Gen Z ಗಳು ಪ್ರತಿಭಟನೆಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವಂತೆ ಮನವಿ : ರಾಹುಲ್‌ ಗಾಂಧಿ

ನವದೆಹಲಿ : ಯುವಜನರು ಕಿರುಕುಳ ಮತ್ತು ಅತ್ಯಾಚಾರದ ವಿರುದ್ಧದ ಪ್ರತಿಭಟನೆಗಳನ್ನು ತೀವ್ರಗೊಳಿಸಬೇಕು, ಅದರಲ್ಲೂ ವಿಶೇಷವಾಗಿ ಸಾರ್ವಜನಿಕ ಒತ್ತಡವಿದ್ದಾಗ ಮಾತ್ರ ಸರ್ಕಾರ ಸ್ಪಂದಿಸುತ್ತದೆ ಎಂದು   ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. 

‘ಎಕ್ಸ್’ (X) ನಲ್ಲಿನ ಪೋಸ್ಟ್‌ನಲ್ಲಿ, “ಬಲಿಪಶುವನ್ನೇ ದೂಷಿಸುವ ಮತ್ತು ಅಪರಾಧಿಯನ್ನು ರಕ್ಷಿಸುವ” ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಬೇಕೆಂದು ಆಗ್ರಹಿಸಿದ್ದಾರೆ. ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳಿಗಾಗಿ ಮಹಿಳೆಯರನ್ನೇ ನಿರ್ಬಂಧಿಸುವುದು ಅಥವಾ ಶಿಕ್ಷಿಸುವುದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದರು.

ಸರ್ಕಾರದ ವಿರುದ್ಧ ನಡೆಯುವ ಅಪರಾಧಗಳಿಗಾಗಿ ಮಹಿಳೆಯರನ್ನು ಶಿಕ್ಷಿಸುವುದನ್ನು ನಿಲ್ಲಿಸಬೇಕು. ಸಾರ್ವಜನಿಕ ಸ್ಥಳಗಳನ್ನು ಸುರಕ್ಷಿತವಾಗಿಸುವುದು, ಮಹಿಳೆಯರ ಬಗೆಗಿನ ಮನಸ್ಥಿತಿಯನ್ನು ಬದಲಾಯಿಸುವುದು ಮತ್ತು ಅಪರಾಧಿಗಳಿಗೆ ತ್ವರಿತ ಶಿಕ್ಷೆಯನ್ನು ಖಚಿತಪಡಿಸುವುದರತ್ತ ಗಮನಹರಿಸಬೇಕು ಎಂದು ಒತ್ತಿ ಹೇಳಿದರು.

ಮಹಿಳೆಯರಿಗೆ ಹೆಚ್ಚಿನ ಸುರಕ್ಷತೆಯನ್ನು ಕೋರಿ ವಿದ್ಯಾರ್ಥಿಗಳು ಮತ್ತು ಯುವಜನರು ನಡೆಸುತ್ತಿರುವ ಇತ್ತೀಚಿನ ಪ್ರತಿಭಟನೆಗಳನ್ನು ಪ್ರಸ್ತಾಪಿ, ಹೆಚ್ಚಿನ ಸಂಖ್ಯೆಯ ಯುವತಿಯರು, ವಿಶೇಷವಾಗಿ  Gen Z ಪೀಳಿಗೆಯವರು ಈ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಈ ಸರ್ಕಾರವು ನಿಮ್ಮ ನೋವಿಗೆ ಕಿವುಡಾಗಿದೆ ಮತ್ತು ಒತ್ತಡವಿದ್ದಾಗ ಮಾತ್ರ ಸ್ಪಂದಿಸುತ್ತದೆ ಎಂದು ಹೇಳಿದ ಅವರು, ಶಾಂತಿಯುತ ಪ್ರತಿಭಟನೆ ಪ್ರಜಾಪ್ರಭುತ್ವದ ಹಕ್ಕು ಎಂದು ಹಾಗೂ ಇಂತಹ ಅಪರಾಧಗಳ ವಿರುದ್ಧ ಪ್ರತಿಭಟಿಸುವವರೊಂದಿಗೆ ತಾನು ನಿಲ್ಲುವುದಾಗಿ ತಿಳಿಸಿದರು.

More articles

Latest article

Most read