂದ್ವ ನಿಲುವಿಗೆ ಯಾವ ನೈತಿಕತೆಯ ಹೆಸರಿಡಬೇಕು?

ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯೆಯಾಗಿ ರಾಹುಲ್ ಗಾಂಧಿ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದಲ್ಲಿರುವ ಶಿವ–ಪಾರ್ವತಿಯರ ಆತ್ಮೀಯತೆಯನ್ನು ಬಿಂಬಿಸುವ ಶಿಲ್ಪವನ್ನು ಹಂಚಿಕೊಂಡಿದ್ದರು. ಬಿಜೆಪಿ ಮತ್ತು ಆರ್‌ಎಸ್‌ಎಸ್ ಬೆಂಬಲಿಗರ ಮನಸ್ಸಿನಲ್ಲಿ ಮನೆಮಾಡಿರುವ ಭಯ, ಕೋಪ ಮತ್ತು ದ್ವೇಷಗಳು ಪ್ರೀತಿಯನ್ನು ಅನುಭವಿಸಲು ಹಾಗೂ ವ್ಯಕ್ತಪಡಿಸಲು ಅಡ್ಡಿಯಾಗಿವೆ ಎಂಬ ಸಂದೇಶವನ್ನು ನೀಡಿದ್ದರು. ಅದಕ್ಕೂ ಹಿಮಂತ ಬಿಸ್ವ ಶರ್ಮಾ ಆಕ್ಷೇಪ ವ್ಯಕ್ತಪಡಿಸಿದರು.

ಭಾರತೀಯ ದೇವಾಲಯಗಳ ಶಿಲ್ಪಕಲೆಯಲ್ಲಿ ದಾಂಪತ್ಯದ ಆತ್ಮೀಯತೆಯ ಅಭಿವ್ಯಕ್ತಿಯನ್ನು ಸಂಸ್ಕೃತಿಯ ಭಾಗವಾಗಿ ಸ್ವೀಕರಿಸುವವರಿಗೆ, ನಿಜ ಜೀವನದ ಗಂಡ-ಹೆಂಡತಿಯ ನಡುವಿನ ಪ್ರೀತಿಯನ್ನು ಸಹಜವಾಗಿ ಸ್ವೀಕರಿಸಲು ಏಕೆ ಸಾಧ್ಯವಾಗುತ್ತಿಲ್ಲ? ದೇವಾಲಯದ ಶಿಲ್ಪದಲ್ಲಿ ಕಾಣುವ ಪ್ರೀತಿ ಕಲಾತ್ಮಕ ಅಭಿವ್ಯಕ್ತಿಯಾದರೆ, ಒಂದು ಕುಟುಂಬದ ಬಾಲ್ಯದ ನೆನಪಿನಲ್ಲಿ ವ್ಯಕ್ತವಾಗುವ ಪ್ರೀತಿ ಅಶ್ಲೀಲತೆಯಾಗುತ್ತದೆಯೇ? ಈ ಪ್ರಶ್ನೆಗೆ ಉತ್ತರಿಸುವ ನೈತಿಕ ಹೊಣೆಗಾರಿಕೆ ಅಪಹಾಸ್ಯ ಮಾಡಿದವರ ಮೇಲಿದೆ.

ಮಹಿಳೆಯ ಗೌರವ, ಕುಟುಂಬದ ಘನತೆ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ನಿರಂತರವಾಗಿ ಮಾತನಾಡುವವರು, ಮೊದಲು ಮಹಿಳೆಯೊಬ್ಬರ ದಾಂಪತ್ಯದ ಆತ್ಮೀಯತೆಯನ್ನು ಸಾರ್ವಜನಿಕವಾಗಿ ಅಪಹಾಸ್ಯ ಮಾಡುವುದನ್ನು ನಿಲ್ಲಿಸಬೇಕು. ಮಹಿಳೆಯ ಖಾಸಗಿ ಬದುಕನ್ನು ರಾಜಕೀಯ ಟೀಕೆಯ ವಸ್ತುವನ್ನಾಗಿ ಮಾಡುವುದು ಮಹಿಳೆಯ ಘನತೆಯನ್ನು ಎತ್ತಿಹಿಡಿಯುವ ಕ್ರಮವಲ್ಲ. ಅದು ರಾಜಕೀಯ ಅಸಹಿಷ್ಣುತೆಯ ಕೀಳು ಅಭಿವ್ಯಕ್ತಿ.

