ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪ್ರದೋಷ್ ಸಿಸಿಎಚ್ 59ನೇ ಕೋರ್ಟ್ ಗೆ ಹಾಜರಾಗಿದ್ದು, ಪ್ರತ್ಯಕ್ಷ ದರ್ಶಿಯಾಗಿ ತಾನು ನೋಡಿದ್ದನ್ನ ಹೇಳಲು ಪ್ರದೋಷ್ ಮಾಫಿ ಸಾಕ್ಷಿ ಹೇಳಲು ಸಿದ್ದರಾಗಿದ್ದಾರೆ. ಕೆಲ ಕಾಲ ವಿಚಾರಣೆಯನ್ನು ಮುಂದೂಡಲಾಗಿದೆ.
ಆರೋಪ ಪಟ್ಟಿಯಲ್ಲಿ 14ನೇ ಆರೋಪಿ ಪ್ರದೋಷ್ ಇದೀಗ ಸಾಕ್ಷಿಯಾಗಿದ್ದು. ದರ್ಶನ್ ಗೆ ಡವಡವ ಶುರುವಾಗಿದೆ. ಪ್ರದೋಷ್ ಹೇಳಿಕೆ ಇಂದು ದಾಖಲಾಗುತ್ತಿರುವ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಮೊರೆ ಹೋಗಲು ದರ್ಶನ್ ಈಗಾಗಲೇ ಸಜ್ಜಾಗಿದ್ದಾರೆ. ದರ್ಶನ್ ಖುದ್ದು ಹಾಜರಿಯಲ್ಲಿ ಕ್ರಾಸ್ ಎಕ್ಸಾಮಿನೇಷನ್ ಮಾಡಲಾಗುತ್ತೆ.
ಪ್ರದೋಷ್ ಗೆ ಕ್ರಾಸ್ ಎಕ್ಸಾಮಿನೇಷನ್ ಮಾಡಲಾಗುತ್ತಿದ್ದು, ಮಾಫಿ ಸಾಕ್ಷಿ ಅರ್ಜಿಯಲ್ಲಿ ದರ್ಶನ್ ಹಲ್ಲೇ ಬಗ್ಗೆ ಪ್ರದೋಷ್ ಮಾಹಿತಿಯನ್ನ ನೀಡಿದ್ದು, ಸೋನಿ ಬ್ರುಕ್ಸ್ ನಿಂದ ಹೊರಟು ಶವ ಸಾಗಾಟದವರೆಗೆ ಮಾಫಿ ಸಾಕ್ಷಿಯಾಗಿದ್ದು, ಹಲ್ಲೆ ಹೇಗೆ ನಡೆಸಿದರು, ಕೊಲೆ ಮುಚ್ಚಿ ಹಾಕುವುದಕ್ಕೆ ಏನೆಲ್ಲ ಯತ್ನಗಳಾಯಿತು ಇದೆಲ್ಲದರ ಬಗ್ಗೆ ಮಾಫಿ ಸಾಕ್ಷಿ ಅರ್ಜಿಯಲ್ಲಿ ಪ್ರದೋಷ್ ತಿಳಿಸಲಿದ್ದಾರೆ.

