ಕೆಪಿಸಿಸಿ ಅಧ್ಯಕ್ಷರಾದ ಬಿ ಕೆ ಹರಿಪ್ರಸಾದ್ ಅವರ ಮಾತಿನ ಮುಖ್ಯಾಂಶಗಳು
ಬಿಜೆಪಿ ರಾಜ್ಯಾಧ್ಯಕ್ಷರ ಕ್ಷೇತ್ರದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೇರಿ ಅವರಿಗೆ ತಕ್ಕ ಉತ್ತರ ನೀಡಿರುವ ಜನತೆಗೆ ಅಭಿನಂದನೆಗಳು. ಸೌಂದರ್ಯ, ರಾಜಕೀಯ ಇತ್ಯಾದಿ ಗಳಿಂದ ಕೂಡಿದ ಸುಂದರ ಶಿವಮೊಗ್ಗ ಜಿಲ್ಲೆ ಬಿಜೆಪಿಯಿಂದಾಗಿ ಯಾವ ಮಟ್ಟಕ್ಕೆ ಬಂದಿದೆ ಎಂದು ಆಲೋಚಿಸಬೇಕು.
ನಾವು ಈಸೂರಿನಲ್ಲಿ ಈ ಯಾತ್ರೆ ಆರಂಭಿಸಿದ್ದೇವೆ. 1942ನೇ ಇಸವಿಯಲ್ಲಿ ಬ್ರಿಟೀಷರ ವಿರುದ್ಧ ಗಾಂಧೀಜಿ ಅವರು ಭಾರತ ಬಿಟ್ಟು ತೊಲಗಿ ಎಂದು ಸಂದೇಶ ನೀಡಿದ್ದರು. ನಮ್ಮ ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂದಿತಾದರೂ ಈಸೂರು 1942ರಲ್ಲಿ ನಾವು ಸ್ವತಂತ್ರರು ಎಂದು ಘೋಷಣೆ ಮಾಡಿದ ವೀರ ನಾಡನ್ನು ಯಾವ ಪರಿಸ್ಥಿತಿಗೆ ತರಲಾಗಿದೆ. ಸಾಮಾಜಿಕ ನ್ಯಾಯದ ಹರಿಕಾರರಾದ ಬಂಗಾರಪ್ಪ, ವಿಶ್ವ ಮಾನವ ಸಂದೇಶ ಕೊಟ್ಟ ಕುವೆಂಪು, ರೈತ ಹೋರಾಟ ಮಾಡಿದ ಗೋಪಾಲ ಗೌಡರು, ಕಡಿದಾಳ್ ಮಂಜಪ್ಪ, ಜೆ.ಹೆಚ್ ಪಾಟೀಲ್ ರಂತಹ ಮಹನೀಯರನ್ನು ಕೊಟ್ಟ ಜಿಲ್ಲೆ ಶಿವಮೊಗ್ಗ.
ಬಿಜೆಪಿ ಈ ಜಿಲ್ಲೆಗೆ ಬಂದ ಬಳಿಕ ಜಿಲ್ಲೆಯ ಪರಿಸ್ಥಿತಿ ಏನಾಗಿದೆ? ಮರಿ ಯಡಿಯೂರಪ್ಪನವರು ಒಂದು ಹೇಳಿಕೆ ನೀಡಿದ್ದು, ನಾವು ಮಾಡಿರುವ ಅಭಿವೃದ್ಧಿ ನೋಡಿ ಎಂದಿದ್ದಾರೆ. ಅವರ ಅಭಿವೃದ್ಧಿ – ಇದೇ ಜಿಲ್ಲೆಯ ಶಿಕಾರಿಪುರ ವಿವೇಕಾನಂದ ಶಿಕ್ಷಣ ಸಂಸ್ಥೆ ಪರಿಚಯವಿದೆಯೇ? ಮಲ್ಲಜ್ಜ ಕಟ್ಟೆ ಕೆರೆಯನ್ನು ಕಾಲೇಜಿಗೆ 90 ವರ್ಷಕ್ಕೆ ಲೀಸ್ ಗೆ ಪಡೆದರು. ಇದೇನಾ ಅಭಿವೃದ್ಧಿ? ಹೊನ್ನಾಳಿ ರಸ್ತೆಯಲ್ಲಿ ಬಂಡಿಭೈರನಹಳ್ಳಿ ಅರಣ್ಯ ಒತ್ತುವರಿ ಮಾಡಿ ಇವರ ಜಮೀನಿಗೆ ನೀರು ಹರಿಸಲು ಕೆರೆ ನಿರ್ಮಿಸಿ ಸನ್ಯಾಸಿ ಕೊಪ್ಪ ಏತ ನೀರಾವರಿಯಿಂದ ನೀರು ಪಡೆಯುತ್ತಿದ್ದಾರೆ. 1983ರಲ್ಲಿ ಮಾಜಿ ಸಚಿವ ಶಿಕಾರಿಪುರದ ವೆಂಕಟಪ್ಪನವರ ಪತ್ನಿ 3 ಸಾವಿರ ರೂ ಮೌಲ್ಯದ ಸೀರೆ ಉಟ್ಟಿದ್ದಕ್ಕೆ ಭ್ರಷ್ಟಾಚಾರ ಆರೋಪ ಮಾಡಿ ಮನೆ ಮುಂದೆ ಕೂಗಾಡಿದ್ದ ಯಡಿಯೂಪ್ಪರನವರ ಭ್ರಷ್ಟಾಚಾರದ ಬಗ್ಗೆ ನಾವು ಏನು ಹೇಳಬೇಕು?