ರಾಜಕೀಯದಲ್ಲಿ ವಿಚಾರಗಳನ್ನು ಟೀಕಿಸಲು, ಸಿದ್ಧಾಂತಗಳನ್ನು ಪ್ರಶ್ನಿಸಲು ಮತ್ತು ಆಡಳಿತವನ್ನು ವಿರೋಧಿಸಲು ಎಲ್ಲರಿಗೂ ಹಕ್ಕಿದೆ. ಆದರೆ ರಾಜಕೀಯ ದ್ವೇಷದ ಕಾರಣಕ್ಕೆ ಕುಟುಂಬದ ಪ್ರೀತಿ, ದಾಂಪತ್ಯದ ಆತ್ಮೀಯತೆ ಮತ್ತು ವೈಯಕ್ತಿಕ ನೆನಪುಗಳನ್ನು ಅವಹೇಳನ ಮಾಡುವುದು ಪ್ರಜಾಪ್ರಭುತ್ವದ ರಾಜಕೀಯ ಸಂಸ್ಕೃತಿಗೆ ಮಾಡುವ ಅಪಚಾರ.

ವಾಜಪೇಯಿ ಅವರ ವೈಯಕ್ತಿಕ ಬದುಕಿಗೆ ಗೌರವ ನೀಡಿದವರು, ರಾಜೀವ್–ಸೋನಿಯಾ ದಾಂಪತ್ಯದ ಪ್ರೀತಿಗೂ ಅದೇ ಗೌರವ ನೀಡಬೇಕಿತ್ತು. ರಾಜಕೀಯ ವಿರೋಧದ ಹೆಸರಿನಲ್ಲಿ ಮಾನವೀಯ ಸಂಬಂಧಗಳನ್ನೇ ಹೀಯಾಳಿಸುವವರು ಮೊದಲು ತಮ್ಮ ನೈತಿಕತೆಯನ್ನು ಆತ್ಮಾವಲೋಕನ ಮಾಡಿಕೊಳ್ಳಲಿ.

ದಾಂಪತ್ಯದ ಪ್ರೀತಿ ಅಶ್ಲೀಲವಲ್ಲ. ಅದನ್ನು ಅಶ್ಲೀಲವಾಗಿ ನೋಡುವ ಮನಸ್ಥಿತಿಯೇ ಅಶ್ಲೀಲ. ಪ್ರೀತಿಯನ್ನು ಗೌರವಿಸಲು ಸಾಧ್ಯವಾಗದವರಿಗೆ ಸಂಸ್ಕೃತಿ ಮತ್ತು ನೈತಿಕತೆಯ ಪಾಠ ಹೇಳುವ ಅರ್ಹತೆಯೂ ಇಲ್ಲ.

ಕೆ. ಚಂದ್ರಶೇಖರ ಶೆಟ್ಟಿ

ಲೇಖಕರು ಪ್ರಸಿದ್ಧ ವ್ಯಂಗ್ಯಚಿತ್ರಕಾರರು, ಪತ್ರಕರ್ತರು ಮತ್ತು ರಾಜಕೀಯ ವಿಶ್ಲೇಷಕರಾಗಿದ್ದಾರೆ

ಇದನ್ನೂ ಓದಿ-ಮಹಿಳೆಯರೊಂದಿಗೆ ಸೌಜನ್ಯ: ಅಧಿಕಾರಸ್ಥ ಪುರುಷರಿಗೆ ಕಲಿಸುವವರಾರು?

More articles

Latest article

Most read