ನಾನು ಅಸ್ಪೃಶ್ಯ ಎಂಬ ಕಾರಣಕ್ಕೆ ಮುಟ್ಟುವುದಿಲ್ಲ ; ತಾರಕಕ್ಕೇರಿದ ಕುಮಾರಸ್ವಾಮಿ- ಪ್ರಿಯಾಂಕ್ ಖರ್ಗೆ ವಾಗ್ಯುದ್ಧ

ಬೆಂಗಳೂರು, ನ.03 :  ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕರ್ನಾಟಕ ಪೊಲೀಸರ ಕಾರ್ಯಕ್ಷಮತೆಗೆ ಕೇಂದ್ರ ಸರ್ಕಾರವೇ ಪ್ರಶಸ್ತಿ ನೀಡಿದೆ. ಸ್ಟಿಂಗ್ ಪ್ರಕರಣದ ತನಿಖೆಯಲ್ಲೂ ಸಾಕ್ಷ್ಯಾಧಾರಗಳ ಆಧಾರದಲ್ಲಿ ಕ್ರಮ ಕೈಗೊಳ್ಳುತ್ತೇವೆ. ಕುಮಾರಸ್ವಾಮಿ ಅವರು ಆರೋಪ ಮಾಡುವ ಬದಲು ದಾಖಲೆಗಳನ್ನು ಒದಗಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪ್ರಕರಣದ ತನಿಖೆಯಲ್ಲಿ ಯಾವುದೇ ವ್ಯಕ್ತಿಗೂ ವಿಶೇಷ ರಿಯಾಯಿತಿ ನೀಡುವುದಿಲ್ಲ. ಸಣ್ಣ ಕಾರ್ಯಕರ್ತರಿಂದ ಹಿಡಿದು ಸಂಸದರು, ಸಚಿವರು ಯಾರೇ ಆಗಿರಲಿ, ತನಿಖೆಗೆ ಅಗತ್ಯವಿದ್ದರೆ ನೋಟಿಸ್ ನೀಡಿ ವಿಚಾರಣೆಗೆ ಕರೆಸಲಾಗುವುದು ಎಂದು ಸ್ಪಷ್ಟಪಡಿಸಿದರು.

ನಾನು ಅಸ್ಪೃಶ್ಯ ಎಂಬ ಕಾರಣಕ್ಕೆ ಮುಟ್ಟುವುದಿಲ್ಲ
 ‘ನಾನು ಅಸ್ಪೃಷ್ಯ ಎಂಬ ಕಾರಣಕ್ಕೆ ಅವರು ನಮ್ಮನ್ನು ಮುಟ್ಟುವುದಿಲ್ಲ. ಆದರೆ ಕಾನೂನಿನ ಪ್ರಕಾರ ಅಗತ್ಯವಾದರೆ ನಾವು ಅವರನ್ನು ಮುಟ್ಟುತ್ತೇವೆ. ಕುಮಾರಸ್ವಾಮಿ ಅವರು ಅನುಕಂಪದ ನಾಟಕ ಆಡುತ್ತಿದ್ದಾರೆ. ಅವರು ನಿತ್ಯ ಮನೆಯಲ್ಲಿ ಅಳುವುದು ಪ್ರ್ಯಾಕ್ಟೀಸ್‌ ಮಾಡುತ್ತಿರುತ್ತಾರೆ. ಮುಂದೆ ಇನ್ನೆರಡು ತಿಂಗಳಲ್ಲಿ ಮತ್ತೆ ಕಣ್ಣೀರು ಹಾಕುತ್ತಾರೆ ನೋಡುತ್ತಿರಿ ಎಂದರು.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಬಂದ ಇ-ಮೇಲ್ ಬಗ್ಗೆ ಗೊತ್ತಿಲ್ಲ. ಅದರ ಬಗ್ಗೆ ಮಾಹಿತಿ‌ ಇದ್ದರೆ ಕೊಡಲಿ. ವಿಡಿಯೋದಲ್ಲಿರುವವರ ಎಲ್ಲ ವಿಚಾರಣೆ ಆಗಿದೆ. ಒಂದಲ್ಲಾ 2 ಬಾರಿ ವಿಚಾರಣೆ ಆಗಿದೆ. ಕೃಪಾ ಆಳ್ವಾ ವಿಚಾರಣೆ ವೇಳೆ ಇ-ಮೇಲ್ ವಿಚಾರ ಪ್ರಸ್ತಾಪ ಆಗಿಲ್ಲ. ಒಂದು ವೇಳೆ ಅವರಿಗೆ ಗೊತ್ತಿದ್ದರೆ ಮಾಧ್ಯಮಗಳ ಮುಂದೆ ಹೇಳುವುದಲ್ಲ ನಮಗೆ ಕೊಡಲಿ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಿಯಾಂಕ್ ಹೇಳಿದರು.

