ಕೆಎಸ್‌ಆರ್‌ಟಿಸಿ ಡಿಜಿಟಲ್ ಕ್ರಾಂತಿ : ‘ಒಂದು ಕರ್ನಾಟಕ ಮೊಬಿಲಿಟಿ ಆಪ್’ ಲೋಕಾರ್ಪಣೆ, ಇನ್ಮುಂದೆ ವಾಟ್ಸಾಪ್‌ನಲ್ಲೇ ಬಸ್ ಟಿಕೆಟ್ ಬುಕ್ಕಿಂಗ್!

ಬೆಂಗಳೂರು, ಸೆಪ್ಟೆಂಬರ್ 11 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ತನ್ನ ಪ್ರಯಾಣಿಕರಿಗೆ ಮತ್ತಷ್ಟು ಸುಲಭ, ಸರಳ ಹಾಗೂ ಅನುಕೂಲಕರ ಸಾರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಬೃಹತ್ ಡಿಜಿಟಲ್ ಹೆಜ್ಜೆಯನ್ನಿಟ್ಟಿದೆ. ರಾಜ್ಯದ ಎಲ್ಲಾ ಸಾರಿಗೆ ಸಂಸ್ಥೆಗಳನ್ನು ಒಂದೇ ಸೂರಿನಡಿ ತರುವ ‘ಒಂದು ಕರ್ನಾಟಕ ಮೊಬಿಲಿಟಿ ಆಪ್’ (One Karnataka Mobility App) ಹಾಗೂ ‘ವಾಟ್ಸಾಪ್ ಟಿಕೆಟಿಂಗ್’ ಸೌಲಭ್ಯಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ.

ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ 100 ದಿನಗಳ ಕಾರ್ಯಕ್ರಮದ ಅಂಗವಾಗಿ, ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 2026 ನೇ ಸೆಪ್ಟೆಂಬರ್ 10 ರಂದು ಈ ನವೀಕೃತ ಮೊಬೈಲ್ ಆಪ್ ಹಾಗೂ ವಾಟ್ಸಾಪ್ ಟಿಕೆಟಿಂಗ್ ವ್ಯವಸ್ಥೆಯನ್ನು ಲೋಕಾರ್ಪಣೆಗೊಳಿಸಿದರು.

ಒಂದೇ ಆಪ್‌ನಲ್ಲಿ ರಾಜ್ಯದ 4 ಸಾರಿಗೆ ಸಂಸ್ಥೆಗಳು

ಈ ಹೊಸ ಏಕೀಕೃತ ಡಿಜಿಟಲ್ ವೇದಿಕೆಯ ಮೂಲಕ ರಾಜ್ಯದ ನಾಲ್ಕೂ ಪ್ರಮುಖ ಸಾರಿಗೆ ಸಂಸ್ಥೆಗಳಾದ,
KSRTC (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ),
NWKRTC (ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ), KKRTC (ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ) ಮತ್ತು BMTC (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ಈ ನಾಲ್ಕೂ ನಿಗಮಗಳ ಸೇವೆಗಳು ಒಂದೇ ಆಪ್‌ನಲ್ಲಿ ಪ್ರಯಾಣಿಕರಿಗೆ ಲಭ್ಯವಾಗಲಿವೆ.

ಮೊಬೈಲ್ ಆಪ್‌ನ ಪ್ರಮುಖ ಸೌಲಭ್ಯಗಳು

ಸುರಕ್ಷಿತ ಲಾಗಿನ್: ಪ್ರಯಾಣಿಕರ ಗುರುತಿನ ದೃಢೀಕರಣ, ಹಿಂದಿನ ಬುಕ್ಕಿಂಗ್‌ಗಳ ವಿವರ ವೀಕ್ಷಣೆ ಹಾಗೂ ವಹಿವಾಟು ನಿರ್ವಹಣೆ.

ಏಕೀಕೃತ ದೂರು ನಿರ್ವಹಣೆ: ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ ಸಂಬಂಧಿಸಿದ ದೂರುಗಳನ್ನು ಒಂದೇ ಕಡೆ ದಾಖಲಿಸಿ, ದೂರಿನ ಸ್ಥಿತಿ ಹಾಗೂ ಪರಿಹಾರದ ಪ್ರಗತಿಯನ್ನು ಟ್ರ್ಯಾಕ್ ಮಾಡಬಹುದು.

ಡಿಜಿಟಲ್ ಮಾಸಿಕ ಪಾಸ್ (ಮುಂದಿನ ದಿನಗಳಲ್ಲಿ): ಆನ್‌ಲೈನ್‌ನಲ್ಲಿ ಬಸ್ ಪಾಸ್ ಬುಕ್ಕಿಂಗ್, ವಿತರಣೆ, ನಿರ್ವಹಣೆ ಹಾಗೂ QR ಕೋಡ್ ಆಧಾರಿತ ಡಿಜಿಟಲ್ ಪರಿಶೀಲನೆ ವ್ಯವಸ್ಥೆ ಜಾರಿಗೆ ಬರಲಿದೆ.

