ಕೋಲಾರ: ಸುಗಟೂರು ಹೋಬಳಿ ಕೆಂಬತ್ತನಹಳ್ಳಿ ಗ್ರಾಮದ ಅಂಗಡಿಯೊಂದಕ್ಕೆ ನೀರಿನ ಬಾಟಲ್ ಕೇಳಿಕೊಂಡು ಬಂದ ಮೂವರು ಖದೀಮರು ಅಂಗಡಿಯಾಕೆಯ ಕತ್ತಿನಲ್ಲಿದ್ದ ಸುಮಾರು 40 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಗ್ರಾಮಾಂತರ ಪೊಲೀಸರು ಮೂರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಸುಮಾರು 250 ಸಿಸಿ ಕ್ಯಾಮೆರಾ ಗಳನ್ನು ಪರಿಶೀಲಿಸಿ ಆರೋಪಿಗಳ ಜಾಡನ್ನು ಪತ್ತೆ ಹಚ್ಚಿದ ಇನ್ಸ್ಪೆಕ್ಟರ್ ಕೃಷ್ಣಮೂರ್ತಿ ಮತ್ತವರ ತಂಡ, ಕೋಲಾರ ನಗರ ಕಾರಂಜಿ ಕಟ್ಟೆಯ ನಿವಾಸಿಗಳಾದ ಶ್ರೀಧರ್ ಅಲಿಯಾಸ್ ಚೇರಿ, ಹಾಗೂ ಹಾಗೂ ಎಂ. ಶ್ರೀಧರ್, ಅಲ್ಲದೆ ಮತ್ತೊಬ್ಬ ಆರೋಪಿ ಶ್ರೀನಿವಾಸಪುರ ತಾಲ್ಲೂಕು ಗೌಡಹಳ್ಳಿಯ ಅಂಬರೀಶ ಎಂಬುವರನ್ನು ಬಂಧಿಸಿ ಅವರಿಂದ ಒಂದು ಸ್ಟಾರ್ ಸಿಟಿ ಬೈಕ್, ಮತ್ತು ನಾಲ್ಕು ಲಕ್ಷ ರೂ ಬೆಲೆಬಾಳುವ ಮಾಂಗಲ್ಯ ಸರವನ್ನು ವಶಪಡಿಸಿಕೊಂಡಿದ್ದಾರೆ.

