ಪೌರ ಕಾರ್ಮಿಕರನ್ನು ಅವಮಾನಿಸಿದ ಕೃಷ್ಣ ಬೈರೇಗೌಡ ಕ್ಷಮೆ ಕೇಳಬೇಕು : AICCTU ರಾಜ್ಯ ಸಮಿತಿ ಆಗ್ರಹ

ಬೆಂಗಳೂರು : ಪೌರ ಕಾರ್ಮಿಕರಲ್ಲಿ ಬಹುತೇಕ ಕಾರ್ಮಿಕರು ದಲಿತ ಪೌರಕಾರ್ಮಿಕರಾಗಿದ್ದಾರೆ, ಅವರನ್ನು ಅವಮಾನಿಸಿದ ಸಚಿವ ಕೃಷ್ಣ ಬೈರೇಗೌಡ ತಕ್ಷಣವೇ ಕ್ಷಮೆ ಕೇಳಬೇಕೆಂದು ಎಐಸಿಸಿಟಿಯು ಆಗ್ರಹಿಸಿದೆ.

ನಗರಾಭಿವೃದ್ಧಿಯ ಹೆಸರಿನಲ್ಲಿ ನಗರದ ಸ್ವಚ್ಛತೆ, ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಜೀವನಕ್ಕಾಗಿ ಪ್ರತಿದಿನ ದುಡಿಯುತ್ತಿರುವ ಪೌರಕಾರ್ಮಿಕರನ್ನೇ ಅವಮಾನಿಸುವ ಹಾಗೂ ಅವರ ಘನತೆಗೆ ಚ್ಯುತಿ ಉಂಟುಮಾಡುವ ಮನೋಭಾವವನ್ನು ಎಐಸಿಸಿಟಿಯು ತೀವ್ರವಾಗಿ ಖಂಡಿಸಿದೆ.

ಇತ್ತೀಚೆಗೆ ಪೌರಕಾರ್ಮಿಕರೊಂದಿಗೆ ಸಚಿವ ಕೃಷ್ಣ ಬೈರೇಗೌಡ ಅವರು ನಡೆದುಕೊಂಡ ರೀತಿಯು ಅತ್ಯಂತ ಆಕ್ಷೇಪಾರ್ಹ ಮತ್ತು ಖಂಡನೀಯವಾಗಿದೆ. ಕಾರ್ಮಿಕರೊಂದಿಗೆ ಕನಿಷ್ಠ ಗೌರವ ಮತ್ತು ಮಾನವೀಯತೆಯಿಂದ ಮಾತನಾಡುವ ಬದಲು ಅಧಿಕಾರದ ದರ್ಪದಿಂದ ವರ್ತಿಸಿರುವುದು ಒಪ್ಪಲಾಗದು. ಸಚಿವರು ತಮ್ಮ ವರ್ತನೆ ಕುರಿತು ಸ್ಪಷ್ಟನೆ ನೀಡಿ, ಪೌರಕಾರ್ಮಿಕರ ಬಳಿ ಕ್ಷಮೆಯಾಚಿಸಬೇಕೆಂದು ಎಐಸಿಸಿಟಿಯು ಆಗ್ರಹಿಸುತ್ತದೆ.

ಪೌರಕಾರ್ಮಿಕರು ನಗರದ ಕಸವನ್ನು ಮಾತ್ರ ತೆರವುಗೊಳಿಸುವವರಲ್ಲ, ನಗರದ ನಾಗರಿಕ ಜೀವನವನ್ನು ಸಾಧ್ಯವಾಗಿಸುವ ಮುಂಚೂಣಿ ಶ್ರಮಿಕರು. ಅವರ ಪರಿಶ್ರಮವಿಲ್ಲದೆ ನಗರವನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿ ನಿರ್ವಹಿಸುವುದು ಸಾಧ್ಯವಿಲ್ಲ. ಇಂತಹ ಶ್ರಮಿಕರನ್ನು ಸಾರ್ವಜನಿಕವಾಗಿ ಗದರಿಸುವುದು, ಬೆದರಿಸುವುದು ಅಥವಾ ಅವಮಾನಿಸುವುದೇ ಆಡಳಿತದ ದಕ್ಷತೆ ಎಂದು ಭಾವಿಸುವುದು ಅತ್ಯಂತ ತಪ್ಪು.