ವೆಂಕಟಪ್ಪನವರು ಕೊರಚ ಕೊರಮ ಸಮುದಾಯದಲ್ಲಿ ಹುಟ್ಟಿ, ಗುಂಡೂರಾವ್ ಕಾಲದಲ್ಲಿ ಮಂತ್ರಿಯಾಗಿದ್ದರು. ಯಡಿಯೂರಪ್ಪನವರೇ ನೀವು ನಿಮ್ಮ ಮಕ್ಕಳು ಯಾವ ಕಾರಲ್ಲಿ ಓಡಾಡುತ್ತಿದ್ದೀರಿ? ನೀವು ಓಡಾಡುತ್ತಿರುವುದು ರೇಂಜ್ ರೋವರ್, ಆದರೂ ಇಲ್ಲಿ ಪ್ರತಿಭಟನೆ ಇಲ್ಲ. ಶಿವಮೊಗ್ಗದಲ್ಲಿ ಎಷ್ಟು ದೂರ ನೋಡಿದರೂ ಯಡಿಯೂರಪ್ಪನವರ ಕಾಲೇಜು. ಮತ್ತೊಂದು ಕಡೆ ಈಶ್ವರಪ್ಪನವರ ಕಾಲೇಜು. ಭ್ರಷ್ಟಾಚಾರದ ಬಗ್ಗೆ ನೀವು ನಮಗೆ ಹೇಳುತ್ತೀರಾ?

ಕೆಪಿಸಿಸಿ ಅಧ್ಯಕ್ಷರಾದ ಬಿ ಕೆ ಹರಿಪ್ರಸಾದ್
ನಿಮ್ಮ ಹುಮ್ಮಸ್ಸು ನೋಡಿದರೆ ನಮಗೆ ಆಶ್ಚರ್ಯವಾಗುತ್ತದೆ. ಇದು ರಾಹುಲ್ ಗಾಂಧಿ ಅವರ ಜನಪ್ರಿಯತೆಗೆ ಸಾಕ್ಷಿ. ಇದು ಭಾರತ ಜೋಡೋ ಯಾತ್ರೆ ಅಲ್ಲ. ಮಹಾತ್ಮ ಗಾಂಧಿ ಅವರು ದಂಡಿ ಯಾತ್ರೆ ಮಾಡಿದಾಗ 300 ಕಿ.ಮೀ ಯಾತ್ರೆ ಮಾಡಿದ್ದರು. ರಾಹುಲ್ ಗಾಂಧಿ ಅವರು 6 ತಿಂಗಳ ಕಾಲ 6 ಸಾವಿರ ಕಿ.ಮೀ. ಮಣಿಪುರದಿಂದ ಮುಂಬೈ 4 ಸಾವಿರ ಕಿ.ಮೀ ಒಟ್ಟು 10 ಸಾವಿರ ಕಿ.ಮೀ ಹೆಜ್ಜೆ ಹಾಕಿ, ದೇಶದಲ್ಲಿ ದ್ವೇಷ ಅಸೂಯೆ ವಾತಾವರಣದ ವಿರುದ್ಧ ಶಾಂತಿ, ಸೌಹಾರ್ದತೆ ಯಾತ್ರೆ ಮಾಡಿದ್ದರು. ಈ ಯಾತ್ರೆಗೆ 4 ವರ್ಷ ಪೂರ್ಣಗೊಂಡಿದ್ದು, ಇದರ ಸ್ಮರಣಾರ್ಥವಾಗಿ, ಅವರ ಆಶಯದ ಮೇಲೆ ನಾವು ಜನತಾ ಜೋಡೋ ಜಾಗೃತಿ ಯಾತ್ರೆ ಹಮ್ಮಿಕೊಂಡಿದ್ದೇವೆ.
