ಬೆಂಗಳೂರು: ಕರ್ನಾಟಕ ಚುನಾವಣಾ ಆಯೋಗವು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಒಟ್ಟು 1,07,96,339 ಮಂದಿ ಹೆಸರು ಕೈಬಿಡಲಾಗಿದೆ. ಶೇ. 20 ರಷ್ಟು ಮತಗಳು ಕಡಿಮೆಯಾಗಿವೆ.
ಈ ಬಗ್ಗೆ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಅನ್ಬುಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಈ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಕೆ ಮಾಡಲು ಸೆಪ್ಟೆಂಬರ್ 23ವರೆಗೂ ಕಾಲಾವಕಾಶ ನೀಡಲಾಗಿದೆ. ವಿವಿಧ ಕಾರಣಗಳಿಂದ ಡಿಲೀಟ್ ಆದವರು ಸಕಾರಣ ನೀಡಿ ಅಥವಾ ಫಾರಂ ನಂಬರ್ 6 ಅಥವಾ 8 ಅನ್ನು ಭರ್ತಿ ಮಾಡಿ ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು. ಅಕ್ಟೋಬರ್ 27 ರಂದು ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.
ಎಸ್‌ಐಆರ್‌ಗೆ 15,17,042 ಮಂದಿ ಗೈರಾಗಿದ್ದಾರೆ. 65,45,679 ಮತದಾರರು ಶಾಶ್ವತವಾಗಿ ಶಿಫ್ಟ್ ಆಗಿದ್ದಾರೆ. 16,39,864 ಮಂದಿ ಮೃತಪಟ್ಟಿದ್ದಾರೆ. 7,09,870 ಮಂದಿ ಒಂದಕ್ಕಿಂತ ಹೆಚ್ಚು ಮತದಾನ ಮಾಡಿದವರಾಗಿದ್ದಾರೆ. 3,83,884 ಮತದಾರರು ಇತರರಿದ್ದಾರೆ. 43,81,335 ಎಸ್‌ಐಆರ್ ಪ್ರಕ್ರಿಯೆ ನೋಟಿಸ್ ನೀಡಲಾಗಿದೆ
ಚುನಾವಣಾ ಆಯೋಗದ https://voters.eci.gov.in/download-eroll ಭೇಟಿ ನೀಡಿದರೆ ಅಲ್ಲಿ ಕರ್ನಾಟಕ ರಾಜ್ಯ ಆಯ್ಕೆ ಮಾಡಿಕೊಂಡ ಕೂಡಲೇ ಕರಡು ಮತದಾರರ ಪಟ್ಟಿ ಸಿಗುತ್ತದೆ. ಅಲ್ಲಿ ಜಿಲ್ಲೆ, ವಿಧಾನಸಭಾ ಕ್ಷೇತ್ರ ಆಯ್ಕೆ ಮಾಡಿಕೊಂಡರೆ ಬೂತ್ ವಾರು ಮತದಾರರ ಪಟ್ಟಿ ಪಿಡಿಎಫ್ ಸಿಗುತ್ತದೆ. ಪಿಡಿಎಫ್‌ನಲ್ಲಿ ಹೆಸರು ಸರ್ಚ್ ಮಾಡಬಹುದು. ಒಂದು ವೇಳೆ ಬೂತ್‌ನಲ್ಲಿ ಹೆಸರು ಕೈಬಿಟ್ಟಿದ್ದರೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ.

