ನಮ್ಮ ಸರ್ಕಾರ ಇದ್ದಿದ್ರೆ ಪಾಕ್ ಪರ ಘೋಷಣೆ ಕೂಗಿದವರನ್ನ ಅಲ್ಲೇ ಗುಂಡಿಟ್ಟು ಸಾಯಿಸ್ತಿತ್ತು: ಆರ್ ಅಶೋಕ್

Most read

ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂಬ ಮಾಧ್ಯಮಗಳ ಸುಳ್ಳು ವರದಿಯನ್ನು ರಾಜಕೀಯಗೊಳಿಸಿದ ಬಿಜೆಪಿ, ವಿಧಾನಪರಿಷತ್​ನಲ್ಲಿ ಅನಾವಶ್ಯಕ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದಲ್ಲದೇ, ನಮ್ಮ ಸರ್ಕಾರ ಇದ್ದಿದ್ರೆ ಪಾಕಿಸ್ತಾನ (Pakistan) ಪರ ಘೋಷಣೆ ಕೂಗಿದವರನ್ನ ಅಲ್ಲಿಯೇ ಗುಂಡಿಟ್ಟು ಸಾಯಿಸುತ್ತಿತ್ತು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ತುರ್ತುಪರಿಸ್ಥಿತಿ ತಂದಿದ್ದಾರೆ. ವಿಪಕ್ಷಗಳು ದೇಶದ್ರೋಹಿಗಳ ಬಂಧನ ಮಾಡಿ ಅಂತ ಧರಣಿ ಮಾಡುತ್ತಿವೆ. ಆದರೆ ಸರ್ಕಾರ ಇದುವರೆಗೂ ಯಾರನ್ನ ಬಂಧನ ಮಾಡಿಲ್ಲ. ನಾವು ಸದನದಲ್ಲಿ ಧರಣಿ ಮಾಡಿದರೂ ಸೆನ್ಸಾರ್ ಹಾಕಿದ್ರು. ನಮ್ಮ ದೇಶದ ಯೋಧರು ಪಾಕಿಸ್ತಾನದ ಭಯೋತ್ಪಾದಕರ ಗುಂಡಿಗೆ ಎದೆಯೊಡ್ಡಿ ನಿಂತಿದ್ರೆ, ಇಲ್ಲಿ ವಿಧಾನಸೌಧದೊಳಗೆ ಪಾಕಿಸ್ತಾನಕ್ಕೆ ಜೈಕಾರ ಹಾಕುವವರ ಪರ ಕಾಂಗ್ರೆಸ್ ನಿಲ್ಲುತ್ತೆ. ನಮ್ಮ ಸರ್ಕಾರ ಇದ್ದಿದ್ರೇ ದೇಶ ದ್ರೋಹಿಗಳನ್ನ ಗುಂಡಿಕ್ಕಿ ಕೊಲ್ಲುತಿತ್ತು ಎಂದು ಹೇಳಿದ್ದಾರೆ.

ನಮ್ಮ ಹೋರಾಟ ದೇಶದ ಬದುಕಿಗಾಗಿ. ಪಾಕ್ ಭಯೋತ್ಪಾದಕರ ಗುಂಡಿಗೆ ನಮ್ಮ ಸೈನಿಕರು ಬಲಿಯಾಗ್ತಿದ್ದಾರೆ. ನಮ್ಮ ಸರ್ಕಾರ ಇದ್ದಿದ್ರೆ ಪಾಕ್ ಪರ ಘೋಷಣೆ ಕೂಗಿದವರನ್ನ ಅಲ್ಲೇ ಗುಂಡಿಟ್ಟು ಸಾಯಿಸ್ತಿತ್ತು. ಇವರು ಬಂಧನ ಕೂಡಾ ಮಾಡದೇ ರಕ್ಷಣೆ ಮಾಡ್ತಿದ್ದಾರೆ ಎಂದು ಅಶೋಕ್ ಹೇಳಿದ್ದಾರೆ.

ಸುಳ್ಳು ಸುದ್ದಿಯನ್ನೇ ಬಂಡವಾಳ ಮಾಡಿಕೊಂಡು ರಾಜಕೀಯ ಮಾಡುತ್ತಿರುವ ಬಿಜೆಪಿ ವಾದ ವಿವಾದಕ್ಕೆ ಕಾಂಗ್ರೆಸ್ ದರ್ಪಕವಾಗಿ ಎದುರಿಸಿದ್ದರು. ರಾಜ್ಯದ ಜನರಿಗೆ ಸುಳ್ಳು ಸಂದೇಶ ಹೋಗಬಾರದು ಆ ವಿಡಿಯೋದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದಾರೆಯೇ ಅಥಾವ ನಾಸಿರ್ ಸಾಬ್ ಜಿಂದಾಬಾದ್ ಎಂದು ಕೂಗಿದ್ದಾರೆಯೇ ಎಂದು ತಿಳಿದುಕೊಳ್ಳಲು FSL ತನಿಖೆಗೆ ಸರ್ಕಾರ ನೀಡಿದೆ. ವರದಿಯ ನಂತರ ಯಾರ ವಿರುದ್ಧ ಕ್ರಮ ಕೈಗೊಳ್ಳಬೆಕು ಎಂಬುದನ್ನು ಕಾದು ನೋಡಬೇಕಿದೆ.

More articles

Latest article