ಪೌರಕಾರ್ಮಿಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ದಲಿತ ಸಮುದಾಯದ ಕಾರ್ಮಿಕರು ತೊಡಗಿಸಿಕೊಂಡಿದ್ದು, ಅವರು ಇಂದಿಗೂ ಸಾಮಾಜಿಕ ಕೀಳರಿಮೆ, ತಾರತಮ್ಯ ಮತ್ತು ಅವಮಾನಕಾರಿ ವರ್ತನೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಧಿಕಾರದಲ್ಲಿರುವವರು ಇನ್ನಷ್ಟು ಜವಾಬ್ದಾರಿಯಿಂದ ಮತ್ತು ಮಾನವೀಯತೆಯಿಂದ ವರ್ತಿಸಬೇಕಾಗಿದೆ.

ನಗರದ ಸಮಸ್ಯೆಗಳಿಗೆ ಪೌರಕಾರ್ಮಿಕರನ್ನೇ ಬಲಿಪಶುಗಳನ್ನಾಗಿ ಮಾಡುವ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ದ ಧೋರಣೆಯನ್ನು ಸರ್ಕಾರ ಕೈಬಿಡಬೇಕು. ಕಾರ್ಮಿಕರ ಮೇಲೆ ಆರೋಪ ಹೊರಿಸುವ ಮೊದಲು ಕಾರ್ಮಿಕರ ಕೊರತೆ, ಖಾಲಿ ಹುದ್ದೆಗಳು, ಗುತ್ತಿಗೆ ಪದ್ಧತಿ, ಕೆಲಸದ ಒತ್ತಡ, ವೇತನ ಪಾವತಿಯಲ್ಲಿ ವಿಳಂಬ, ಸುರಕ್ಷತಾ ಸೌಲಭ್ಯಗಳ ಕೊರತೆ ಮತ್ತು ಆಡಳಿತಾತ್ಮಕ ವೈಫಲ್ಯಗಳ ಕುರಿತು ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಕಾರ್ಮಿಕರಿಗೆ ವಾರದ ರಜೆ, ಕಾನೂನುಬದ್ಧ ರಜೆಗಳು, ಸಮಯಕ್ಕೆ ಸರಿಯಾಗಿ ವೇತನ, ಸುರಕ್ಷತಾ ಉಪಕರಣಗಳು, ಸಾಮಾಜಿಕ ಭದ್ರತೆ ಹಾಗೂ ಉದ್ಯೋಗ ಭದ್ರತೆಯನ್ನು ಖಾತರಿಪಡಿಸಬೇಕು. ಗುತ್ತಿಗೆ ಮತ್ತು ಹೊರಗುತ್ತಿಗೆ ಪದ್ಧತಿಯ ಮೂಲಕ ನಡೆಯುತ್ತಿರುವ ಶೋಷಣೆಯನ್ನು ಕೊನೆಗೊಳಿಸಿ, ಎಲ್ಲಾ ಕಾರ್ಮಿಕರನ್ನು ಖಾಯಂಗೊಳಿಸಿ, ನೇರ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು.

ದಕ್ಷತೆ ಎಂದರೆ ಕಾರ್ಮಿಕರನ್ನು ಗದರಿಸುವುದಲ್ಲ,ಕಾರ್ಮಿಕರ ಹಕ್ಕು, ಘನತೆ ಮತ್ತು ಭದ್ರತೆಯನ್ನು ಕಾಪಾಡಿಕೊಂಡು ನಗರವನ್ನು ವೈಜ್ಞಾನಿಕ ಹಾಗೂ ಮಾನವೀಯ ರೀತಿಯಲ್ಲಿ ನಿರ್ವಹಿಸುವುದು. ಆದ್ದರಿಂದ, ಪೌರಕಾರ್ಮಿಕರೊಂದಿಗೆ ಸಚಿವ ಕೃಷ್ಣ ಭೈರೇಗೌಡ ಅವರ ಇತ್ತೀಚಿನ ವರ್ತನೆಯನ್ನು ಎಐಸಿಸಿಟಿಯು ತೀವ್ರವಾಗಿ ಖಂಡಿಸುತ್ತದೆ. ಸಚಿವರು ಪೌರಕಾರ್ಮಿಕರ ಬಳಿ ಕ್ಷಮೆಯಾಚಿಸಬೇಕು. ನಗರಾಭಿವೃದ್ಧಿಯ ಹೆಸರಿನಲ್ಲಿ ಶ್ರಮಿಕರ ಘನತೆಯನ್ನು ತುಳಿಯುವ ಮನೋಭಾವವನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು AICCTU ರಾಜ್ಯ ಸಮಿತಿ ಒತ್ತಾಯಿಸಿದೆ.

More articles

Latest article

Most read