ಕಾವೇರಿ ವನ್ಯಧಾಮ ಶೂಟೌಟ್‌: ಜಪ್ತಿ ಮಾಡಲಾದ ವಸ್ತುಗಳೇ ಅನುಮಾನ ಹುಟ್ಟಿಸುತ್ತಿವೆ!

ಚಾಮರಾಜನಗರ ಆ.17: ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ನಡೆದ ಮೂವರ ಶೂಟೌಟ್‌ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಘಟನಾ ಸ್ಥಳದಲ್ಲಿ ಅರಣ್ಯಾಧಿಕಾರಿಗಳು ಜಪ್ತಿ ಮಾಡಿದ್ದಾರೆ ಎನ್ನಲಾದ ವಸ್ತುಗಳು ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿವೆ. ಮೂವರು ಬೇಟೆಗಾರರು ಎಂದು ಅರಣ್ಯ ಇಲಾಖೆ ಹೇಳುತ್ತಿರುವ ಹಿನ್ನೆಲೆಯಲ್ಲಿ, ಘಟನಾ ಸ್ಥಳದಲ್ಲಿ ದೊರೆತ ವಸ್ತುಗಳು ಮತ್ತು ಅವುಗಳ ಸ್ವರೂಪದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳು ಎದ್ದಿವೆ.

ಘಟನಾ ಸ್ಥಳದಿಂದ ಮೊಬೈಲ್‌ ಫೋನ್‌ಗಳು, ಚೂರಿ, ಚಾಕು, ಮಚ್ಚು ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಆದರೆ ಇವುಗಳ ಜೊತೆಗೆ ಪ್ಯಾರಗಾನ್‌ ಕಂಪನಿಯ ಹೊಸ ಚಪ್ಪಲಿಗಳ ಜೋಡಿಯೂ ಪತ್ತೆಯಾಗಿರುವುದು ಪ್ರಕರಣದಲ್ಲಿ ಕುತೂಹಲ ಮೂಡಿಸಿದೆ. ವಿಶೇಷವೆಂದರೆ, ಆ ಚಪ್ಪಲಿಗಳ ಮೇಲೆ ಇದ್ದ ಸ್ಟಿಕ್ಕರ್‌ ಕೂಡ ಕಳಚಿರಲಿಲ್ಲ ಎನ್ನಲಾಗಿದ್ದು, ಚಪ್ಪಲಿಯನ್ನು ಧರಿಸಿರುವ ಯಾವುದೇ ಗುರುತುಗಳೂ ಕಂಡುಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಚಪ್ಪಲಿಗಳು ಸ್ವಲ್ಪವೂ ಕೊಳೆಯಾಗಿರಲಿಲ್ಲ ಎನ್ನಲಾಗಿದ್ದು, ಕಾಡಿನೊಳಗೆ ಬೇಟೆಗೆ ತೆರಳಿದ್ದರೆಂದು ಹೇಳಲಾಗುತ್ತಿರುವ ವ್ಯಕ್ತಿಗಳ ಬಳಿ ಇಂಥ ಹೊಸ, ಬಳಸದ ಚಪ್ಪಲಿಗಳು ಹೇಗೆ ಬಂದವು ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ.

ಕಾಡಿನೊಳಗೆ ಬೇಟೆಗೆ ತೆರಳಿದ್ದ ವ್ಯಕ್ತಿಗಳು ಗಂಟೆಗಟ್ಟಲೆ ಅರಣ್ಯ ಪ್ರದೇಶದಲ್ಲಿ ಸಂಚರಿಸಿದ್ದರೆ, ಅವರ ಕಾಲಿಗೆ ಇದ್ದ ಚಪ್ಪಲಿಗಳ ಮೇಲೆ ಮಣ್ಣು, ಧೂಳು ಅಥವಾ ಕಾಡಿನ ಗುರುತುಗಳಿರಬೇಕಲ್ಲವೇ ಎಂಬ ಪ್ರಶ್ನೆ ಸ್ಥಳೀಯರಿಂದ ಕೇಳಿಬರುತ್ತಿದೆ. ಹೊಸ ಚಪ್ಪಲಿಗಳು, ಅವುಗಳ ಮೇಲಿನ ಸ್ಟಿಕ್ಕರ್‌ ಹಾಗೆಯೇ ಇರುವುದು ಮತ್ತು ಬಳಕೆಯ ಯಾವುದೇ ಗುರುತು ಕಾಣದಿರುವುದು ಪ್ರಕರಣದ ತನಿಖೆಯಲ್ಲಿ ಪ್ರಮುಖ ಅಂಶವಾಗಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದರ ಜೊತೆಗೆ, ಮೊಬೈಲ್‌ ಫೋನ್‌ಗಳು, ಚೂರಿ, ಚಾಕು, ಮಚ್ಚು ಸೇರಿದಂತೆ ಜಪ್ತಿ ಮಾಡಿರುವ ಪ್ರತಿಯೊಂದು ವಸ್ತುವಿನ ಬಗ್ಗೆ ವೈಜ್ಞಾನಿಕ ತನಿಖೆ ನಡೆಸಬೇಕಾದ ಅಗತ್ಯವಿದೆ. ಈ ವಸ್ತುಗಳು ಯಾರಿಗೆ ಸೇರಿದ್ದವು? ಅವುಗಳ ಮೇಲೆ ಯಾರ ಬೆರಳಚ್ಚುಗಳಿವೆ? ಮೊಬೈಲ್‌ಗಳಲ್ಲಿನ ಕೊನೆಯ ಕರೆಗಳು ಮತ್ತು ಸ್ಥಳದ ಮಾಹಿತಿಯೇನು? ಜಪ್ತಿ ವಸ್ತುಗಳು ನಿಜವಾಗಿಯೂ ಮೃತರದ್ದೇ? ಅವುಗಳನ್ನು ಘಟನಾ ಸ್ಥಳದಿಂದಲೇ ವಶಪಡಿಸಿಕೊಳ್ಳಲಾಗಿದೆಯೇ? ಎಂಬ ಪ್ರಶ್ನೆಗಳಿಗೆ ತನಿಖಾಧಿಕಾರಿಗಳು ಉತ್ತರ ಕಂಡುಕೊಳ್ಳಬೇಕಿದೆ.

More articles

Latest article

Most read