ಗಾಂಧಿ ಹಂತಕ, ಭಯೋತ್ಪಾದಕ ಗೋಡ್ಸೆಯ ಕಟ್ಟರ್ ಅಭಿಮಾನಿಗೆ ಬಿಜೆಪಿ ಐಟಿ ಘಟಕದಲ್ಲಿ ಪದವಿ: ಪ್ರೀತಿ ಗಾಂಧಿ ಇನ್ನೇನು ಹೇಳಿದ್ದರು ಗೊತ್ತೆ?

ಹೊಸದಿಲ್ಲಿ: ಮಹಾತ್ಮ ಗಾಂಧೀಜಿ ಹತ್ಯೆ ಪ್ರಕರಣದ ಅಪರಾಧಿ ನಾಥೂರಾಮ್ ಗೋಡ್ಸೆ ಅವರನ್ನು ‘ಅಭಿಮಾನಿ’, ‘ರೋಲ್ ಮಾಡೆಲ್’ ಎಂದು ಕೊಂಡಾಡಿದ್ದ ಹಳೆಯ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗಾಗಿ ವಿವಾದಕ್ಕೊಳಗಾಗಿದ್ದ ಪ್ರೀತಿ ಗಾಂಧಿ ಇದೀಗ ಬಿಜೆಪಿಯ ಸಾಮಾಜಿಕ ಮಾಧ್ಯಮ ತಂಡದಲ್ಲಿ ಪ್ರಮುಖ ಜವಾಬ್ದಾರಿ ಪಡೆದಿದ್ದಾರೆ.

ಬಿಜೆಪಿ ಸಾಮಾಜಿಕ ಮಾಧ್ಯಮ ವಿಭಾಗದ ಹೊಸ ತಂಡವನ್ನು ಪ್ರಕಟಿಸಲಾಗಿದ್ದು, ದೀಪಕ್ ಮಾಸ್ಕೆ ಅವರ ನೇತೃತ್ವದ ತಂಡದಲ್ಲಿ ಪ್ರೀತಿ ಗಾಂಧಿ ಅವರನ್ನು ಸಹ-ಸಂಯೋಜಕರಾಗಿ ನೇಮಕ ಮಾಡಲಾಗಿದೆ. ಅಲೋಕ್ ಭಟ್, ಶಿವಾನಂದ ದ್ವಿವೇದಿ ಹಾಗೂ ಅರುಣ್ ಯಾದವ್ ಸೇರಿದಂತೆ ಹಲವರಿಗೂ ತಂಡದಲ್ಲಿ ಜವಾಬ್ದಾರಿ ನೀಡಲಾಗಿದೆ.

ಮಹಾರಾಷ್ಟ್ರ ಮೂಲದ ಪ್ರೀತಿ ಗಾಂಧಿ ಹಲವು ವರ್ಷಗಳಿಂದ ಬಿಜೆಪಿ ಪರ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದವರು. ಆದರೆ, ಇದೀಗ ಅವರ ಹೊಸ ಜವಾಬ್ದಾರಿಯ ಬೆನ್ನಲ್ಲೇ ಹಲವು ವರ್ಷಗಳ ಹಿಂದಿನ ಅವರ ಎಕ್ಸ್‌ ಪೋಸ್ಟ್‌ಗಳು ಮತ್ತೆ ಮುನ್ನೆಲೆಗೆ ಬಂದಿವೆ.
2012ರ ಅಕ್ಟೋಬರ್ 13ರಂದು ಈಕೆ,“Im a huge huge huge Nathuram Godse fan!! Big time!!” “ನಾನು ನಾಥೂರಾಮ್ ಗೋಡ್ಸೆಯ ಬಹುದೊಡ್ಡ, ಬಹುದೊಡ್ಡ, ಬಹುದೊಡ್ಡ ಅಭಿಮಾನಿ!! ತುಂಬಾ ದೊಡ್ಡ ಅಭಿಮಾನಿ!!” ಎಂದು ಬರೆದುಕೊಂಡಿದ್ದರು.

2013ರ ಫೆಬ್ರವರಿ 22ರಂದು ಮಾಡಿದ್ದರೆನ್ನಲಾದ ಮತ್ತೊಂದು ಪೋಸ್ಟ್‌ನಲ್ಲಿ:“We need a 1000 Nathuram Godse’s today!!! India misses him!!!” “ಇಂದು ನಮಗೆ 1,000 ನಾಥೂರಾಮ್ ಗೋಡ್ಸೆಗಳು ಬೇಕು!!! ಭಾರತ ಅವರನ್ನು ಕಳೆದುಕೊಂಡಿದೆ!!!” ಎಂದು ಬರೆದಿದ್ದರು.

