ಕನ್ನಡಿಗರಿಗೆ ಉದ್ಯೋಗ – ನಮ್ಮ ಹಕ್ಕಿನ ಹೋರಾಟ, ಹತ್ತಿಕ್ಕುವ ಯತ್ನ ಮಾಡಿದರೆ ಸಂಘರ್ಷ : ಟಿ. ಎ. ನಾರಾಯಣಗೌಡ ಎಚ್ಚರಿಕೆ

ಬೆಂಗಳೂರು ನ. 02 : ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಎಂಬ ಹೋರಾಟ ನಮ್ಮ ಮೂಲಭೂತ ಹಕ್ಕಿನ ಹೋರಾಟ. ಇದನ್ನು ಯಾರೂ ಹತ್ತಿಕ್ಕಲು ಅವಕಾಶ ನೀಡುವುದಿಲ್ಲ. ಸಂಘರ್ಷ ನಮ್ಮ ಆಯ್ಕೆಯಲ್ಲ, ಆದರೆ ಕನ್ನಡಿಗರ ಹಕ್ಕಿನ ಹೋರಾಟಕ್ಕೆ ಯಾರೇ ಅಡ್ಡ ಬಂದರೂ ನಾವು ಸಹಿಸುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ ಎ. ನಾರಾಯಣ ಗೌಡ ಎಚ್ಚರಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಪ್ರಧಾನ ಕಚೇರಿ ಮುಂಭಾಗ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಐಟಿ ಬಿಟಿ ಕಂಪನಿ ಗಳು ಸೇರಿದಂತೆ ಬೆಂಗಳೂರಿನ ಉದ್ಯಮಗಳಿಗೆ ತೆರಳಿ ಕನ್ನಡಿಗ ಉದ್ಯೋಗಿಗಳ ಲೆಕ್ಕ ಕೇಳುವ ‘ಆಗ್ರಹ ಅಭಿಯಾನ ‘ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಎಷ್ಟು ಪ್ರಮಾಣದಲ್ಲಿ ಉದ್ಯೋಗ ಲಭಿಸುತ್ತಿದೆ ಎಂದು ತಿಳಿದುಕೊಳ್ಳುವ ಹಕ್ಕು ನಮಗಿದೆ ಎಂದು ಅವರು ಹೇಳಿದರು.

ಅಭಿಯಾನದ ನಂತರ ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರ ಔದ್ಯೋಗಿಕ ಸ್ಥಾನಮಾನ, ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯಗಳ ಕುರಿತು ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸಮಗ್ರ ಸತ್ಯ ಶೋಧನ ವರದಿ ಸಲ್ಲಿಸಲಿದೆ. ಐಟಿ ಕಂಪನಿಗಳಿಗೆ ನಾವು ಜಗಳ ಮಾಡಲು ಹೋಗುತ್ತಿಲ್ಲ. ನಾವು ಸೌಜನ್ಯದಿಂದಲೇ ವರ್ತಿಸುತ್ತೇವೆ. ಗೊಂದಲ ಸೃಷ್ಟಿಸುವ, ಸಂಘರ್ಷ ನಡೆಸುವ ಉದ್ದೇಶ ನಮ್ಮದಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಅತಿಯಾದ ವಲಸೆಯಿಂದ ಬೆಂಗಳೂರು ನಮ್ಮ ಕೈ ತಪ್ಪಿ ಹೋಗುತ್ತಿದೆ. ದೇಶದಲ್ಲಿ ನಡೆಯುತ್ತಿರುವ ವಲಸೆಯ ಶೇ. 30ಕ್ಕೂ ಹೆಚ್ಚು ವಲಸೆ ಕರ್ನಾಟಕಕ್ಕೆ ಆಗುತ್ತಿದೆ. ಮುಖ್ಯಮಂತ್ರಿ ಗಳೇ ನೀಡಿದ ಹೇಳಿಕೆ ಪ್ರಕಾರ 40 ಲಕ್ಷಕ್ಕೂ ಹೆಚ್ಚು ಉತ್ತರ ಭಾರತೀಯರು ಬೆಂಗಳೂರಿಗೆ ವಲಸೆ ಬಂದಿದ್ದಾರೆ. ಇದು ಹೀಗೇ ಮುಂದುವರೆದರೆ ಕನ್ನಡಿಗರು ತಮ್ಮ ನೆಲದಲ್ಲೇ ಪರಕೀಯರಂತೆ ಬದುಕುವ ಸ್ಥಿತಿ ನಿರ್ಮಾಣವಾಗಲಿದೆ. ನಮ್ಮನ್ನು ಆಳುವ ರಾಜಕಾರಣಿಗಳಿಗೆ ಇದರ ಪರಿವೆಯೇ ಇಲ್ಲ ಎಂದು ಅವರು ಟೀಕಿಸಿದರು.

ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಎಂಬ ಕೂಗು ಎದ್ದಾಗಲೆಲ್ಲ ಕೆಲವು ಉದ್ಯಮಿಗಳು ರಾಜ್ಯ ಬಿಟ್ಟು ಹೋಗುತ್ತೇವೆ ಎಂದು ಬ್ಲಾಕ್ ಮೇಲ್ ಮಾಡುತ್ತಾರೆ. ಸರ್ಕಾರಕ್ಕೆ ಇಂಥವರ ಮಾತೇ ಮುಖ್ಯವಾಗುತ್ತದೆ, ಕನ್ನಡಿಗರ ಬದುಕು ಮುಖ್ಯವಾಗುವುದಿಲ್ಲ. ಈ ಧೋರಣೆ ಅಪಾಯಕಾರಿ. ಈಗಲಾದರೂ ಸರ್ಕಾರ ಕನ್ನಡಿಗರ ಉದ್ಯೋಗ ಮೀಸಲಾತಿ ಕಾಯ್ದೆ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ದಿನೇಶ್ ಕುಮಾರ್ ಎಸ್. ಸಿ. ಪ್ರಸ್ತಾವನೆ ಮಾಡಿದರು. ರಾಜ್ಯ ಉಪಾಧ್ಯಕ್ಷ ದಾ. ಪಿ. ಅಂಜನಪ್ಪ ಸ್ವಾಗತಿಸಿದರು.

More articles

Latest article

Most read