ಈ ದೇಶದಲ್ಲಿ 7 ದೊಡ್ಡ ಧರ್ಮಗಳಿವೆ. ಬೇರೆ ಯಾವುದೇ ದೇಶಗಳಲ್ಲಿ ಇಷ್ಟು ದೊಡ್ಡ ಧರ್ಮಗಳಿಲ್ಲ. ಆದರೂ ನಾವು ಭಾರತೀಯರಾಗಿ ಒಂದಾಗಿ ಬದುಕುತ್ತಿದ್ದೆವು. ಬಿಜೆಪಿಯವರು ದ್ವೇಷದ ವಾತಾವರಣ ಸೃಷ್ಟಿಸಿದ್ದಾರೆ. ಕುವೆಂಪು ಅವರು ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ, ಮೌಢ್ಯತೆಯ ಮಾರಿಯನ್ನು ಹೊರದೂಡ ಬನ್ನಿ, ಬಡತನದ ಬುಡ ಕೀಳ ಬನ್ನಿ, ವಿಜ್ಞಾನ ದೀವಿಗೆ ಹಿಡಿಯ ಬನ್ನಿ, ಬನ್ನಿ ಸೋದರರೆ ವಿಶ್ವಪಥಕ್ಕೆ ಎಂದಿದ್ದಾರೆ. ಈ ನಾಡನ್ನು ಸರ್ವಜನಾಂಗದ ಶಾಂತಿಯ ತೋಟ ಎಂದು ಕರೆದರು.
ಈ ದೇಶಕ್ಕಾಗಿ ಬ್ರಿಟೀಷರಿಂದ ಐದು ಜನ ಗಲ್ಲಿಗೇರಿದರು. ಅಂತಹ ಮಹನೀಯರು ಹುಟ್ಟಿದ ಭೂಮಿಯಲ್ಲಿ ಎಂತಹವರು ಈಗ ಹುಟ್ಟಿದ್ದಾರೆ ನೋಡಿ. ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿ, ದ್ವೇಷದ ವಾತಾವರಣ ಸೃಷ್ಟಿಸಿದ್ದಾರೆ. ಇವರು ರಾಜಕೀಯ ಮಾಡುತ್ತಾರೆ ಎಂದರೆ ಜಿಲ್ಲೆಯನ್ನು ಯಾವ ಸ್ಥಿತಿಗೆ ತಂದಿದ್ದಾರೆ ನೋಡಿ. ನಾವೆಲ್ಲರೂ ಸೇರಿ ಮಾಡಿದ ಉಳುವವನೆ ಭೂಮಿ ಒಡೆಯ ಎಂಬ ಕಾಗೋಡು ಹೋರಾಟ ಆರಂಭವಾಗಿದ್ದು ಈ ಜಿಲ್ಲೆಯಿಂದ. ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಸಾಧನೆ ಮಾಡಿರುವ ಜಿಲ್ಲೆಯಲ್ಲಿ ಪೂಜ್ಯ ತಂದೆಯವರ ಮಕ್ಕಳು ಏನು ಮಾಡುತ್ತಿದ್ದಾರೆ? ಅವರು ಭ್ರಷ್ಟಾಚಾರ ವಿರುದ್ದ ಲಿಂಗಸೂರಿನಿಂದ ಬಳ್ಳಾರಿವರೆಗೂ ಪಾದಯಾತ್ರೆ ಮಾಡಿದರು. ಅವರ ಆರೋಗ್ಯ ದೃಷ್ಟಿಯಲ್ಲಿ ಪಾದಯಾತ್ರೆ ಮಾಡಿದರೆ ನಮ್ಮ ಅಭ್ಯಂತರವಿಲ್ಲ. 18 ಕೋಟಿ ರೂಪಾಯಿಗಳನ್ನು ಆರ್ ಟಿಜಿಎಸ್ ಮೂಲಕ ಲಂಚ ಪಡೆದವರು ಭ್ರಷ್ಟಾಚಾರದ ಬಗ್ಗೆ ಪಾದಯಾತ್ರೆ ಮಾಡಿದರೆ ದುರಂತ.