ಕುಮಾರಸ್ವಾಮಿ ಅವರೇ, ನಿಮ್ಮ ಕಳಂಕ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಸೂರ್ಯ, ಚಂದ್ರ, ಸತ್ಯ ತುಂಬಾ ಹೊತ್ತು ಮುಚ್ಚಿಡಲಾಗಲ್ಲ. ಆಯುಕ್ತರ ಪತ್ರಿಕಾ ಹೇಳಿಕೆ ಸ್ಪಷ್ಟವಾಗಿದೆ. ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಬಹಳಷ್ಟು ವದಂತಿ ಬರುತ್ತಿದೆ, ಇದೊಂದು ಸುಳ್ಳು ಷಡ್ಯಂತ್ರ ಎಂದು ಹೇಳಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕ್ರಮ
ಸ್ಟಿಂಗ್ ಪ್ರಕರಣದಲ್ಲಿಯೂ ತನಿಖೆಯ ಮೂಲಕ ಸತ್ಯ ಹೊರಬರಲಿದೆ. ಅಗತ್ಯ ಸಾಕ್ಷ್ಯಾಧಾರಗಳು ದೊರೆತರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕುಮಾರಸ್ವಾಮಿ ಅವರು ನಿರಂತರ ಆರೋಪಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಪ್ರಿಯಾಂಕ್ ಖರ್ಗೆ, ಎಲ್ಲದಕ್ಕೂ ಒಂದು ಮಿತಿ ಇದೆ. ಪ್ರತಿದಿನ ಒಂದೊಂದು ಹೇಳಿಕೆ ನೀಡಿದರೆ ಅದಕ್ಕೆಲ್ಲ ಉತ್ತರ ನೀಡುತ್ತಾ ಕೂರಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ನಮ್ಮ ಕುಟುಂಬಕ್ಕೆ ಮಸಿ ಬಳಿಯಲು ಪೊಲೀಸರು ಸಂಚು ರೂಪಿಸಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ಇದೀಗ ಅದೇ ತನಿಖಾ ತಂಡಕ್ಕೆ ಎನ್‌ಡಿಎ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿದೆ. ಕುಮಾರಸ್ವಾಮಿ ಬೇಕಾದಾಗ ಕಣ್ಣೀರು ಹಾಕುತ್ತಾರೆ. ಅವರಿಗೆ ಎರಡು ತಿಂಗಳಲ್ಲಿ ಮತ್ತೆ ಕಣ್ಣೀರು ಹಾಕುವ ಅವಕಾಶ ಬರಬಹುದು ಎಂದು ಸೂಚ್ಯವಾಗಿ ಹೇಳಿದರು.

ಸಿ.ಎಂ  ಡಿ.ಕೆ. ಶಿವಕುಮಾರ್,  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತಮ್ಮನ್ನು ಹೊರತುಪಡಿಸಿ ಕುಮಾರಸ್ವಾಮಿ ಅವರಿಗೆ ಬೇರೆ ಯಾವುದೇ ವಿಚಾರಗಳೇ ಇಲ್ಲವೇನೋ ಎಂಬಂತೆ ಕಾಣುತ್ತಿದೆ. ಅವರಿಗೆ ಬೇರೆ ಕೆಲಸ ಇಲ್ಲದಂತಿದೆ ಎಂದು ವ್ಯಂಗ್ಯವಾಡಿದರು.

ಸ್ಟಿಂಗ್ ವಿಡಿಯೋ ಸಿದ್ಧಪಡಿಸಿದವರು ಯಾರು ಎಂಬ ವಿಚಾರದಲ್ಲಿ ಈಗಾಗಲೇ ಹಲವು ಬಾರಿ ವಿಚಾರಣೆ ನಡೆಸಲಾಗಿದೆ. ಹಾಗಿದ್ದರೆ ಕುಮಾರಸ್ವಾಮಿ ಅವರಿಗೆ ಇಷ್ಟು ಆತುರ ಏಕೆ? ಪ್ರಕರಣದ ಬಗ್ಗೆ ಅವರಿಗೆ ಯಾವ ಮಾಹಿತಿ ಇದೆ ಎಂದು ಪ್ರಶ್ನಿಸಿದರು.

ನನ್ನ ವಿರುದ್ಧ ಇಡಿ ತನಿಖೆಗೆ ಸಂಚು

ದೆಹಲಿಯ ಅಧಿಕಾರದ ಕಾರಿಡಾರ್‌ಗಳಲ್ಲಿ ಕೇಳಿಬರುತ್ತಿರುವ ಗುಸುಗುಸು ಏನೆಂದರೆ, ಕೆಪಿಎಸ್‌ಸಿ ತನಿಖೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು, ನನ್ನ ಸಂಪುಟ ಸಹೋದ್ಯೋಗಿಗಳು ಮತ್ತು ನನ್ನ ವಿರುದ್ಧ ಐಟಿ ಹಾಗೂ ಇ.ಡಿ. ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವಂತೆ ಕೇಂದ್ರ ಸಚಿವರೊಬ್ಬರು ಮೋದಿ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಲು ಪ್ರಯತ್ನ ನಡೆಸುತ್ತಿದ್ದಾರೆ.

ಆರೆಸೆಸ್‌ನ ಹೊಸ ಗ್ರೂಪ್‌ ಡಿ ನೇಮಕಾತಿಯೂ ಆಗಿರುವ ಅವರು, ಕೆಪಿಎಸ್‌ಸಿ ನೇಮಕಾತಿ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಮತ್ತು ನನ್ನ ಹೆಸರನ್ನು ಸುಳ್ಳು ಆರೋಪಗಳ ಮೂಲಕ ಸಿಲುಕಿಸಲು, ಪ್ರಕರಣದ ಎಲ್ಲ ಆರೋಪಿಗಳ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಇ.ಡಿ.ಯನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

‘ಅತ್ಯಂತ ಕಷ್ಟಪಟ್ಟು ಕೆಲಸ ಮಾಡುವ’ ಗೌರವಾನ್ವಿತ ಸಚಿವರು ತಾವೊಬ್ಬರೇ ಸಂಕಷ್ಟಕ್ಕೆ ಸಿಲುಕಲು ಸಿದ್ಧರಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ತಮ್ಮ ಹತಾಶೆಯಲ್ಲಿ, ತಮ್ಮದೇ ಮೈತ್ರಿಕೂಟದ ಪಾಲುದಾರರನ್ನೂ ತಮ್ಮೊಂದಿಗೆ ಸಂಕಷ್ಟಕ್ಕೆ ಎಳೆಯಲು ಅವರು ನಿರ್ಧರಿಸಿದಂತಿದೆ.

More articles

Latest article

Most read