ನೂತನ ಸಚಿವರ ತಂಡದೊಂದಿಗೆ ಸದನ : ಡಿ.ಕೆ. ಶಿವಕುಮಾರ್ ಸಿಎಂ ಆದ ಬಳಿಕ ಮೊದಲ ಅಧಿವೇಶನ ಆರಂಭ  

ಬೆಂಗಳೂರು : ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಿದೆ.
ವಿಧಾನಮಂಡಲ ಮುಂಗಾರು ಅಧಿವೇಶನ  ಒಟ್ಟು ಹತ್ತು ದಿನಗಳ ಕಾಲ ಅಂದರೆ ರಜಾ ದಿನಗಳನ್ನು ಹೊರತುಪಡಿಸಿ ಆ.27ರವರೆಗೆ ನಡೆಯುತ್ತದೆ.
ವಿಧಾನ ಪರಿಷತ್ತಿಗೆ ಪುಟ್ಟಣ್ಣ ಮತ್ತು ವಿಧಾನಸಭೆಗೆ ಟಿ.ಬಿ. ಜಯಚಂದ್ರ ಅವರು ಹಂಗಾಮಿ ಸಭಾಪತಿಯಾಗಿದ್ದು, ಅವರೇ ಸಭೆಯನ್ನು ನಡೆಸಲಿದ್ದಾರೆ.

ಸದನಕ್ಕೆ ಹೊಸ ಸಚಿವರನ್ನು ಪರಿಚಯ ಮಾಡಿಕೊಡುವಂತೆ ಸ್ಪೀಕರ್ ಜಯಚಂದ್ರ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸೂಚಿಸಿದರು. ಆದರೆ, “ಇಂದು ಮೊದಲು ಸಂತಾಪ ಸೂಚನಾ ಕಲಾಪವನ್ನು ನಡೆಸಿ, ನಾಳೆ ನೂತನ ಸಚಿವರ ಪರಿಚಯ ಮಾಡಿಕೊಡಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಮನವಿ ಮಾಡಿದರು. ವಿಪಕ್ಷಗಳ ಈ ಭಾವನೆಯನ್ನು ಗೌರವಿಸುವುದಾಗಿ ಮುಖ್ಯಮಂತ್ರಿಗಳು ಸಮ್ಮತಿಸಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸೇರಿದಂತೆ ಸಚಿವ ಸಂಪುಟ ಸಚಿವರ ಸಮ್ಮುಖದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸಲೀಂ ಅಹ್ಮದ್ ಅವರು ವಿಧಾನ ಪರಿಷತ್ ಕಾರ್ಯದರ್ಶಿ ಜ್ಯೋತಿ ಅವರಿಗೆ ಹಾಗೂ ವಿಧಾನ ಸಭೆಯ ಸಭಾಧ್ಯಕ್ಷರ ಸ್ಥಾನಕ್ಕೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಜಿ.ಎಸ್.ಪಾಟೀಲ್ ಅವರು ವಿಧಾನ ಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ನಾಮಪತ್ರಗಳನ್ನು ಸಲ್ಲಿಸಿದರು.

ಪ್ರತಿಪಕ್ಷಗಳು ಸಜ್ಜು : ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆ ಇರುವುದರಿಂದ ಬರಗಾಲ ಆವರಿಸಿದೆ. ದಕ್ಷಿಣ ಒಳನಾಡಿನಲ್ಲಿ ಶೇ.36, ಉತ್ತರ ಒಳನಾಡಿನಲ್ಲಿ ಶೇ.27, ಮಲೆನಾಡು ಭಾಗದಲ್ಲಿ ಶೇ.33 ಮತ್ತು ಕರಾವಳಿಯಲ್ಲಿ ಶೇ.23ರಷ್ಟು ಮಳೆ ಕೊರತೆಯಾಗಿದೆ. ರಾಜ್ಯಕ್ಕೆ ಒಟ್ಟಾರೆ ಜೂ.1ರಿಂದ ಆ.12ರವರೆಗೆ 570 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 406 ಮಿ.ಮೀ. ಮಳೆಯಾಗಿ ಶೇ.29ರಷ್ಟು ಮಳೆ ಕೊರತೆಯಾಗಿದೆ. ರೈತಾಪಿ ವರ್ಗಕ್ಕೆ ಸಕಾಲಕ್ಕೆ ಮಳೆ ಬೀಳದೆ ಬೆಳೆಗಳು ಹಾಳಾಗಿವೆ. ಬರ ಸಮೀಕ್ಷೆ ರಾಜ್ಯಾದ್ಯಂತ ವೇಗವಾಗಿ ನಡೆಯುತ್ತಿದೆ. ಪರಿಹಾರಕ್ಕಾಗಿ ರೈತರು ಮತ್ತು ರೈತ ಸಂಘಟನೆಗಳು ಮೊರೆ ಇಟ್ಟಿವೆ.

