ರಾಜ್ಯಸಭೆ ಚುನಾವಣೆ‌ :ಮತದಾನ ಆರಂಭ, ಸುರೇಶ್ ಕುಮಾರ್ ‌ಮೊದಲ ಮತದಾನ

ರಾಜ್ಯಸಭೆ ಚುನಾವಣೆ‌ಗೆ ಮತದಾನ ಆರಂಭಗೊಂಡಿದ್ದು, ಬಿಜೆಪಿ ಶಾಸಕ ಸುರೇಶ್ ಕುಮಾರ್ ‌ಮೊದಲ ಮತದಾನ ಮಾಡಿದರು.ವಿಧಾನಸೌಧದ ಕೊಠಡಿ ಸಂಖ್ಯೆ 106 ರಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಬಿಜೆಪಿಯ ಸದಸ್ಯರು ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.

ಇನ್ನು ಮತದಾನದ ಹಿನ್ನಲೆಯಲ್ಲಿ ಮೂರು ಪಕ್ಷದ ಏಜೆಂಟ್ ಗಳನ್ನು ನಿಯೋಜನೆ ಮಾಡಲಾಗಿದೆ. ಕಾಂಗ್ರೆಸ್ ಏಜೆಂಟ್ ಗಳಾಗಿ ರಿಜ್ವಾನ್ ಹರ್ಷದ್, ಯುಬಿ ವೆಂಕಟೇಶ್, ನಾರಾಯಣ ಸ್ವಾಮಿ ಇದ್ದಾರೆ. ಬಿಜೆಪಿ ಏಜೆಂಟ್ ಆಗಿ ಸುನೀಲ್ ಕುಮಾರ್ ಹಾಗೂ ಅರವಿಂದ ಬೆಲ್ಲದ ಇದ್ದಾರೆ. ಜೆಡಿಎಸ್ ಏಜೆಂಟ್ ಆಗಿ ತಿಪ್ಪೇಸ್ವಾಮಿ ಇದ್ದಾರೆ.

ಇನ್ನು ಜೆಡಿಎಸ್ ಸದಸ್ಯರಾದ ಜಿಟಿ ದೇವೇಗೌಡ, ಸ್ವರೂಪ್, ಸಮೃದ್ಧಿ ಮಂಜುನಾಥ್ ಮತದಾನ ಮಾಡಿದರು. ಕಾಂಗ್ರೆಸ್ ಸದಸ್ಯರು ಇನ್ನಷ್ಟೇ ಮತದಾನ ಮಾಡಬೇಕಿದೆ.

More articles

Latest article

Most read