ಇವರ ವಿಶ್ವಗುರು ದೆಹಲಿಯಲ್ಲಿ ಕೂತಿದ್ದಾರೆ. ಇವರು ತಮ್ಮ ಪೂಜ್ಯ ತಂದೆ ಹೆಸರು ಬಳಸಿದರೆ, ವಿಶ್ವಗುರು ತಮ್ಮ ದಿವಂಗತ ತಾಯಿಯನ್ನ , ನೋಟು ರದ್ದಾದಾಗ ಆ 90 ವರ್ಷದ ಹಿರಿಯ ಮಹಿಳೆಯನ್ನು ಬ್ಯಾಂಕ್ ಮುಂದೆ ನಿಲ್ಲಿಸಿದ. ಒಳ್ಳೆಯ ಗಂಡು ಮಗ ಯಾರಾದರೂ ತಾಯಿಯನ್ನು ಬಿಸಿಲಲ್ಲಿ ನಿಲ್ಲಿಸುತ್ತಾರಾ? ಇಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ತಂದೆಯನ್ನು ಜೈಲಿಗೆ ಕಳುಹಿಸಿದ್ದು, ಅವರನ್ನೇ ಬಿಜೆಪಿಯವರು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಅವರು ನಮ್ಮ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. 2008ರಲ್ಲಿ ಯಡಿಯೂರಪ್ಪ ಸಿಎಂ ಆದರು. ಅವರಿಗೆ ಶಾಸಕರ ಬೆಂಬಲ ಇರಲಿಲ್ಲ. ಆಗ ಆಪರೇಷನ್ ಕಮಲ ಮಾಡಿ ಶಾಸಕರನ್ನು ಖರೀದಿ ಮಾಡಿ ರಾಜ್ಯದ ಕೀರ್ತಿಯನ್ನು ನಾಶ ಮಾಡಿದರು. ಕನ್ನಡಿಗರ ಘನತೆ ಗೌರವ ನುಚ್ಚುನೂರು ಮಾಡಿದ್ದಾರೆ. ಕೆಜೆಪಿ ಮಾಡಿದರು. ಟಿಪ್ಪು ಸುಲ್ತಾನ್ ರೀತಿ ಕತ್ತಿ ಹಿಡಿದು, ನಂತರ ಬಿಜೆಪಿ ಸೇರಿದ ಮೇಲೆ ಟಿಪ್ಪುವನ್ಟು ಟೀಕಿಸಿ ಗೋಸುಂಬೆ ನಾಚುವ ರೀತಿ ಬಣ್ಣ ಬದಲಿಸಿದರು.
ನಮ್ಮ ಪೂರ್ವಜರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ನಮ್ಮ ನಾಯಕರು ಈ ದೇಶವನ್ನು ಆಧುನಿಕ ಭಾರತವಾಗಿ ನಿರ್ಮಿಸಿದ್ದಾರೆ. ಈ ಭವ್ಯ ಭಾರತದಲ್ಲಿ ತಾರತಮ್ಯವಿಲ್ಲ. ಪ್ರಜಾಪ್ರಭುತ್ವ, ಸಂವಿಧಾನ, ಚುನಾವಣೆ ವ್ಯವಸ್ಥೆಯನ್ನು ನೀಡಿದ್ದಾರೆ. ಬಿಜೆಪಿಯವರು ಮತದಾರರ ಪಟ್ಟಿಯಲ್ಲಿ ಅಕ್ರಮ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಅವರು ಧರ್ಮದ ಹೆಸರಲ್ಲಿ, ಶಾಸಕರ ಖರೀದಿ ಮಾಡಿದ್ದಾರೆ. 400 ಸೀಟು ಗೆಲ್ಲುತ್ತೇವೆ ಎಂದವರು 240ಕ್ಕೆ ಕುಸಿದರು. ಮುಂದಿನ ಬಾರಿ 140ಕ್ಕೆ ಕುಸಿಯಲಿದ್ದಾರೆ. ಈಗ ಎಸ್ಐಆರ್ ಮೂಲಕ ಕರ್ನಾಟಕದಲ್ಲಿ 5.47 ಕೋಟಿ ಮತದಾರರಲ್ಲಿ 1.7 ಕೋಟಿ ಮತದಾರರನ್ನು ಕೈಬಿಟ್ಟಿದ್ದಾರೆ. 43 ಲಕ್ಷ ಜನರಿಗೆ ನೋಟೀಸ್ ನೀಡಿದ್ದು, ಹಿರಿಯರು ಯಾವ ರೀತಿ ಅಧಿಕಾರಿಗಳ ಮುಂದೆ ನಿಂತು ಹೆಸರು ಸೇರಿಸಿಕೊಳ್ಳುತ್ತಿದ್ದಾರೆ ನೋಡಿ. ನಮ್ಮ ಸ್ವಾತಂತ್ರ್ಯ ಉಳಿಸಿಕೊಳ್ಳಲು ಒಟ್ಟಾಗಿ ಹೋರಾಟ ಮಾಡಬೇಕು.
