ಲೋಕಸಭೆ ಚುನಾವಣೆಗೆ (2024) ಮೊದಲು ಕೇಂದ್ರ ಸರ್ಕಾರವು ಡಿಸೆಂಬರ್ 2019 ರಲ್ಲಿ ಸಂಸತ್ತು ಅಂಗೀಕರಿಸಿದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಜಾರಿಗೊಳಿಸಬಹುದು. ಮಾರ್ಚ್ ಮೊದಲ ವಾರದಲ್ಲಿ ಸಿಎಎ ಜಾರಿಗೆ ಬರಬಹುದು ಎಂಬ ಸುದ್ದಿ ಇದೆ. ಸರ್ಕಾರ ಕೂಡ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಆರಂಭಿಸಿದೆ. ಮುಂದಿನ ತಿಂಗಳ ಮೊದಲ ವಾರ ಅಥವಾ ಅದರ ನಂತರ ಯಾವುದೇ ಸಮಯದಲ್ಲಿ ಸಿಎಎ ನಿಯಮಗಳನ್ನು ದೇಶದಲ್ಲಿ ಜಾರಿಗೆ ತರಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿದೆ. ಸಿಎಎ ಕಾನೂನು ಜಾರಿಯಾದರೆ ದೇಶಾದ್ಯಂತ ಅದರ ನಿಯಮವನ್ನು ತರಲಾಗುವುದು ಎಂದು ತಿಳಿದುಬಂದಿದೆ.
ಮಾಹಿತಿ ಪ್ರಕಾರ, ಸಿಎಎಯನ್ನು ಜಾರಿಗೆ ತರಲು ಕೇಂದ್ರವು ಪೋರ್ಟಲ್ ಅನ್ನು ಸಹ ಸಿದ್ಧಪಡಿಸಿದೆ ಎಂದು ಹೇಳಲಾಗಿದೆ. ಸಿಎಎ ನಿಯಮಗಳು ಮತ್ತು ಪೋರ್ಟಲ್ ಎರಡೂ ಸಹ ಸಿದ್ಧವಾಗಿವೆ ಎಂದು ಸರ್ಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಖಾಸಗಿ ಸುದ್ದಿ ವಾಹಿನಿಯಲ್ಲಿ ವರದಿಯಾಗಿದೆ.
ಅಧಿಕಾರಿಗಳು, “ಇಡೀ ಪ್ರಕ್ರಿಯೆಯು ಆನ್‌ಲೈನ್‌ನಲ್ಲಿ ಇರುವುದರಿಂದ ಪೋರ್ಟಲ್ ಅನ್ನು ರಚಿಸಲಾಗಿದೆ. ಅಲ್ಲದೆ, ಪೌರತ್ವಕ್ಕಾಗಿ ಅರ್ಜಿಸಲ್ಲಿಸುವವರು ಭಾರತಕ್ಕೆ ಪ್ರವೇಶಿಸಿದ ವರ್ಷವನ್ನು ತಿಳಿಸಬೇಕಾಗುತ್ತದೆ. ಇದನ್ನು ಹೊರತುಪಡಿಸಿ, ಯಾವುದೇ ದಾಖಲೆಯನ್ನು ಸಲ್ಲಿಸಬೇಕಾಗಿಲ್ಲ. ಅಧಿಕಾರಿಗಳು ಅದನ್ನು ಕೇಳಲಾಗುವುದಿಲ್ಲ ಎಂದು ಹೇಳಿದ್ದಾರೆ.
“ಮಾದರಿ ನೀತಿ ಸಂಹಿತೆ ಜಾರಿಯಾಗುವ ಮೊದಲು ಯಾವುದೇ ಸಮಯದಲ್ಲಿ CAA ನಿಯಮಗಳನ್ನು ಜಾರಿಯಾಗಲಿದೆ. ಈ ತಿಂಗಳ ಆರಂಭದಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಸಿಎಎ ಅಧಿಸೂಚನೆಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದ್ದರು.
CAA ಅಡಿಯಲ್ಲಿ, 31 ಡಿಸೆಂಬರ್ 2014 ಕ್ಕಿಂತ ಮೊದಲು ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಿಂದ ಧಾರ್ಮಿಕ ಆಧಾರದ ಮೇಲೆ ಕಿರುಕುಳಕ್ಕೊಳಗಾದ ನಂತರ ಭಾರತಕ್ಕೆ ಬಂದ ಹಿಂದೂ, ಸಿಖ್, ಬೌದ್ಧ, ಜೈನ್, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಜನರಿಗೆ ಪೌರತ್ವ ನೀಡಲು ಈ ಕಾನೂನು ತರಲಾಗಿದೆ. ಈ ಮೂರು ದೇಶಗಳ ಜನರು ಮಾತ್ರ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಅಮಿತ್ ಶಾ ತಿಳಿಸಿದ್ದರು.
ಈ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗುವ ಮುನ್ನವೇ ವಿವಾದಕ್ಕೀಡಾಗಿತ್ತು, ಆದರೆ ಕಾನೂನಾಗಿ ರೂಪುಗೊಂಡ ನಂತರ ಇದಕ್ಕೆ ವಿರೋಧ ವ್ಯಕ್ತವಾಯಿತು. ದೇಶಾದ್ಯಂತ ಹಲವು ಪ್ರದೇಶಗಳಲ್ಲಿ ಪ್ರತಿಭಟನೆಗಳು ನಡೆದವು.