ಬೆಂಗಳೂರು, ಅ.21: ಮೈಸೂರು ದಸರಾ ದೀಪಾಲಂಕಾರ ವೀಕ್ಷಣೆಗೆ ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ದೀಪಾಲಂಕಾರದ ಅವಧಿಯನ್ನು 10 ದಿನಗಳ ಕಾಲ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ದಸರಾದ ದೀಪಾಲಂಕಾರವನ್ನು ವೀಕ್ಷಿಸಲು ಪ್ರತಿದಿನ ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. ಸಾರ್ವಜನಿಕರ ಒತ್ತಾಯದ ಮೇರೆಗೆ ದೀಪಾಲಂಕಾರದ ಅವಧಿಯನ್ನು ಹತ್ತು ದಿನಗಳ ಕಾಲ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಇದೇ ವೇಳೆ ಯುವ ಜನತೆಯನ್ನು ಉತ್ತೇಜಿಸಲು ವಿನೂತನ ಸ್ಪರ್ಧೆಯೊಂದನ್ನು ಘೋಷಿಸಿದ ಸಿಎಂ, “ದಸರಾ ವೀಕ್ಷಿಸಲು ಬರುವ ಸಾರ್ವಜನಿಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಿ ಹಾಕಬೇಕು. ಆರಂಭದಿಂದ ಕೊನೆಯವರೆಗೆ ದಸರಾದಲ್ಲಿ ತಮಗೆ ಇಷ್ಟವಾದ ವಿಚಾರಗಳನ್ನು ರೀಲ್ಸ್ ಮೂಲಕ ತಿಳಿಸಬೇಕು. ಇಂತಹ ನೂರು ಅತ್ಯುತ್ತಮ ರೀಲ್ಸ್ ಗಳಿಗೆ ಪ್ರಶಸ್ತಿ ಹಾಗೂ ಅವಾರ್ಡ್ ನೀಡಲು ತೀರ್ಮಾನಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು #MysuruDasara2026 ಟ್ಯಾಗ್ ಮಾಡಬೇಕು” ಎಂದು ತಿಳಿಸಿದರು.

