ಅಖಿಲೇಶ್ ಯಾದವ್ ರಥಯಾತ್ರೆ ವೇಳೆ ಜೆಸಿಬಿ ಡಿಕ್ಕಿ: ಬಿಜೆಪಿ ಕಾರ್ಯಕರ್ತನ 14 ವರ್ಷದ ಪುತ್ರ ಸಾವು

ಲಖನೌ : ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ರಥಯಾತ್ರೆ ವೇಳೆ ಜೆಸಿಬಿ ಯಂತ್ರ ಡಿಕ್ಕಿ ಹೊಡೆದು ಬಿಜೆಪಿ ಕಾರ್ಯಕರ್ತರೊಬ್ಬರ 14 ವರ್ಷದ ಪುತ್ರ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಸಮಾಜವಾದಿ ಪಕ್ಷದ ಮುಖಂಡರು ಹಾಗೂ ಗುರುತು ಪತ್ತೆಯಾಗದ 66 ಪಕ್ಷದ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬುಧವಾರ ನಡೆದ ಅಖಿಲೇಶ್ ಯಾದವ್ ಅವರ ರೋಡ್‌ಶೋ ವೇಳೆ ಹೂವಿನ ಸುರಿಮಳೆಗೈಯಲು ಬಳಸಲಾಗುತ್ತಿದ್ದ ಜೆಸಿಬಿ ಯಂತ್ರ ಬಾಲಕನಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೃತನನ್ನು ಆರ್ಯವರ್ಧನ್ ಸಿಂಗ್ (14) ಎಂದು ಗುರುತಿಸಲಾಗಿದೆ. ಈತ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಮೃತ ಬಾಲಕನ ತಂದೆ ಓಂಕಾರ್ ಸಿಂಗ್ ಶ್ರೀನೆಟ್ ನೀಡಿದ ದೂರಿನ ಆಧಾರದ ಮೇಲೆ ಗೋರಖ್‌ಪುರದ ಏಮ್ಸ್ ಪೊಲೀಸ್ ಠಾಣೆಯಲ್ಲಿ ಗುರುವಾರ ಮುಂಜಾನೆ 2.30ರ ಸುಮಾರಿಗೆ ಎಫ್‌ಐಆರ್ ದಾಖಲಿಸಲಾಗಿದೆ.

ರಥಯಾತ್ರೆಯ ಜೆಸಿಬಿ ಅತಿವೇಗದಿಂದ ಬಂದಿದ್ದೇ ಅಪಘಾತಕ್ಕೆ ಕಾರಣ?

ಸ್ಥಳೀಯ ಮೂಲಗಳ ಪ್ರಕಾರ, ಮಹಾದೇವ್ ಝಾರ್ಖಂಡಿ ಗೇಟ್ ಸಮೀಪದ ರಸ್ತೆಯನ್ನು ದಾಟುತ್ತಿದ್ದ ಆರ್ಯವರ್ಧನ್, ಕೇಂದ್ರಿಯ ವಿದ್ಯಾಲಯದಿಂದ ತನ್ನ ಕಿರಿಯ ಸಹೋದರಿಯನ್ನು ಕರೆದುಕೊಂಡು ಬರಲು ತೆರಳುತ್ತಿದ್ದ. ಈ ವೇಳೆ ಅಖಿಲೇಶ್ ಯಾದವ್ ಅವರ ರಥಯಾತ್ರೆ ಅದೇ ಮಾರ್ಗದಲ್ಲಿ ಸಾಗುತ್ತಿತ್ತು.

ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದ ಎಸ್‌ಪಿ ಕಾರ್ಯಕರ್ತರ ಮೇಲೆ ಹೂವುಗಳನ್ನು ಸುರಿಸಲು ಜೆಸಿಬಿ ಯಂತ್ರವನ್ನು ಬಳಸಲಾಗುತ್ತಿತ್ತು. ರೋಡ್‌ಶೋ ವಾಹನಗಳ ಹಿಂದೆ ಬರುತ್ತಿದ್ದ ಜೆಸಿಬಿ ಅತಿವೇಗದಲ್ಲಿ ಚಲಿಸಿ ಬಾಲಕನಿಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಬಾಲಕ ರಸ್ತೆಯ ವಿಭಜಕಕ್ಕೆ ಎಸೆಯಲ್ಪಟ್ಟಿದ್ದು, ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಚಾಲಕ ಹಾಗೂ ಆಯೋಜಕರ ವಿರುದ್ಧ ತಂದೆಯ ಆರೋಪ