ವಾಟ್ಸಾಪ್ ಮೂಲಕವೇ KSRTC, NWKRTC, KKRTC ಟಿಕೆಟ್ ಬುಕ್ ಮಾಡಿ!

ಈಗ ಆಪ್ ಡೌನ್‌ಲೋಡ್ ಮಾಡಿಕೊಳ್ಳದೆಯೂ ವಾಟ್ಸಾಪ್ ಮೂಲಕ ಸುಲಭವಾಗಿ ಬಸ್ ಟಿಕೆಟ್ ಬುಕ್ ಮಾಡಬಹುದು. ಅಧಿಕೃತ ವಾಟ್ಸಾಪ್ ಸಂಖ್ಯೆ: +91 6364940880

ಟಿಕೆಟ್ ಬುಕ್ಕಿಂಗ್ ಮಾಡುವ ಸರಳ ಹಂತಗಳು:

ಸಂದೇಶ ಕಳುಹಿಸಿ: ಅಧಿಕೃತ ವಾಟ್ಸಾಪ್ ಸಂಖ್ಯೆ +91 6364940880 ಗೆ ಸಂದೇಶ ಕಳುಹಿಸುವ ಮೂಲಕ ಸಂವಾದ ಪ್ರಕ್ರಿಯೆ ಆರಂಭಿಸಿ.

ವಿವರ ಆಯ್ಕೆಮಾಡಿ: ಪ್ರಯಾಣದ ಆರಂಭಿಕ ಸ್ಥಳ, ತಲುಪಬೇಕಾದ ಸ್ಥಳ ಹಾಗೂ ಪ್ರಯಾಣದ ದಿನಾಂಕ ನಮೂದಿಸಿ ಲಭ್ಯವಿರುವ ಬಸ್‌ಗಳನ್ನು ಹುಡುಕಿ.

ಬಸ್ ಹಾಗೂ ಪ್ರಯಾಣಿಕರ ವಿವರ: ನಿಮ್ಮ ಆದ್ಯತೆಗೆ ತಕ್ಕಂತೆ ಬಸ್ ಆಯ್ಕೆ ಮಾಡಿ ಪ್ರಯಾಣಿಕರ ವಿವರಗಳನ್ನು ಭರ್ತಿ ಮಾಡಿ.

ಸುಲಭ ಪಾವತಿ: UPI, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ವಾಲೆಟ್‌ಗಳ ಮೂಲಕ ಹಣ ಪಾವತಿಸಿ.

ಇ-ಟಿಕೆಟ್ ಸ್ವೀಕರಿಸಿ: ಪಾವತಿ ಯಶಸ್ವಿಯಾದ ತಕ್ಷಣ ವಾಟ್ಸಾಪ್ ಹಾಗೂ ಇ-ಮೇಲ್‌ಗೆ ಇ-ಟಿಕೆಟ್ ಮತ್ತು ಬುಕ್ಕಿಂಗ್ ದೃಢೀಕರಣ ಸಂದೇಶ ಬರಲಿದೆ.

ವಾಟ್ಸಾಪ್‌ನಲ್ಲೇ ಟಿಕೆಟ್ ರದ್ದು (Cancellation) ಮಾಡುವ ಸೌಲಭ್ಯ : ವಾಟ್ಸಾಪ್ ಮೂಲಕ ಕಾಯ್ದಿರಿಸಿದ ಟಿಕೆಟ್‌ಗಳನ್ನು ಅದೇ ವಾಟ್ಸಾಪ್‌ನಲ್ಲಿ ಸುಲಭವಾಗಿ ರದ್ದುಗೊಳಿಸಬಹುದು.

ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಿ “Ticket Cancellation” ಆಯ್ಕೆಯನ್ನು ಆರಿಸಿಕೊಳ್ಳಿ.
ನಿಮ್ಮ PNR ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ ಬುಕ್ಕಿಂಗ್ ಸಮಯದಲ್ಲಿ ಪಡೆದ Transaction Password ನಮೂದಿಸುವ ಮೂಲಕ ಟಿಕೆಟ್ ರದ್ದುಗೊಳಿಸಬಹುದು.

ಸಹಾಯ ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
24×7 ಕರೆ ಕೇಂದ್ರ: 080-26252625 ಅಥವಾ AWATAR ಸೆಲ್: 7760990034 / 7760990035 (ಬೆಳಿಗ್ಗೆ 7.00 ರಿಂದ ರಾತ್ರಿ 10.00 ರವರೆಗೆ) ಸಂರ್ಕಿಸಿ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ‌ಡಾ. ಲತಾ ಟಿ.ಎಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

More articles

Latest article

Most read