ಇಂತಹ ಸಂದರ್ಭದಲ್ಲಿ ವಿಧಾನಮಂಡಲ ಅಧಿವೇಶನ ಪ್ರಾರಂಭವಾದ್ದು, ಸರ್ಕಾರದ ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ. ಬರ ಪರಿಹಾರಕ್ಕೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಕೇವಲ ಉಪಚಾರದ ಮಾತುಗಳನ್ನಷ್ಟೇ ಆಡುತ್ತಿದೆ ಎಂದು ಬಿಜೆಪಿ ಮತ್ತು ಜೆಡಿಎಸ್‌ ಈಗಾಗಲೇ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ನಿರೀಕ್ಷೆಯಿದೆ. 

ವಾಲ್ಮೀಕಿ ನಿಗಮ ಹಗರಣದಲ್ಲಿ ಬಂಧನಕ್ಕೆ ಒಳಗಾಗಿ, ಜಾಮೀನು ಮೇಲೆ ಬಿಡುಗಡೆ ಆಗಿರುವ ಸಚಿವ ಬಿ.ನಾಗೇಂದ್ರ ಅವರು ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿದೆ. ಇದನ್ನೇ ಈ ಬಾರಿಯ ಪ್ರಮುಖ ಅಸ್ತ್ರವಾಗಿಸಲು ಮುಂದಾಗಿದ್ದು, ನಾಗೇಂದ್ರ ರಾಜೀನಾಮೆ ನೀಡುವವರೆಗೂ ಅಹೋರಾತ್ರಿ ಧರಣಿ ನಡೆಸುವುದಾಗಿ ಹೇಳಿದೆ.

ವಿಧಾನಪರಿಷತ್ತಿನಲ್ಲಿ ಯತೀಂದ್ರ ಸಿದ್ದರಾಮಯ್ಯ ಸಭಾನಾಯಕರಾಗಿ ನೇಮಕ
ವಿಧಾನಪರಿಷತ್ತಿನ ನೂತನ ಸಭಾನಾಯಕರಾಗಿ ನೇಮಕಗೊಂಡಿರುವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ವಿಪಕ್ಷ ಸದಸ್ಯರ ಬಳಿಗೆ ತೆರಳಿ ಕುಶಲೋಪಚಾರಿ ಮಾತನಾಡಿ ಅಭಿನಂದನೆಗಳನ್ನು ಸ್ವೀಕರಿಸಿದರು. ಪರಿಷತ್ ವಿಪಕ್ಷ ನಾಯಕರ ಪಕ್ಕದಲ್ಲೇ ಬಸವರಾಜ ಹೊರಟ್ಟಿ ಅವರ ಆಸನವನ್ನು ವ್ಯವಸ್ಥೆಗೊಳಿಸಲಾಗಿತ್ತು. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನೂತನವಾಗಿ ಆಯ್ಕೆಯಾದ ಪರಿಷತ್ ಸದಸ್ಯರಾದ ವಿನಯ್ ಕಾರ್ತಿಕ್, ಮಳವಳ್ಳಿ ಶಿವಣ್ಣ, ರಘು ಕೌಟಿಲ್ಯ, ಲಿಂಗರಾಜ್ ಪಾಟೀಲ್ ಹಾಗೂ ಪಿ.ವಿ. ಮೋಹನ್ ಪರಸ್ಪರ ಶುಭಾಶಯ ಕೋರಿಕೊಂಡರು.

More articles

Latest article

Most read