ಜಯನಗರದಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಸಿದ್ಧತೆ

ಬೆಂಗಳೂರು : ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಸಂಚಾರ ದಟ್ಟನೆ ಹೆಚ್ಚಿರುವ ಜಯನಗರದಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಅತ್ಯಾಧುನಿಕ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ರೂಪಿಸಲು ಪಾಲಿಕೆಯು ಪಾರ್ಕ್ ಲೆನ್ಸ್’ (Park Lens) ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂದಿದ್ದು, ಅದರಂತೆ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಅನುಷ್ಠಾನಕ್ಕಾಗಿ ಟ್ರಾಫಿಕ್ ಪೊಲೀಸ್ ಹಾಗೂ ಬೆಸ್ಕಾಂ ಇಲಾಖೆಗಳ ಸಮನ್ವಯಕ್ಕಾಗಿ ಪಾಲಿಕೆ ಆಯುಕ್ತರಾದ ಶ್ರೀ ಕೆ.ಎನ್. ರಮೇಶ್ ರವರು ಇಂದು ಸಭೆ ನಡೆಸಿದರು.

ಕೋನೀಯ (Angular) ಮಾದರಿಯಲ್ಲಿ ಪಾರ್ಕಿಂಗ್ ಲೈನ್ ಗಳನ್ನು ನಿರ್ಮಿಸಲು ಸೂಚನೆ
ವಾಹನಗಳ ಪಾರ್ಕಿಂಗ್ ಮಾದರಿ ಕುರಿತು ಚರ್ಚಿಸಲಾಗಿ ಕ್ರಾಸ್ ಪಾರ್ಕಿಂಗ್ ಅಥವಾ ಅಡ್ಡಾದಿಡ್ಡಿ ಪಾರ್ಕಿಂಗ್ ಗಳನ್ನು ತಡೆಗಟ್ಟುವ ಉದ್ದೇಶದಿಂದ ಓರೆಯಾಗಿ (Angular) ವಾಹನ ನಿಲ್ಲಿಸುವ ವ್ಯವಸ್ಥೆ ಕಲ್ಪಿಸುವುದು ಸೂಕ್ತವಾಗಿದ್ದು ಈ ವ್ಯವಸ್ಥೆಯಿಂದ ಹೆಚ್ಚು ವಾಹನಗಳ ಪಾರ್ಕಿಂಗ್ ಮಾಡಬಹುದಾಗಿದ್ದು, ಪಾರ್ಕಿಂಗ್ ಮಾಡುವಾಗ ಹಾಗೂ ಹೊರ ತೆಗೆಯುವಾಗ ಇತರ ವಾಹನಗಳಿಗೆ ಹೆಚ್ಚು ತೊಂದರೆ ಉಂಟಾಗುವುದಿಲ್ಲ ಎಂದು ಮುಖ್ಯ ಅಭಿಯಂತರರು ಅಭಿಪ್ರಾಯಪಟ್ಟರು.

ಜಯನಗರದಂತಹ ಜನನಿಬಿಡ ವಾಣಿಜ್ಯ ಮತ್ತು ವಸತಿ ಪ್ರದೇಶಗಳಲ್ಲಿ ರಸ್ತೆ ಜಾಗದ ಗರಿಷ್ಠ ಸದ್ಬಳಕೆ ಹಾಗೂ ಪಾದಚಾರಿಗಳ ಹಿತದೃಷ್ಟಿಯಿಂದ ವೈಜ್ಞಾನಿಕ ವಿನ್ಯಾಸ ರೂಪಿಸಲು ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.

ಎಐ ಕ್ಯಾಮೆರಾ ಹಾಗೂ ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಪಾವತಿ
ಪಾರ್ಕ್ ಲೆನ್ಸ್ ಸಂಸ್ಥೆಯು ಎಐ ಕ್ಯಾಮೆರಾಗಳ ನೆಟ್‌ವರ್ಕ್ ಮೂಲಕ ನೈಜ ಸಮಯದಲ್ಲಿ (Real-time) ಖಾಲಿ ಇರುವ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸುವ ವ್ಯವಸ್ಥೆಯನ್ನು ರೂಪಿಸಲಿದೆ. ಸಾರ್ವಜನಿಕರು ಸ್ಥಳದಲ್ಲಿ ಅಳವಡಿಸಲಾದ ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡಿ ಯುಪಿಐ ಮೂಲಕ ನಿಗದಿತ ಗಂಟೆಗೆ ನೇರವಾಗಿ ಶುಲ್ಕ ಪಾವತಿಸಬಹುದಾಗಿದೆ. ವಾಹನ ನಿಲ್ಲಿಸಿದ ಮೊದಲ ಐದು ನಿಮಿಷಗಳಲ್ಲಿ ಡಿಜಿಟಲ್ ಪಾವತಿ ಮಾಡುವುದು ಕಡ್ಡಾಯವಾಗಿರುತ್ತದೆ ಎಂದು ಪಾರ್ಕ್ ಲೆನ್ಸ್ ಸಂಸ್ಥೆಯ ಅಧಿಕಾರಿಗಳು ತಿಳಿಸಿದರು.

