ಧರ್ಮಸ್ಥಳ ಅ. 7: ಇಲ್ಲಿನ ರೈಸ್ಮಿಲ್ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ 60 ವರ್ಷದ ಕೃಷ್ಣಪ್ಪ ಸಫಲ್ಯ ಎಂಬುವರ ಮೃತದೇಹ ರೈಸ್ಮಿಲ್ನ ಹಿಂಭಾಗದಲ್ಲಿ ನೀರು ತುಂಬಿಸಿಟ್ಟಿದ್ದ ದೊಡ್ಡ ಗಾತ್ರದ ಸ್ಟೀಲ್ ಪಾತ್ರೆಯೊಳಗೆ ಪತ್ತೆಯಾಗಿದೆ.
ಸೆಪ್ಟೆಂಬರ್ 3ರಂದು ಬೆಳಗ್ಗೆ ಎಂದಿನಂತೆ ರೈಸ್ಮಿಲ್ಗೆ ಕೆಲಸಕ್ಕೆ ತೆರಳಿದ್ದ ಕೃಷ್ಣಪ್ಪ ಅವರು ಮಧ್ಯಾಹ್ನವಾದರೂ ಮನೆಗೆ ಮರಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಪುತ್ರ ವಿನಯ್ ಕುಮಾರ್ ಅವರು ರೈಸ್ಮಿಲ್ಗೆ ತೆರಳಿ ವಿಚಾರಿಸಿದಾಗ, ಕೃಷ್ಣಪ್ಪ ಅವರು ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮೃತ ಕೃಷ್ಣಪ್ಪ ಅವರು ಪ್ರತಿನಿತ್ಯ ಮದ್ಯ ಸೇವಿಸುತ್ತಿದ್ದರು ಎಂದು ಅವರ ಪುತ್ರ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಟನೆ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಯುಡಿಆರ್ ಸಂಖ್ಯೆ 65/2023ರ ಅಡಿಯಲ್ಲಿ ಕಲಂ 174(iii) ಮತ್ತು 174(iv) ಸಿಆರ್ಪಿಸಿ ಅನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