ಅಂಬೇಡ್ಕರ್ ಅವರು ನಮಗೆ ಮೀಸಲಾತಿ ನೀಡಿದ್ದಾರೆ. ಇದು ಬಡತನ ನಿರ್ಮೂಲನಾ ಕಾರ್ಯಕ್ರಮವಲ್ಲ. ಉದ್ಯೋಗ ವಿನಿಮಯ ಕಾರ್ಯಕ್ರಮವಲ್ಲ. 1937ರಲ್ಲಿ ವಂದೇ ಮಾತರಂ ಹಾಡಿನ ಮೊದಲ ಎರಡು ಪ್ಯಾರಾಗಳನ್ನು ನಾವು ಅಳವಡಿಸಿಕೊಂಡೆವು. 1950ರಲ್ಲಿ ರಾಜೇಂದ್ರ ಪ್ರಸಾದ್ ಅವರು ಇದನ್ನು ರಾಷ್ಟ್ರದ ಹಾಡು ಎಂದು ಕರೆದರು. ಕಳೆದ 80 ವರ್ಷಗಳಿಂದ ಯಾವುದೇ ರೀತಿಯ ವಿರೋಧ ಇರಲಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ವಂದೇ ಮಾತರಂ ವಿಚಾರ ಎತ್ತಿದ್ದಾರೆ. ಗಲ್ಲಿಗೆ ಹಾಕಿದರೂ ಸರಿ ನಾವು ಮೊದಲ ಎರಡು ಪ್ಯಾರಾ ಮಾತ್ರ ಹಾಡುತ್ತೇವೆ ಎಂದು ಹೇಳಿದ್ದೇನೆ. ಮುಂದೆಯೂ ಹೇಳುವೆ.
ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತ ತತ್ವ ಸ್ವಾತಂತ್ರ್ಯ ಹೋರಾಟದ ಕೊಡುಗೆಗಳು. ಇಲ್ಲಿರುವ ನಾವು ಈ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ನಮ್ಮ ಪೂರ್ವಜರು ನಮಗೆ ಕೊಟ್ಟಿರುವ ಈ ಅಂಶಗಳನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಹಸ್ತಾಂತರಿಸಿ ಹೋಗಬೇಕು. ಮೋದಿ ಅವರ ಸರ್ಕಾರ ಬಂದ ನಂತರ ಏನೆಲ್ಲಾ ಆಗಿದೆ. ದೇಶದಲ್ಲಿ ಮೊದಲ ಬಾರಿಗೆ ದೇಶದ 72% ಪದವೀಧರರಿಗೆ ಉದ್ಯೋಗವಿಲ್ಲ. ಯುಪಿಎ ಸರ್ಕಾರ ಇದ್ದಾಗ 72 ಸಾವಿರ ಕೋಟಿ ಸಾಲಮನ್ನಾ ಮಾಡಿದರು. ಕಾಫಿ ತೋಟಕ್ಕೆ 1200 ಕೋಟಿ ಪ್ಯಾಕೇಜ್ ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷರು ಪಾದಯಾತ್ರೆ ಮಾಡುವಾಗ ಎಲ್ಲಾ ಪ್ರದೇಶಗಳಲ್ಲಿ ಬರಗಾಲವಿತ್ತು. ಆದರೆ ಇವರಿಗೆ ಪಂಚತಾರಾ ಹೊಟೇಲ್ ಊಟ ಹೋಗುತ್ತಿತ್ತು. ಬಳ್ಳಾರಿಯ ಗಣಿ ಕಳ್ಳರನ್ನು ಮಂತ್ರಿ ಮಾಡಿಕೊಂಡಿದ್ದರು. ಇವರ ಪಾದಯಾತ್ರೆ ದೇಶದ ಒಳತಿಗೆ ಅಲ್ಲ.
ಮೋದಿ ಅವರ 114 ವರ್ಷಗಳ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಒಂದು 12 ನಿಮಿಷಗಳ ಕಾಲವೂ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡಿಲ್ಲ. ಬಿಜೆಪಿ ನಾಯಕರು ಆ ಭಾಷಣ ಕೇಳಿ ಇಂಗು ತಿಂದ ಮಂಗನಂತೆ ಆಡುತ್ತಿರುತ್ತಾರೆ. ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ತಿಂಗಳುಗಟ್ಟಲೆ ಹೇಳಬಲ್ಲೆ. ಬಿಜೆಪಿಯವರ ಸಾಧನೆ ಏನು? ಹಿಂಸೆ ಸುಳ್ಳು ಅವರ ಮಂತ್ರವಾಗಿದೆ


