ಮತಗಳ ಕಳ್ಳತನ, ಸರ್ಕಾರದ ಕಳ್ಳತನ, ಈಗ ಪಕ್ಷದ ಕಳ್ಳತನ : ರಾಹುಲ್‌ ಗಾಂಧಿ ಟೀಕೆ

ನವದೆಹಲಿ : ಪಶ್ಚಿಮ ಬಂಗಾಳದ ಉಪಚುನಾವಣೆಗಳ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್‌ನ ಪ್ರತಿಸ್ಪರ್ಧಿ ಬಣಗಳು ಪಕ್ಷದ ಹೆಸರು ಮತ್ತು ಅದರ ‘ಹೂವು ಮತ್ತು ಹುಲ್ಲು’ (flowers and grass) ಚಿಹ್ನೆಯನ್ನು ಬಳಸದಂತೆ ನಿರ್ಬಂಧ ವಿಧಿಸಿದ ಚುನಾವಣಾ ಆಯೋಗದ ನಿರ್ಧಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಟೀಕಿಸಿದ್ದಾರೆ.

“ಮತಗಳ ಕಳ್ಳತನ. ಸರ್ಕಾರದ ಕಳ್ಳತನ. ಈಗ ಪಕ್ಷದ ಕಳ್ಳತನ – ಇವು ನಮ್ಮ ಪ್ರಜಾಪ್ರಭುತ್ವದ ಅವನತಿಯ ಸಂಕೇತಗಳಾಗಿವೆ ಎಂದು ಗಾಂಧಿ ಹೇಳಿದರು.

ಜನರ ತೀರ್ಪನ್ನು ರಕ್ಷಿಸುವ ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ ಮತ್ತು ಬದಲಾಗಿ ಚುನಾವಣಾ ಫಲಿತಾಂಶಗಳನ್ನು ಬುಡಮೇಲು ಮಾಡಲು ಬಯಸುವ ಶಕ್ತಿಗಳಿಗೆ ಸಹಾಯ ಮಾಡುತ್ತಿದೆ. ಮೊದಲು ಶಿವಸೇನೆ, ನಂತರ ಎನ್‌ಸಿಪಿ ಮತ್ತು ಈಗ ತೃಣಮೂಲ ಕಾಂಗ್ರೆಸ್. ಪ್ರತಿ ಬಾರಿಯೂ ಒಂದೇ ರೀತಿಯ ಮಾದರಿ — ಪಕ್ಷವೊಂದನ್ನು ಒಡೆಯಲು ಬಿಜೆಪಿ ಮತ್ತು ಚುನಾವಣಾ ಆಯೋಗ ಕೈಜೋಡಿಸುತ್ತವೆ. ನಂತರ ಅದರ ಚುನಾವಣಾ ಚಿಹ್ನೆಯನ್ನು ಕಸಿದುಕೊಳ್ಳಲಾಗುತ್ತದೆ,” ಎಂದು ಗಾಂಧಿ ‘ಎಕ್ಸ್’ (X) ನಲ್ಲಿ ಹಿಂದಿ ಭಾಷೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಒಂದು ಇಡೀ ರಾಜಕೀಯ ಪಕ್ಷವನ್ನೇ “ಕದಿಯಲು” ಸಾಧ್ಯವಿದ್ದಲ್ಲಿ, ಲಕ್ಷಾಂತರ ಭಾರತೀಯರ ಮತಗಳನ್ನೂ “ಕದಿಯಬಹುದು” ಎಂಬುದು ಆಶ್ಚರ್ಯಕರವೇನಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹೇಳಿದರು.

“ಜನರ ತೀರ್ಪನ್ನು ರಕ್ಷಿಸುವುದು ಚುನಾವಣಾ ಆಯೋಗದ ಸಾಂವಿಧಾನಿಕ ಜವಾಬ್ದಾರಿಯಾಗಿದೆ, ಆದರೆ ಅದಕ್ಕೆ ಬದಲಾಗಿ, ಜನರ ತೀರ್ಪನ್ನು ಬುಡಮೇಲು ಮಾಡುವ ಶಕ್ತಿಗಳಿಗೆ ಅದು ಸಹಾಯ ಮಾಡುತ್ತಿದೆ. ಈ ಹೋರಾಟ ಕೇವಲ ಮಮತಾ ಬ್ಯಾನರ್ಜಿ ಅವರದ್ದಲ್ಲ. ಇದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಬಯಸುವ ಪ್ರತಿಯೊಂದು ರಾಜಕೀಯ ಪಕ್ಷದ ಮತ್ತು ಪ್ರತಿಯೊಬ್ಬ ಮತದಾರನ ಹೋರಾಟವಾಗಿದೆ ಎಂದು ಗಾಂಧಿ ಹೇಳಿದರು.

ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ (AITC) ಹೆಸರು ಮತ್ತು ಚಿಹ್ನೆಯನ್ನು ತಡೆಹಿಡಿದಿರುವುದು ಚುನಾವಣಾ ಆಯೋಗದ ಸಾಂವಿಧಾನಿಕ ಜವಾಬ್ದಾರಿಯಿಂದ ವಿಮುಖವಾದಂತಿದೆ ಎಂದು ಆರೋಪಿಸಿ, ಕಾಂಗ್ರೆಸ್ ಗುರುವಾರ ಆಯೋಗದ ನಿರ್ಧಾರವನ್ನು ಟೀಕಿಸಿತ್ತು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಈ ನಿರ್ಧಾರವನ್ನು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ ಅರ್ಧರಾತ್ರಿಯ ಹುಟ್ಟುಹಬ್ಬದ ಉಡುಗೊರೆ ಎಂದು ಪಕ್ಷವು ಬಣ್ಣಿಸಿದೆ.

ಮಮತಾ ಬ್ಯಾನರ್ಜಿ ಮತ್ತು ಅರೂಪ್ ರಾಯ್ ನೇತೃತ್ವದ ಎಐಟಿಸಿ (AITC)ಯ ಎರಡು ಪ್ರತಿಸ್ಪರ್ಧಿ ಬಣಗಳ ಪ್ರತಿನಿಧಿಗಳ ವಾದವನ್ನು ಆಲಿಸಿದ ನಂತರ, ಚುನಾವಣಾ ಆಯೋಗವು ಗುರುವಾರ ರಾತ್ರಿ ಮಧ್ಯಂತರ ಆದೇಶವನ್ನು ಹೊರಡಿಸಿತು. ಎರಡೂ ಗುಂಪುಗಳು ಪಕ್ಷವನ್ನು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುತ್ತಿವೆ ಮತ್ತು ಈ ವಿವಾದವು ‘ಚುನಾವಣಾ ಚಿಹ್ನೆಗಳ (ಮೀಸಲಾತಿ ಮತ್ತು ಹಂಚಿಕೆ) ಆದೇಶ, 1968 ರ ಪರಿಚ್ಛೇದ 15ರ ಅಡಿಯಲ್ಲಿ ಗಂಭೀರ ಪರಿಶೀಲನೆ ಹಾಗೂ ನಿರ್ಧಾರವನ್ನು ಬಯಸುತ್ತದೆ ಎಂದು ಆಯೋಗ ತಿಳಿಸಿದೆ.

ಈ ಮಧ್ಯಂತರ ವ್ಯವಸ್ಥೆಯು ಎರಡೂ ಬಣಗಳಿಗೆ ಸಮಾನ ಅವಕಾಶ ಕಲ್ಪಿಸುವ ಹಾಗೂ ಅವರ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ ಎಂದು ಆಯೋಗ ಹೇಳಿದೆ. ಅಲ್ಲದೆ, ವಿವಾದದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ನಡೆಯಲಿರುವ ಪ್ರಸ್ತುತ ಉಪಚುನಾವಣೆಗಳಿಗೆ ಮಾತ್ರ ಈ ಆದೇಶ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದೆ.

“ಅರೂಪ್ ರಾಯ್ (ದೂರುದಾರರು) ಮತ್ತು ಮಮತಾ ಬ್ಯಾನರ್ಜಿ (ಪ್ರತಿವಾದಿ) ನೇತೃತ್ವದ ಯಾವುದೇ ಗುಂಪು ‘ಅಖಿಲ ಭಾರತ ತೃಣಮೂಲ ಕಾಂಗ್ರೆಸ್’ ಎಂಬ ಪಕ್ಷದ ಹೆಸರನ್ನು ಬಳಸಲು ಅನುಮತಿಸಲಾಗುವುದಿಲ್ಲ. ಚುನಾವಣೆಗಾಗಿ ತಾವು ಬಯಸುವ ಹೆಸರು ಮತ್ತು ಚಿಹ್ನೆಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಈ ಬಣಗಳಿಗೆ ಸೂಚಿಸಲಾಗಿದೆ.

More articles

Latest article

Most read