ಬಿಜೆಪಿಯ ಚುನಾವಣಾ ಸಮಿತಿಯ ಜಿಲ್ಲಾ ಸಂಯೋಜಕರಾಗಿರುವ ಓಂಕಾರ್ ಸಿಂಗ್ ಶ್ರೀನೆಟ್, ಅಪಘಾತದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನನ್ನ ಮಗ ಮಧ್ಯಾಹ್ನ ಸುಮಾರು 2 ಗಂಟೆಗೆ ತನ್ನ ತಂಗಿಯನ್ನು ಕರೆದುಕೊಂಡು ಬರಲು ಕೇಂದ್ರಿಯ ವಿದ್ಯಾಲಯಕ್ಕೆ ಹೋಗುತ್ತಿದ್ದ. ಆ ಸಮಯದಲ್ಲಿ ಅಖಿಲೇಶ್ ಯಾದವ್ ಅವರ ವಾಹನಗಳ ಸಾಲು ಅದೇ ರಸ್ತೆಯಲ್ಲಿ ಸಾಗುತ್ತಿತ್ತು. ವಾಹನಗಳ ಸಾಲು ಮುಂದೆ ಹೋದ ಬಳಿಕ ಅದರ ಹಿಂದೆ ಬರುತ್ತಿದ್ದ ಜೆಸಿಬಿ ಕುದುರೆ ಓಟದಂತೆ ಅತ್ಯಂತ ವೇಗವಾಗಿ ಚಲಿಸುತ್ತಿತ್ತು. ನನ್ನ ಮಗ ಆಗಲೇ ರಸ್ತೆ ದಾಟಿದ್ದ. ಅಷ್ಟರಲ್ಲಿ ಜೆಸಿಬಿ ಆತನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆತ ರಸ್ತೆಯ ವಿಭಜಕಕ್ಕೆ ಅಪ್ಪಳಿಸಿ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ” ಎಂದು ಅವರು ದೂರಿದ್ದಾರೆ.

ಅಪಘಾತ ಸಂಭವಿಸಿದ ತಕ್ಷಣ ಸ್ಥಳದಲ್ಲಿದ್ದವರು ಜೆಸಿಬಿ ಚಾಲಕನನ್ನು ಬೆನ್ನಟ್ಟಿದರೂ ಆತ ತಪ್ಪಿಸಿಕೊಂಡಿದ್ದಾನೆ. ರಥಯಾತ್ರೆಯ ಆಯೋಜಕರೂ ಗಾಯಗೊಂಡಿದ್ದ ಬಾಲಕನನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಂದೆ ಆರೋಪಿಸಿದ್ದಾರೆ.

ಐವರು ಎಸ್‌ಪಿ ನಾಯಕರ ವಿರುದ್ಧ ಪ್ರಕರಣ

ಮೃತ ಬಾಲಕನ ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 281 ಮತ್ತು 106(1) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಎಫ್‌ಐಆರ್‌ನಲ್ಲಿ ಜೆಸಿಬಿ ಚಾಲಕನ ಜೊತೆಗೆ ಸಮಾಜವಾದಿ ಪಕ್ಷದ ಸಾಧು ಯಾದವ್, ಮೃತ್ಯುಂಜಯ್ ಯಾದವ್, ಯೋಗೇಶ್ ಯಾದವ್ ಹಾಗೂ ಚಂದ್ರ ಪ್ರಕಾಶ್ ಸೇರಿದಂತೆ ಐವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಪ್ರಕರಣದಲ್ಲಿ ಒಟ್ಟು ಐವರು ಎಸ್‌ಪಿ ಮುಖಂಡರು ಹಾಗೂ 66 ಅಪರಿಚಿತ ಕಾರ್ಯಕರ್ತರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ತನಿಖೆಯ ಜವಾಬ್ದಾರಿಯನ್ನು ಸಬ್‌ ಇನ್‌ಸ್ಪೆಕ್ಟರ್ ಮೋನು ಕುಮಾರ್ ಅವರಿಗೆ ವಹಿಸಲಾಗಿದೆ.

ಇನ್ನೊಂದೆಡೆ, ಅಪಘಾತದ ಬಳಿಕ ಸ್ಥಳೀಯರು ಆರ್ಯವರ್ಧನ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಗೋರಖ್‌ಪುರದ ಏಮ್ಸ್ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.

More articles

Latest article

Most read