ನೇಪಾಳ : ನೇಪಾಳ ಮತ್ತು ಟಿಬೆಟ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 1,243ಕ್ಕೆ ಏರಿಕೆಯಾಗಿದೆ. ಈ ಹಿಮಾಲಯ ರಾಷ್ಟ್ರದಲ್ಲಿನ ಭೋಟೇಕೋಷಿ ನದಿಯ ಹಾದಿಯಲ್ಲಿರುವ ಸುರಂಗಗಳು ಹಾಗೂ ಭೂಗತ ವಿದ್ಯುತ್ ಕೇಂದ್ರಗಳಲ್ಲಿ ನೂರಾರು ಕಾರ್ಮಿಕರು ಸಿಕ್ಕಿಬಿದ್ದಿರಬಹುದು ಎಂದು ಶಂಕಿಸಿ ಪತ್ತೆಹಚ್ಚಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಕಳೆದ ವಾರದ ಹಠಾತ್ ಪ್ರವಾಹದ ನಂತರವೂ ನಾಪತ್ತೆಯಾಗಿರುವ ಸ್ಥಳೀಯರ ಕುಟುಂಬಗಳು ಸಾಂಕೇತಿಕ ಅಂತ್ಯಕ್ರಿಯೆಗಳನ್ನು ನಡೆಸುತ್ತಿರುವಂತೆಯೇ, ಈ ದುರಂತಕ್ಕೂ ಹವಾಮಾನ ಬದಲಾವಣೆಗೂ ಇರುವ ಸಂಬಂಧದ ವಿಷಯವನ್ನು ಅಂತರರಾಷ್ಟ್ರೀಯ ಸಮುದಾಯದ ಮುಂದೆ ಬಲವಾಗಿ ಪ್ರಸ್ತಾಪಿಸಬೇಕು ಎಂದು ಪ್ರಧಾನ ಮಂತ್ರಿ ಬಲೇಂದ್ರ ಶಾ ಹೇಳಿದ್ದಾರೆ.
ಭಾರತವು ಪ್ರವಾಹ ಪೀಡಿತ ನೇಪಾಳಕ್ಕೆ ಐದು ಟನ್‌ಗಿಂತಲೂ ಹೆಚ್ಚು ಅಗತ್ಯ ಔಷಧಗಳು ಹಾಗೂ 11 ಸದಸ್ಯರ ರಕ್ಷಣಾ ತಂಡವನ್ನು ಕಳುಹಿಸಿಕೊಟ್ಟಿದೆ. ಈ ವಿಮಾನವು ಆರು ಟನ್‌ಗಿಂತಲೂ ಹೆಚ್ಚು ರಕ್ಷಣಾ ಪರಿಕರಗಳೊಂದಿಗೆ 11 ಸದಸ್ಯರ ವಿಶೇಷ ತಂಡವನ್ನೂ ಹೊತ್ತೊಯ್ದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ.
ನೇಪಾಳ ದುರಂತಕ್ಕೆ ಹವಾಮಾನ ಬದಲಾವಣೆ ಕಾರಣವೇ? ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಪ್ರಸ್ತಾಪಿಸಲು ನೇಪಾಳ ಪ್ರಧಾನಿ ಆಗ್ರಹ