ಪತ್ನಿಯ ಶೀಲದ ಬಗ್ಗೆ ಶಂಕೆ, ಮಕ್ಕಳ ಎದುರೇ ಪತ್ನಿಯ ಭೀಕರ ಕೊ*

ಕೋಲಾರ: ಪತ್ನಿಯ ಶೀಲದ ಬಗ್ಗೆ ಆಗಾಗ ಅನುಮಾನ ವ್ಯಕ್ತಪಡಿಸುತ್ತಿದ್ದ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಮಕ್ಕಳ ಎದುರೇ ಕತ್ತು ಸೀಳಿ ಕೊಲೆಗೈದಿರುವ ಘಟನೆ ನಗರದ ಶ್ರೀನಿವಾಸಪುರ ಸರ್ಕಲ್ ಬಳಿ ನೆನ್ನೆ ರಾತ್ರಿ ನಡೆದಿದೆ.

ಆರೋಪಿ ಪತಿಯನ್ನು ಲಾರಿ ಚಾಲಕ ಕೆಂದಟ್ಟಿ ಗ್ರಾಮದ ನಿವಾಸಿ ರಾಮಚಂದ್ರ ಎನ್ನಲಾಗಿದ್ದು ಈತನು ತನ್ನ ಪತ್ನಿ ಸ್ನೇಹಾ (24) ಎಂಬಾಕೆಯನ್ನು ತನ್ನ ಇಬ್ಬರು ಪುಟ್ಟ ಮಕ್ಕಳ ಕಣ್ಣೆದುರಿನಲ್ಲೇ ಕತ್ತು ಸೀಳಿ ಭೀಕರವಾಗಿ ಕೊಲೆಗೈದಿದ್ದಾನೆ.

ಆರೋಪಿ ರಾಮಚಂದ್ರ ಕಳೆದ ಒಂದು ವರ್ಷದಿಂದ ತನ್ನ ಪತ್ನಿಯು ಬೇರೊಬ್ಬರೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದಾಳೆಂದು ಅನುಮಾನವನ್ನು ವ್ಯಕ್ತಪಡಿಸುತ್ತಿದ್ದು, ನಿನ್ನೆ ಸಂಜೆ ಆಕೆಯು ಗ್ರಾಮಕ್ಕೆ ತೆರಳಲು ಬಸ್ ನಿಲ್ದಾಣದ ಬಳಿ ತನ್ನ ಮಕ್ಕಳೊಂದಿಗೆ ನಿಂತಿದ್ದಾಗ ಆರೋಪಿ ಪತಿ ರಾಮಚಂದ್ರ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

ಕಳೆದ ರಾತ್ರಿಯೇ ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಕನ್ನಿಕಾ ಸುಕ್ರಿ ಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಬ್ ಇನ್ಸ್ಪೆಕ್ಟರ್ ವಿಠ್ಠಲ್ ವಿ ತಳವಾರ್, ಆರೋಪಿ ಪತಿ ರಾಮಚಂದ್ರನನ್ನು ವಶಕ್ಕೆ ಪಡೆದಿದ್ದಾರೆ

More articles

Latest article

Most read