ನಿಯಮ ಉಲ್ಲಂಘಿಸುವವರ ವಿರುದ್ಧ ಎರಡು ಹಂತಗಳಲ್ಲಿ ಕಠಿಣ ದಂಡ
ಸ್ಮಾರ್ಟ್ ಪಾರ್ಕಿಂಗ್ ನಿಯಮಗಳನ್ನು ಪಾಲಿಸದೆ ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಎರಡು ಪ್ರಮುಖ ಹಂತಗಳಲ್ಲಿ ದಂಡ ವಿಧಿಸಿ ಕ್ರಮ ಕೈಗೊಳ್ಳಲಾಗುತ್ತದೆ:
1. ವಾಹನವನ್ನು ಪಾರ್ಕ್ ಮಾಡಿ ಯಾವುದೇ ನಿಗದಿತ ಸಮಯದೊಳಗೆ ಶುಲ್ಕವನ್ನು ಪಾವತಿಸದಿರುವುದು (Unpaid violation),
2. ಒಂದು ಗಂಟೆಗೆ ಶುಲ್ಕ ಪಾವತಿಸಿ, ಸಮಯ ಮುಗಿದರೂ ಪಾರ್ಕಿಂಗ್ ಅವಧಿಯನ್ನು ಡಿಜಿಟಲ್ ಆಗಿ ವಿಸ್ತರಿಸದೆ ಹೆಚ್ಚುವರಿ ಸಮಯ ನಿಲ್ಲಿಸುವುದು. (Overstay violation).

ಈ ಎರಡೂ ಸಂದರ್ಭಗಳಲ್ಲಿ ಸ್ವಯಂಚಾಲಿತ ಎಚ್ಚರಿಕೆ ರವಾನೆಯಾಗಲಿದ್ದು, ಸ್ಥಳಕ್ಕೆ ಬರುವ ಅಧಿಕಾರಿಗಳು (Enforcement officers) ನಿಯಮ ಉಲ್ಲಂಘಿಸಿದ ವಾಹನದ ಚಕ್ರಗಳಿಗೆ ಲಾಕ್ (Wheel clamp) ಅಳವಡಿಸಿ, ವಿಂಡ್‌ಶೀಲ್ಡ್ ಮೇಲೆ ದಂಡದ ರಸೀದಿಯನ್ನು ಅಂಟಿಸಲಿದ್ದಾರೆ. ದಂಡ ಪಾವತಿಸಿದ ಬಳಿಕವೇ ವಾಹನವನ್ನು ತೆರವುಗೊಳಿಸಲು ಅವಕಾಶ ನೀಡಲಾಗುತ್ತದೆ ಎಂದರು.

ಆಯ್ದ ರಸ್ತೆಗಳಲ್ಲಿ ಶೀಘ್ರವೇ ಪೈಲಟ್ ಪರೀಕ್ಷೆ
ಈ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತರುವ ಮೊದಲು, ಜಯನಗರದ ಆಯ್ದ ಪ್ರಮುಖ ರಸ್ತೆಗಳಲ್ಲಿ ಪ್ರಾಯೋಗಿಕವಾಗಿ (Pilot testing) ಪರೀಕ್ಷಾರ್ಥ ಕಾರ್ಯಾಚರಣೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಾರ್ವಜನಿಕರ ಸ್ಪಂದನೆ, ತಾಂತ್ರಿಕ ಕಾರ್ಯಕ್ಷಮತೆ ಹಾಗೂ ಸಂಚಾರ ಸುಧಾರಣೆಯನ್ನು ಪರಿಶೀಲಿಸಿದ ನಂತರ ಪೂರ್ಣ ಪ್ರಮಾಣದಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.

ನಿರಂತರ ವಿದ್ಯುತ್ ಪೂರೈಸಲು ಬೆಸ್ಕಾಂಗೆ ಸೂಚನೆ
ಕೃತಕ ಬುದ್ದಿಮತ್ತೆ ಕ್ಯಾಮೆರಾ ಹಾಗೂ ಸೆನ್ಸಾರ್ ಗಳಿಗೆ ಅಗತ್ಯವಿರುವ ನಿರಂತರ ವಿದ್ಯುತ್ ಸಂಪರ್ಕಕ್ಕಾಗಿ ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಕ್ಯಾಮರಾ ಅಳವಡಿಕೆಗೆ ಪಾಲಿಕೆಯ ಬೀದಿ ದೀಪದ ಕಂಬಗಳನ್ನು ಬಳಸಿಕೊಳ್ಳಲು ಪಾರ್ಕ್ ಲೆನ್ಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

More articles

Latest article

Most read