2012ರ ಸೆಪ್ಟೆಂಬರ್ 5ರಂದು:“’m also a Nathuram Godse follower!!! :)” “ನಾನೂ ನಾಥೂರಾಮ್ ಗೋಡ್ಸೆಯ ಅನುಯಾಯಿ!!! :)” ಎಂದು ಮತ್ತೊಮ್ಮೆ ಘೋಷಿಸಿಕೊಂಡಿದ್ದರು.

2012ರ ಆಗಸ್ಟ್ 11ರಂದು “MISSING YOU EVEN MORE TODAY, NATHURAM GODSE!! #CST #AzadMaidan” “ಇಂದು ನಿನ್ನನ್ನು ಇನ್ನಷ್ಟು ಹೆಚ್ಚಾಗಿ ನೆನಪಿಸಿಕೊಳ್ಳುತ್ತಿದ್ದೇನೆ, ನಾಥೂರಾಮ್ ಗೋಡ್ಸೆ!! #CST #AzadMaidan” ಎಂದು ಬರೆದಿದ್ದರು.

ಇನ್ನು 2011ರ ನವೆಂಬರ್ 28ರಂದು ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್‌ ಒಂದರಲ್ಲಿ “My role model is Nathuram Godse!!! Any problem??!!” “ನನ್ನ ರೋಲ್ ಮಾಡೆಲ್ ನಾಥೂರಾಮ್ ಗೋಡ್ಸೆ!!! ಏನಾದರೂ ಸಮಸ್ಯೆ ಇದೆಯೇ??!!” ಎಂದು ಹೇಳಿಕೊಂಡಿದ್ದರು.

ಈ ಹಳೆಯ ಪೋಸ್ಟ್‌ಗಳ ಸ್ಕ್ರೀನ್‌ಶಾಟ್‌ಗಳು ಹಲವು ವರ್ಷಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಆದರೆ, ಇದೀಗ ಪ್ರೀತಿ ಗಾಂಧಿ ಅವರಿಗೆ ಬಿಜೆಪಿಯ ಸಾಮಾಜಿಕ ಮಾಧ್ಯಮ ವಿಭಾಗದಲ್ಲಿ ಅಧಿಕೃತ ಜವಾಬ್ದಾರಿ ನೀಡಿರುವ ಹಿನ್ನೆಲೆಯಲ್ಲಿ ಅವು ಮತ್ತೆ ಚರ್ಚೆಗೆ ಬಂದಿವೆ.

ನೇಮಕಾತಿ ಘೋಷಣೆಯ ಬಳಿಕ ಅವರ ಎಕ್ಸ್‌ ಖಾತೆ ಅಲಭ್ಯವಾಗಿರುವುದೂ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದೆ. ಪ್ರೀತಿ ಗಾಂಧಿಯ ಈ ಖಾತೆ ಸದ್ಯಕ್ಕೆ ಡಿ ಆಕ್ಟಿವೇಟ್‌ ಆಗಿದೆ.

ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಅವರನ್ನು ‘ಅಭಿಮಾನಿ’, ‘ರೋಲ್ ಮಾಡೆಲ್’ ಹಾಗೂ ‘ಅನುಯಾಯಿ’ ಎಂದು ಬಣ್ಣಿಸುವಂತಹ ಹೇಳಿಕೆಗಳನ್ನು ಮಾಡಿದ್ದರೆನ್ನಲಾದ ವ್ಯಕ್ತಿಗೆ ಬಿಜೆಪಿಯ ಸಾಮಾಜಿಕ ಮಾಧ್ಯಮ ತಂಡದಲ್ಲಿ ಪ್ರಮುಖ ಜವಾಬ್ದಾರಿ ನೀಡಿರುವುದು ಇದೀಗ ರಾಜಕೀಯ ವಲಯದಲ್ಲಿ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಿಶೇಷವಾಗಿ ಸಾಮಾಜಿಕ ಮಾಧ್ಯಮವನ್ನು ರಾಜಕೀಯ ಸಂದೇಶ, ಪ್ರಚಾರ ಹಾಗೂ ಸಾರ್ವಜನಿಕ ಅಭಿಪ್ರಾಯ ರೂಪಿಸುವ ಪ್ರಮುಖ ವೇದಿಕೆಯಾಗಿ ಬಳಸುತ್ತಿರುವ ಬಿಜೆಪಿಯಲ್ಲಿ ಇಂತಹ ಹಿನ್ನೆಲೆಯುಳ್ಳ ವ್ಯಕ್ತಿಗೆ ಪ್ರಮುಖ ಜವಾಬ್ದಾರಿ ನೀಡಿರುವುದು ಪಕ್ಷದ ನಿಲುವಿನ ಕುರಿತ ಚರ್ಚೆಗೂ ಕಾರಣವಾಗಿದೆ.

More articles

Latest article

Most read